»   » ಶಿವಣ್ಣನ 'ಟಗರಿ'ಗೆ ಬಂದ್ರು ಹೊಸ ಪೋರಿ!

ಶಿವಣ್ಣನ 'ಟಗರಿ'ಗೆ ಬಂದ್ರು ಹೊಸ ಪೋರಿ!

Posted By:
Subscribe to Filmibeat Kannada

ದುನಿಯಾ ಸೂರಿ ನಿರ್ದೇಶನದ 'ಟಗರು' ಸಿನಿಮಾ ಪ್ರತಿಯೊಂದು ವಿಷ್ಯದಲ್ಲೂ ಗಮನ ಸೆಳೆಯುತ್ತಾ ಬಂದಿದೆ. ಶಿವರಾಜ್ ಕುಮಾರ್ ನಾಯಕನಾಗಿದ್ದು, ಕೆಂಡ ಸಂಪಿಗೆ ಮಾನ್ವಿತಾ ಚಿತ್ರದ ನಾಯಕಿಯಾಗಿದ್ದಾರೆ. ಇನ್ನೂ ವಸಿಷ್ಠ ಸಿಂಹ ಹಾಗೂ ನಟ ಧನಂಜಯ್ ಶಿವಣ್ಣನ ಎದುರು ವಿಲನ್ ಗಳಾಗಿ ಮಿಂಚುತ್ತಿದ್ದಾರೆ.

ಇಷ್ಟೆಲ್ಲಾ ವಿಶೇಷತೆಗಳ ಮಧ್ಯೆ ಈಗ 'ಟಗರು' ಚಿತ್ರತಂಡಕ್ಕೆ ಹೊಸ ಅತಿಥಿಯ ಎಂಟ್ರಿಯಾಗಿದೆ. ಹೌದು, ಶಿವಣ್ಣನ ಅಡ್ಡಾಗೆ 'ಜಾಕಿ' ಭಾವನ ಕಾಲಿಟ್ಟಿದ್ದು, ಹ್ಯಾಟ್ರಿಕ್ ಹೀರೋಗೆ ಜೊತೆಯಾಗುತ್ತಿದ್ದಾರಂತೆ. ಈ ಮೂಲಕ 'ಜಾಕಿ' ಚಿತ್ರದ ನಂತರ ನಿರ್ದೇಶಕ ಸೂರಿ ಅವರ ಸಿನಿಮಾದಲ್ಲಿ ಭಾವನ ಬಣ್ಣ ಹಚ್ಚಲಿದ್ದಾರೆ.['ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ ]


Actress Bhavana Heroien For Shivarajkumar's Tagaru

'ಜಾಕಿ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ, 'ವಿಷ್ಣುವರ್ಧನ' ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆ, 'ರೋಮಿಯೋ' ಚಿತ್ರದಲ್ಲಿ ಗಣೇಶ್ ಜೊತೆ, 'ಟೋಪಿವಾಲ' ಚಿತ್ರದಲ್ಲಿ ಉಪೇಂದ್ರ ಅಂತಹ ದೊಡ್ಡ ಸ್ಟಾರ್ ನಟರ ಚಿತ್ರಗಳಲ್ಲಿ ಸ್ಕ್ರೀನ್ ಶೇರ್ ಮಾಡಿದ್ದ ಭಾವನ, ಇದೇ ಮೊದಲ ಭಾರಿಗೆ ಸೆಂಚುರಿಸ್ಟಾರ್ ಜೊತೆ ಬಣ್ಣ ಹಚ್ಚುತ್ತಿದ್ದಾರೆ.[ಹುಶಾರು..ಇದು ಪೊಗರು ತುಂಬಿರೋ 'ಟಗರು']


Actress Bhavana Heroien For Shivarajkumar's Tagaru

ಸದ್ಯ, ಮಾನ್ವಿತಾ ಚಿತ್ರದ ಒಬ್ಬ ನಾಯಕಿಯಾಗಿದ್ದು, ಈಗ ಎರಡನೇ ನಟಿಯ ಎಂಟ್ರಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. 'ಟಗರು' ಚಿತ್ರದಲ್ಲಿ ಭಾವನ, ಮಾನ್ವಿತಾ ಅವರ ಅಕ್ಕನ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಷ್ಯವನ್ನ ನಟಿ ಮಾನ್ವಿತಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಖಚಿತಪಡಿಸಿದ್ದಾರೆ.[ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ ]


Actress Bhavana Heroien For Shivarajkumar's Tagaru

ಇದಕ್ಕೂ ಮುಂಚೆ ಪಿ.ವಾಸು ನಿರ್ದೇಶನದ ಚಿತ್ರದಲ್ಲಿ ಭಾವನ, ಶಿವಣ್ಣನ ಜೊತೆ ನಟಿಸಬೇಕಾಗಿತ್ತಂತೆ. ಆದ್ರೆ, ಮಲಯಾಳಂ ಚಿತ್ರದಲ್ಲಿ ಬ್ಯುಸಿಯಾಗಿದ್ದ ಕಾರಣ ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ. ಬಟ್, ಈ ಬಾರಿ ಹ್ಯಾಟ್ರಿಕ್ ಹೀರೋ ಸಿನಿಮಾಗೆ ಜೈ ಎಂದಿದ್ದು ಆದಷ್ಟೂ ಬೇಗ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.

English summary
Director Suri's next, 'Tagaru', which has Starering Shivarajkumar, Dhananjaya, Vasishta N Simha and Manvitha Harish. Popular South actress Bhavana confirms that she has given a nod to this film. While this will be her first with Shivarajkumar, she reunites with her Jackie director Suri after six years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada