For Quick Alerts
  ALLOW NOTIFICATIONS  
  For Daily Alerts

  ಓ ಮೈ ಗಾಡ್ ಕುರುಡಿಯಾದ್ರಾ ನಟಿ ಭಾಮಾ.?

  By Suneetha
  |

  ಹಾಸ್ಯನಟ ಮಿತ್ರ ಅವರು ಸದಾ ಹೊಸತನ್ನು ಹುಡುಕುತ್ತಿರುತ್ತಾರೆ. ಏನಾದ್ರೂ ಹೊಸ ವಿಷಯಗಳನ್ನು ಆಯ್ಕೆ ಮಾಡಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಮಿತ್ರ ಅವರು ಎತ್ತಿದ ಕೈ. ಅದರಂತೆ ಕಾಮಿಡಿ ನಟ ಮಿತ್ರ ಇದೀಗ ನಟನೆ ಜೊತೆ-ಜೊತೆಗೆ ನಿರ್ಮಾಪಕರಾಗಿ ಕೂಡ ಹೊಸ ಅವತಾರ ಎತ್ತಿದ್ದಾರೆ.

  ಕಾಮಿಡಿ ನಟ ಮಿತ್ರ ಅವರು 'ರಾಗ' ಎಂಬ ವಿಭಿನ್ನ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.[ಪಂಜಾಬಿ ಹುಡುಗಿ ಜೊತೆ ಕನ್ನಡದ ಹುಡುಗನ 'ಬರ್ಫಿ']

  ಇನ್ನು ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪಿ.ಸಿ ಶೇಖರ್ ಅವರು ನಿರ್ದೇಶನ ಮಾಡುತ್ತಿದ್ದು, ಎರಡು ಪ್ರಮುಖ ಪಾತ್ರಗಳ ನಡುವಿನ ತಾಕಲಾಟವನ್ನು ಈ ಚಿತ್ರದ ಮೂಲಕ ತೋರಿಸಿಕೊಡಲಿದ್ದಾರೆ. ನಿರ್ದೇಶಕ ಪಿ.ಸಿ ಶೇಖರ್ ಅವರ ಕಥೆಯನ್ನು ನೋಡಿ ಮಿತ್ರ ಅವರು ನಿರ್ಮಾಣ ಮಾಡಲು ಒಪ್ಪಿಕೊಂಡರು ಅನ್ನೋದು ವಿಶೇಷ.

  ಅಂದಹಾಗೆ ಈ ವಿಭಿನ್ನ ಚಿತ್ರಕ್ಕೆ ಕಲಾವಿದರ ಆಯ್ಕೆಯಲ್ಲಿ ತೊಡಗಿದ್ದ ಚಿತ್ರತಂಡ, ಇದೀಗ ಸದ್ಯಕ್ಕೆ ನಾಯಕಿಯನ್ನು ಆಯ್ಕೆ ಮಾಡಿದೆ. 'ರಾಗ' ಚಿತ್ರದಲ್ಲಿ ನಾಯಕಿ ವಿಭಿನ್ನ ಪಾತ್ರ ವಹಿಸಲಿದ್ದು, ಬಹಳ ಅಪರೂಪದ ನಟಿಯನ್ನು ಮಿತ್ರ ಅವರು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಯಾರು 'ಆ' ನಟಿ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

  ಯಾರು 'ಆ' ಮುದ್ದಾದ ನಟಿ

  ಯಾರು 'ಆ' ಮುದ್ದಾದ ನಟಿ

  ವಿಭಿನ್ನ ಕಥೆ ಹಾಗೂ ಪ್ರಯೋಗವುಳ್ಳ 'ರಾಗ' ಚಿತ್ರಕ್ಕೆ ನಿರ್ದೇಶಕ ಪಿ.ಸಿ ಶೇಖರ್ ಮತ್ತು ನಟ ಕಮ್ ನಿರ್ಮಾಪಕ ಮಿತ್ರ ಅವರು ಅದ್ಭುತ ಪ್ರತಿಭೆಯೊಂದನ್ನು ಆಯ್ಕೆ ಮಾಡಿದ್ದಾರೆ. ಮಲಯಾಳಂನಲ್ಲಿ ಲೀಡಿಂಗ್ ಈ ನಟಿ ಕನ್ನಡ ಚಿತ್ರರಂಗದಲ್ಲೂ ಈ ಮೊದಲು ತಮ್ಮದೇ ಆದ ಛಾಪು ಮೂಡಿಸಿದ್ದರು.

