For Quick Alerts
  ALLOW NOTIFICATIONS  
  For Daily Alerts

  'ಕಚಡ' ಎಂದು ಸೈಲೆಂಟ್ ಆದ ಅವಂತಿಕಾ : ಕ್ಷಮೆ ಕೇಳಲಿಲ್ಲ 'ರಾಜರಥ'ದ ರಾಣಿ

  By Naveen
  |

  ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ 'ರಾಜರಥ' ಚಿತ್ರತಂಡ ಎಡವಟ್ಟು ಮಾಡಿಕೊಂಡಿತ್ತು. ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ 'ಕಚಡ ನನ್ ಮಕ್ಳು'' ಎಂದು ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಮತ್ತು ನಟಿ ಅವಂತಿಕಾ ಶೆಟ್ಟಿ ಬೈದಿದ್ದರು. ಇದೀಗ ಈ ವಿಷಯ ದೊಡ್ಡ ವಿವಾದ ಸೃಷ್ಟಿ ಮಾಡಿತ್ತು.

  ಸಾಮಾಜಿಕ ಜಾಲತಾಣದಲ್ಲಿ ಅನೂಪ್, ನಿರೂಪ್, ಅವಂತಿಕಾ ಆಡಿರುವ ಮಾತು ವೈರಲ್ ಆಗಿತ್ತು. ಸಾಕಷ್ಟು ಜನರು ಈ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಸಹ ಭಂಡಾರಿ ಸಹೋದರರಿಗೆ ಎಚ್ಚರಿಕೆ ನೀಡಿದ್ದರು.

  ಕನ್ನಡಿಗರನ್ನು ವಿನಮ್ರವಾಗಿ ಕ್ಷಮೆ ಕೇಳಿದ ಭಂಡಾರಿ ಸಹೋದರರು ಕನ್ನಡಿಗರನ್ನು ವಿನಮ್ರವಾಗಿ ಕ್ಷಮೆ ಕೇಳಿದ ಭಂಡಾರಿ ಸಹೋದರರು

  ಈ ಎಲ್ಲ ಘಟನೆಗಳ ನಂತರ ಅಂತು ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ತಾವು ಆಡಿದ ಮಾತಿಗೆ ಕ್ಷಮೆ ಕೇಳಿದ್ದರು. ಅನೂಪ್ ಭಂಡಾರಿ ಒಂದು ವಿಡಿಯೋ ಮಾಡಿ ಅದರಲ್ಲಿ ಮಾತನಾಡಿ ತಪ್ಪು ಒಪ್ಪಿಕೊಂಡರು. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಅವಂತಿಕಾ ಶೆಟ್ಟಿ ಮಾತ್ರ ಸದ್ಯದವರೆಗೆ ಸೈಲೆಂಟ್ ಆಗಿಯೇ ಇದ್ದಾರೆ.

  ಅವಂತಿಕಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಆದರೆ ಈ ಬಗ್ಗೆ ಅವರು ಈ ವರಗೆ ಒಂದು ಟ್ವೀಟ್ ಕೂಡ ಮಾಡಿಲ್ಲ. ಅದು ಹೋಗಲಿ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ಟ್ವೀಟ್ ಅನ್ನು ರೀಟ್ವೀಟ್ ಆದರೂ ಮಾಡಿಲ್ಲ. ಕಾರ್ಯಕ್ರಮದಲ್ಲಿ ಬಾಯಿ ತುಂಬ ಬೈದ ನಟಿ ಈಗ ಮೌನವಾಗಿದ್ದಾರೆ. ಇದರಿಂದ ಅನೇಕರು ಗರಂ ಆಗಿದ್ದಾರೆ.

  ಏನಿದು ವಿವಾದ ?

  ಇತ್ತೀಚಿಗೆ 'ರಾಜರಥ' ಸಿನಿಮಾದ ಬಗ್ಗೆ ನಡೆದ ಸಂದರ್ಶನದಲ್ಲಿ ಚಿತ್ರದ ನಾಯಕ ಅನೂಪ್ ಭಂಡಾರಿ, ನಿರ್ದೇಶಕ ನಿರೂಪ್ ಭಂಡಾರಿ ಮತ್ತು ಚಿತ್ರದ ನಾಯಕಿ ಅವಾಂತಿಕಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ Rapid ರಶ್ಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೂರು ಮಂದಿ 'ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ 'ಕಚಡ ನನ್ ಮಕ್ಳು' ಎಂದು ಬೈದಿದ್ದಾರೆ

  ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'

  English summary
  Rajaratha kannada movie controversy : Actress Avantika Shetty didn't apologize kannadigas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X