For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡ ವಿರುದ್ಧ ಪ್ರೆಸ್ ಮೀಟ್ ಮಾಡಿ ನಟಿ ಭಾವನಾ ಗರಂ ಆಗಿದ್ದೇಕೆ.?

  By Harshitha
  |

  ಕನ್ನಡ ನಟಿ ಹಾಗೂ ಬಾಲಭವನದ ಅಧ್ಯಕ್ಷೆ ಆಗಿರುವ ಭಾವನಾ ನಿನ್ನೆ ಗರಂ ಆಗಿದ್ದರು. ತಮ್ಮ ವಕೀಲ ರಾಜೇಶ್ ಜೊತೆ ದಿಢೀರ್ ಪ್ರೆಸ್ ಮೀಟ್ ನಡೆಸಿದ ನಟಿ ಭಾವನಾ ಕೆಂಡ ಕಾರುತ್ತಲೇ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರ ಜೊತೆಗೆ ಮಾತಿಗಿಳಿದರು.

  ಸದಾ ನಗುಮೊಗದಿಂದ ಇರುವ ನಟಿ ಭಾವನಾ ಇದ್ದಕ್ಕಿದ್ದಂತೆ ಆಕ್ರೋಶಗೊಳ್ಳುವುದಕ್ಕೆ ಕಾರಣ ಕನ್ನಡದ ಜನಪ್ರಿಯ ಜೀ ಕನ್ನಡ ವಾಹಿನಿಯ ನಾನ್ ಫಿಕ್ಷನ್ ಹೆಡ್ ರಾಘವೇಂದ್ರ ಹುಣಸೂರು.! [ಕನ್ನಡ ಕಿರುತೆರೆಗೆ ಬಲಗಾಲಿಟ್ಟು ಬಂದ 'ಲೇಡಿ ಟೈಗರ್' ಮಾಲಾಶ್ರೀ.!]

  ಇಬ್ಬರ ಮಧ್ಯೆ ಆಗಿರುವ ವಿವಾದ ಏನು.? ಏಕಾಏಕಿ ಭಾವನಾ ಮಾಧ್ಯಮಗಳ ಮುಂದೆ ಬಂದಿದ್ದೇಕೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನ ತೀರ್ಪುಗಾರರಾಗಿದ್ದರು ಭಾವನಾ

  'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನ ತೀರ್ಪುಗಾರರಾಗಿದ್ದರು ಭಾವನಾ

  ನಿಮಗೆಲ್ಲಾ ಗೊತ್ತಿರುವಂತೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ ನಲ್ಲಿ ನಟಿ ಭಾವನಾ ತೀರ್ಪುಗಾರರು. ಈಗ ಎದ್ದಿರುವ ವಿವಾದಕ್ಕೆ ಈ ಶೋ ಕಾರಣ.

  ಶೋ ನಿಂದ ಭಾವನಾಗೆ ಗೇಟ್ ಪಾಸ್.!

  ಶೋ ನಿಂದ ಭಾವನಾಗೆ ಗೇಟ್ ಪಾಸ್.!

  'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನ ತೀರ್ಪುಗಾರರ ಸ್ಥಾನದಿಂದ ನಟಿ ಭಾವನಾ ರಾಮಣ್ಣ ರವರನ್ನ ಏಕಾಏಕಿ ಕೈಬಿಡಲಾಗಿದೆ. ಇದರಿಂದ ಬೇಸರಗೊಂಡ ಭಾವನಾ ನಿನ್ನೆ (ಜೂನ್ 15) ಪ್ರೆಸ್ ಮೀಟ್ ಕರೆದಿದ್ದರು.

  ಭಾವನಾ ಏನಂದ್ರು.?

  ಭಾವನಾ ಏನಂದ್ರು.?

  ''ಜೀ ಕನ್ನಡ ವಾಹಿನಿಯ ನಾನ್ ಫಿಕ್ಷನ್ ವಿಭಾಗದ ರಾಘವೇಂದ್ರ ಹುಣಸೂರು ಅವರು ನನ್ನನ್ನು ತೀರ್ಪುಗಾರರಾಗಿ ಬರುವಂತೆ ಒತ್ತಾಯಿಸಿದರು. ನಾನು ಕೆಲವು ಷರತ್ತುಗಳನ್ನು ವಿಧಿಸಿ ಒಪ್ಪಿಕೊಂಡಿದ್ದೆ. ಆದ್ರೆ, ಅವರು ಆಡಿದ ಮಾತಿನಂತೆ ನಡೆದುಕೊಂಡಿಲ್ಲ'' ಎಂದು ನಟಿ ಭಾವನಾ ದೂರಿದರು.

  ಉಲ್ಲಂಘನೆ ಆಗಿದೆ.!

  ಉಲ್ಲಂಘನೆ ಆಗಿದೆ.!

  ''ಕಾರ್ಯಕ್ರಮಕ್ಕೂ ಮೊದಲೇ ಸ್ಕ್ರಿಪ್ಟ್ ನೀಡಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದ್ದೆ. ಆದ್ರೆ, ಅದೆಲ್ಲವೂ ಉಲ್ಲಂಘನೆ ಆಗಿದೆ'' - ಭಾವನಾ

  ಸ್ಪರ್ಧಿಗಳಿಗೂ ಒತ್ತಾಯ.!

  ಸ್ಪರ್ಧಿಗಳಿಗೂ ಒತ್ತಾಯ.!

  ''ಕಾರ್ಯಕ್ರಮದಲ್ಲಿ ಹೀಗೆ ಮಾತನಾಡಬೇಕು, ಅನಿಸಿಕೆಯನ್ನು ಹೀಗೆ ಹೇಳಬೇಕು ಎಂದು ಸ್ಪರ್ಧಿಗಳಿಗೆ ಒತ್ತಾಯಿಸುತ್ತಾರೆ'' - ಭಾವನಾ

  ಗಂಟೆಗಟ್ಟಲೆ ಕಾಯಿಸುತ್ತಾರೆ.!

  ಗಂಟೆಗಟ್ಟಲೆ ಕಾಯಿಸುತ್ತಾರೆ.!

  ''ತೀರ್ಪುಗಾರರನ್ನು ಸೆಟ್ ಗೆ ಮೊದಲೇ ಬರಲು ಹೇಳಿ ಗಂಟೆಗಟ್ಟಲೆ ಕಾಯಿಸಿದ್ದಾರೆ. ಅಲ್ಲದೇ, ಬೆಳಗಿನ ಜಾವದವರೆಗೂ ಶೂಟಿಂಗ್ ಮಾಡುತ್ತಾರೆ'' - ಭಾವನಾ

  ಕುಮ್ಮಕ್ಕು ನೀಡುತ್ತಾರೆ

  ಕುಮ್ಮಕ್ಕು ನೀಡುತ್ತಾರೆ

  ''ತರಬೇತುದಾರರಿಗೆ ಅಪಾಯಕಾರಿ ಸ್ಟಂಟ್ ಮಾಡಿಸುವಂತೆ ಕುಮ್ಮಕ್ಕು ನೀಡುತ್ತಾರೆ'' - ಭಾವನಾ

  ವೃತ್ತಿಪರತೆ ಇಲ್ಲ!

  ವೃತ್ತಿಪರತೆ ಇಲ್ಲ!

  ''ನಿರ್ದೇಶಕರಲ್ಲಿ ವೃತ್ತಿಪರತೆ ಇಲ್ಲ. ನನಗೆ ಜೀ ವಾಹಿನಿ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಆದ್ರೆ, ಕಾರ್ಯಕ್ರಮದ ಬಗ್ಗೆ ಮಾತ್ರ ನನ್ನ ಅಸಮಾಧಾನವಿದೆ'' - ಭಾವನಾ

  ಕ್ಷುಲ್ಲಕ ಕಾರಣ

  ಕ್ಷುಲ್ಲಕ ಕಾರಣ

  ''ಕ್ಷುಲ್ಲಕ ಕಾರಣದಿಂದ ನನ್ನನ್ನು ಕಾರ್ಯಕ್ರಮದಿಂದ ಕೈ ಬಿಡಲಾಗಿದೆ. ಇದುವರೆಗೂ ಸಂಭಾವನೆ ಕೂಡ ನೀಡಿಲ್ಲ. ಕಾರ್ಯಕ್ರಮಕ್ಕೂ ಮೊದಲು ಮಾಡಿಕೊಂಡಿದ್ದ ಒಪ್ಪಂದದ ಪ್ರತಿ ಕೂಡ ನೀಡಿಲ್ಲ. ನನ್ನ ಸಮಯ ವ್ಯರ್ಥವಾಗಿದೆ. ನನ್ನ ಕಾರ್ಯಕ್ರಮಗಳು ಹಾಳಾಗಿವೆ'' - ಭಾವನಾ

  ಪೆನಾಲ್ಟಿ ಕಟ್ಟಿಕೊಡಬೇಕು.!

  ಪೆನಾಲ್ಟಿ ಕಟ್ಟಿಕೊಡಬೇಕು.!

  ತಮ್ಮ ಪರ ವಕೀಲ ರಾಜೇಶ್ ಸಮೇತ ಪ್ರೆಸ್ ಮೀಟ್ ಗೆ ಆಗಮಿಸಿದ್ದ ಭಾವನಾ, ರಾಘವೇಂದ್ರ ಹುಣಸೂರು ಅವರಿಗೆ ನೋಟೀಸ್ ನೀಡಿ, ಪೆನಾಲ್ಟಿ ಕೊಡುವಂತೆ ಒತ್ತಾಯಿಸುವ ಬಗ್ಗೆ ಕೂಡ ಮಾತನಾಡಿದರು.

  ಬಾಕಿ ಇಬ್ಬರು ಜಡ್ಜ್ ಇದ್ದಾರೆ.!

  ಬಾಕಿ ಇಬ್ಬರು ಜಡ್ಜ್ ಇದ್ದಾರೆ.!

  'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಭಾವನಾ ಬಿಟ್ಟರೆ, ನಟಿ ಮಾಲಾಶ್ರೀ ಹಾಗೂ ನಟ ದಿಗಂತ್ ತೀರ್ಪುಗಾರರ ಸ್ಥಾನದಲ್ಲಿ ಇದ್ದಾರೆ.

  English summary
  Kannada Actress Bhavana is annoyed with 'Dance Karnataka Dance' reality show director Raghavendra Hunsur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X