  ನಟಿ ಭಾಮಾ

  ನಟಿ ಭಾಮಾ

  ಮೊದಲ ಬಾರಿಗೆ ಯಶ್ ಅವರ ಜೊತೆ 'ಮೊದಲಾ ಸಲ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಭಾಮಾ ಅವರು ಇದೀಗ ಮಿತ್ರ ಮತ್ತು ಪಿ.ಸಿ ಶೇಖರ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ರಾಗ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ವಿಭಿನ್ನ ಪಾತ್ರದಲ್ಲಿ ಭಾಮಾ

  ವಿಭಿನ್ನ ಪಾತ್ರದಲ್ಲಿ ಭಾಮಾ

  ಯಾವ ಪಾತ್ರಕ್ಕೂ ಸೈ ಎನ್ನುವ ನಟಿ ಭಾಮಾ ಅವರು 'ರಾಗ' ಚಿತ್ರದಲ್ಲಿ 'ಕುರುಡಿ' ಪಾತ್ರ ವಹಿಸಲಿದ್ದಾರೆ. 'ಶೈಲೂ' ಚಿತ್ರದಲ್ಲಿ ಸ್ಕೂಲ್ ಹುಡುಗಿ, 'ಮೊದಲಾ ಸಲ' ಚಿತ್ರದಲ್ಲಿ ಮುದ್ದಾದ ಪ್ರಿಯತಮೆ ಹಾಗೂ ಅಪ್ಪ-ಅಮ್ಮನ ಮುದ್ದು ಮಗಳು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಭಾಮಾ, 'ರಾಗ' ಚಿತ್ರದ ಹೊಸ ಚಾಲೆಂಜ್ ಅನ್ನು ಸ್ವೀಕರಿಸಿದ್ದಾರೆ.

  ಕನ್ನಡದಲ್ಲೂ ಚಿರಪರಿಚಿತೆ

  ಕನ್ನಡದಲ್ಲೂ ಚಿರಪರಿಚಿತೆ

  'ಮೊದಲಾ ಸಲ', ಗಣೇಶ್ ಜೊತೆ 'ಶೈಲೂ', 'ಒಂದು ಕ್ಷಣದಲ್ಲಿ', 'ಆಟೋ ರಾಜ', 'ಬರ್ಫಿ', 'ಅಪ್ಪಯ್ಯ', 'ಅಂಬರ', 'ಅರ್ಜುನ' ಹೀಗೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿ, ಮೆಚ್ಚುಗೆ ಗಳಿಸಿರುವ ಭಾಮಾ ಕೊಟ್ಟ ಪಾತ್ರಗಳನ್ನು ನೀರು ಕುಡಿದಷ್ಟೇ ಸಲೀಸಾಗಿ ಮಾಡಿ ಬಿಡುತ್ತಾರೆ.

  'ರಾಗ' ಯಾವಾಗ ಶುರು.?

  'ರಾಗ' ಯಾವಾಗ ಶುರು.?

  ಮುಂಬರುವ 'ಸೆಪ್ಟೆಂಬರ್' ತಿಂಗಳಿನಲ್ಲಿ 'ರಾಗ' ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರು ಸುತ್ತ-ಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡದವರು ನಿರ್ಧರಿಸಿದ್ದಾರೆ. 'ಮಾಸ್ಟರ್ ಪೀಸ್', 'ಮಿ.ಅಂಡ್ ಮಿಸಸ್ ರಾಮಾಚಾರಿ' ಚಿತ್ರಗಳಿಗೆ ಕ್ಯಾಮೆರಾ ಕೈ ಚಳಕ ತೋರಿದ್ದ ವೈದಿ ಅವರು 'ರಾಗ' ಚಿತ್ರಕ್ಕೆ ಕ್ಯಾಮೆರಾ ಕೈ ಚಳಕ ತೋರಲಿದ್ದಾರೆ.

  English summary
  Actress Bhama will Heroine of Kannada Movie 'Raaga'. The movie is Produced By Actor Mitra. Directed By PC Shekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X