»   » 'ಸಿದ್ದಾರ್ಥ' ನಾಯಕಿ ಅಪೂರ್ವ ಸಸ್ಯಹಾರಿ ಆಗಿದ್ದು ಹೇಗೆ?

'ಸಿದ್ದಾರ್ಥ' ನಾಯಕಿ ಅಪೂರ್ವ ಸಸ್ಯಹಾರಿ ಆಗಿದ್ದು ಹೇಗೆ?

Posted By:
Subscribe to Filmibeat Kannada

ಅದು 'ಸಿದ್ಧಾರ್ಥ' ಸಕ್ಸಸ್ ಸಂಭ್ರಮದ ಕ್ಷಣ. ಪ್ರತಿಷ್ಟಿತ ಅಣ್ಣಾವ್ರ ಬ್ಯಾನರ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿರುವ ನಟಿ ಅಪೂರ್ವ ಖುಷಿಗೆ ಅಂದು ಪಾರವೇ ಇರಲ್ಲಿಲ್ಲ. ಅಭಿಮಾನಿಗಳು ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದ್ದನ್ನ ನೋಡಿ ಅಪೂರ್ವಗೆ ವರ್ಷಗಳ ಕನಸು ನನಸಾದ ಸಂತಸ.

ನಮ್ಮ ಪಕ್ಕದ ಮನೆಯ ಪುಟ್ಟ ಹುಡುಗಿಯಂತೆ ಕಾಣುವ ಅಪೂರ್ವ ವಯಸ್ಸಿನ್ನೂ ಕೇವಲ 19 ವರ್ಷ. ಹತ್ತನೇ ತರಗತಿ ಓದುವಾಗಲೇ, ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ 'ಅಪೂರ್ವ', ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತನ್ನದೇ ಆದ ಛಾಪನ್ನ ಮೂಡಿಸುತ್ತಿದ್ದಾಳೆ.


Actress Apoorva Arora

ಕನ್ನಡದಲ್ಲಿ 'ಮಾಸ್ಟರ್ ಕಿಶನ್' ಜೊತೆ 'ಟೀನೇಜ್' ಚಿತ್ರದಲ್ಲಿ ಹೀಗೆ ಬಂದು ಹಾಗೆ ಹೋಗಿದ್ದ ಅಪೂರ್ವ, 'ಸಿದ್ದಾರ್ಥ' ಕೃಪೆಯಿಂದ ಕನ್ನಡಿಗರ ಮನೆಮಾತಾಗಿದ್ದಾಳೆ. ಇಂತಿಪ್ಪ ಅಪೂರ್ವಳ ಇಷ್ಟ ಕಷ್ಟಗಳನ್ನ ಕೇಳಿದ್ರೆ, ಮಾಂಸಾಹಾರಿಯಾಗಿದ್ದರೂ, ಅಪೂರ್ವ ಅಪ್ಪಟ ಸಸ್ಯಹಾರಿಯಂತೆ!


ನಾನ್ ವೆಜ್ ತಿನ್ನೋಕೆ ತುದಿಗಾಲಲ್ಲಿ ನಿಲ್ಲುವ ಅನೇಕರ ಮಧ್ಯೆ ಅಪೂರ್ವ ಮಾಂಸಾಹಾರವನ್ನ ತ್ಯಜಿಸಿದ್ದು ಯಾಕೆ ಅಂದ್ರೆ, ದೆಹಲಿಯಲ್ಲಿ ತಾವು ಓದಿದ ಸ್ಕೂಲಿನ ಕಥೆ ಹೇಳ್ತಾರೆ. ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]


Actress Apoorva Arora

'ಪ್ರಾಣಿ ಹಿಂಸೆ ಮಹಾಪಾಪ' ಅಂತ ಚಿಕ್ಕವಯಸ್ಸಲ್ಲಿ ತಮ್ಮ ಟೀಚರ್ ಹೇಳಿಕೊಟ್ಟ ಪಾಠದಿಂದ ಅಪೂರ್ವ ಪರಿಪೂರ್ಣ ಸಸ್ಯಹಾರಿಯಾಗಿ ಬದಲಾಗಿದ್ದಾರಂತೆ. ಮನೆಯಲ್ಲಿ ಕುಟುಂಬದವರು ಮಾಂಸಾಹಾರವನ್ನ ತಿಂದರೂ, ಅಪೂರ್ವ ಮಾತ್ರ ಮುಟ್ಟುವುದಿಲ್ಲವಂತೆ. ಯಾವುದೇ ಪಾರ್ಟಿ, ಫಂಕ್ಷನ್ ಗೆ ಹೋದರೂ ಅಪೂರ್ವ ಚಾಯ್ಸ್ ಓನ್ಲಿ ವೆಜ್.


ಇಂದು ಓದಿದ್ದನ್ನ ನಾಳೆ ಮರೆತುಬಿಡುವ ಅದೆಷ್ಟೋ ವಿದ್ಯಾರ್ಥಿಗಳ ನಡುವೆ, ಒಂದು ವಾಕ್ಯದಿಂದ ಅಪೂರ್ವ ಮನಸ್ಸು ಮಾಡಿ ಸಸ್ಯಹಾರಿ ಆಗಿದ್ದಾರೆ ಅಂದ್ರೆ ಅವರ ಶ್ರದ್ಧೆಗೆ ಮೆಚ್ಚಲೇಬೇಕು ಅಲ್ಲವೇ. (ಫಿಲ್ಮಿಬೀಟ್ ಕನ್ನಡ)

English summary
Actress Apoorva Arora, who shot fame through Kannada movie 'Siddhartha' is Vegetarian by choice. Here is the real story behind Apoorva being Vegetarian.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada