For Quick Alerts
  ALLOW NOTIFICATIONS  
  For Daily Alerts

  ಲಿಪ್ ಲಾಕ್ ಮಾಡಿ ಅನುಪಮಾ ಪರಮೇಶ್ವರನ್ ಪಡೆದರು ದೊಡ್ಡ ಮೊತ್ತ!

  |

  ನಟಿ ಅನುಪಮಾ ಪರಮೇಶ್ವರ್‌ ಅವರು ಸದ್ಯ 'ರೌಡಿ ಬಾಯ್ಸ್' ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಚಿತ್ರ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬಂದಿದೆ. ಚಿತ್ರ ರಿಲೀಸ್‌ ಬಳಿಕ ತಕ್ಕ ಮಟ್ಟಿಗೆ ಬಾಕ್ಸಾಫೀಸ್ ಕಲೆಕ್ಷನ್‌ ಮಾಡುತ್ತಾ ಸಾಗಿದೆ. ಆದರೆ ಈ ಚಿತ್ರದ ಬಗ್ಗೆ ಹೆಚ್ಚಾಗಿ ಚರ್ಚೆ ಆಗುತ್ತಿರುವುದು ಮಾತ್ರ ಅನುಪಮಾ ಪರಮೇಶ್ವರ್ ಅವರ ಲಿಪ್ ಲಾಕ್ ದೃಶ್ಯ.

  ಅನುಪಮಾ ಪರಮೇಶ್ವರ್ ಅವರು ಈ ಚಿತ್ರದಲ್ಲಿ ನಾಯಕ ನಟನೊಂದಿಗೆ ಲಿಪ್‌ಲಾಕ್‌ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅನುಪಮಾ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೊಸ ನಾಯಕನ ಜೊತೆಗೆ ಲಿಪ್ ಕಿಸ್ಸಿಂಗ್ ದೃಶ್ಯ ಮಾಡಿದ್ದಾರೆ. ಹಾಗಾಗಿ ಅನುಪಮಾ ಅವರ ಬಗ್ಗೆ ಹೆಚ್ಚಾಗಿ ಚರ್ಚೆ ಆಗುತ್ತಿದೆ.

  ಸಿನಿಮಾ ರಿಲೀಸ್‌ಗೂ ಮುನ್ನವೇ ಈ ಕಿಸ್ಸಿಂಗ್ ದೃಶ್ಯದ ಒಂದು ಫೋಟೊ ಲೀಕ್ ಆಗಿತ್ತು. ನಂತರ ಸಿನಿಮಾದಲ್ಲಿ ಈ ಜೋಡಿಯನ್ನು ನೋಡಿದವರು ಮೆಚ್ಚಿಕೊಂಡಿದ್ದಾರೆ. ಅನುಪಮಾ ಲಿಪ್ ಲಾಕ್‌ ದೃಶ್ಯದಲ್ಲಿ ಚೆನ್ನಾಗಿಯೇ ಅಭಿನಯಿಸಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.

  ಚಿತ್ರದಲ್ಲಿ ಈ ರೀತಿ ಕಿಸ್ಸಿಂಗ್‌ ದೃಶ್ಯ ಇರುವ ಕಾರಣಕ್ಕೆ ಅನುಪಮಾ ಅವರು ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದಾರಂತೆ. ಮುತ್ತಿನ ದೃಶ್ಯ ಮಾಡುವ ಸಲುವಾಗಿ ಒಟ್ಟು 50 ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರಂತೆ ಅನುಪಮಾ ಪರಮೇಶ್ವರ್.

  ಇದೇನು ಅನುಪಮಾ ಅವರು 50 ಲಕ್ಷ ಪಡೆದಿದ್ದೇ ಹೆಚ್ಚಾಯಿತಾ ಅನಿಸಬಹುದು. ಆದರೆ ಇತ್ತೀಚೆಗೆ ಅನುಪಮಾ ಅವರ ಸಿನಿಮಾಗಳು ಫ್ಲಾಪ್ ಲಿಸ್ಟ್‌ ಸೇರಿವೆ. ಹಾಗಾಗಿ ಅನುಪಮಾ ಅವರಿಗೆ ಅಷ್ಟಾಗಿ ಬೇಡಿಕೆ ಸೃಷ್ಟಿ ಆಗಿರಲಿಲ್ಲ. ಈ ಚಿತ್ರಕ್ಕೆ ಅವರು 50 ಲಕ್ಷ ರೂ ಚಾರ್ಜ್ ಮಾಡಿರುವುದೇ ಹೆಚ್ಚು ಎನ್ನಲಾಗುತ್ತಿದೆ. ಬಹುಶಃ ಈ ಚಿತ್ರದ ಬಳಿಕ ಅನುಪಮಾ ಅವರಿಗೆ ಒಂದಷ್ಟು ದೊಡ್ಡ ಚಿತ್ರಗಳ ಆಫರ್ ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

  ಅನುಪಮಾ ಅವರು ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ, ಆಕೆಗೆ ಕೆಲವು ಸಿನಿಮಾಗಳ ಆಫರ್ ತಪ್ಪಿ ಹೋಗಿವೆ ಅಂತೆ. ಈ ಹಿಂದಿನ ಚಿತ್ರಗಳಲ್ಲೂ ಕೂಡ ಅನುಪಮಾ ಅಷ್ಟೇನು ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿಯೇ ಈ ಮುತ್ತಿನ ದೃಶ್ಯ ವೈರಲ್ ಆಗಿತ್ತು.

  English summary
  Actress Anupama Parameswaran Charge 50 Lakh Rupees For Kissing Scene,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X