»   » 'ಜಾಕಿ' ಭಾವನಾ - ಕನ್ನಡಿಗ ನವೀನ್ ಮದುವೆ ದಿನಾಂಕ ನಿಗದಿ ಆಯ್ತು.!

'ಜಾಕಿ' ಭಾವನಾ - ಕನ್ನಡಿಗ ನವೀನ್ ಮದುವೆ ದಿನಾಂಕ ನಿಗದಿ ಆಯ್ತು.!

Posted By:
Subscribe to Filmibeat Kannada

ಕೇರಳದ ಕೊಚ್ಚಿಯಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ... ಅಂದ್ರೆ ಮಾರ್ಚ್ ನಲ್ಲಿ ನಟಿ ಭಾವನಾ ಹಾಗೂ ಕನ್ನಡಿಗ ನವೀನ್ ನಿಶ್ಚಿತಾರ್ಥ ಸರಳವಾಗಿ, ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತ್ತು. ['ಜಾಕಿ' ಭಾವನಾ ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿರುವುದರ ಹಿಂದಿನ ಗುಟ್ಟು ರಟ್ಟು!]

ಇದೀಗ ನಟಿ ಭಾವನಾ-ನಿರ್ಮಾಪಕ ನವೀನ್ ರವರ ಮದುವೆ ದಿನಾಂಕ ಫಿಕ್ಸ್ ಆಗಿದೆ. ಹಾಗಾದ್ರೆ, ಕನ್ನಡದ 'ಜಾಕಿ' ಚಿತ್ರದಲ್ಲಿ ಅಭಿನಯಿಸಿ 'ಜಾಕಿ' ಭಾವನಾ ಅಂತಲೇ ಖ್ಯಾತಿ ಗಳಿಸಿದ ಭಾವನಾ-ನವೀನ್ ಮದುವೆ ಯಾವಾಗ ನಡೆಯಲಿದೆ.? ಎಲ್ಲಿ ನಡೆಯಲಿದೆ.? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಓದಿರಿ....

ಮದುವೆ ಯಾವಾಗ.?

ಮೂಲಗಳ ಪ್ರಕಾರ, ಆಕ್ಟೋಬರ್ 27 ರಂದು ನಟಿ ಭಾವನಾ ಹಾಗೂ ನವೀನ್ ವಿವಾಹ ಮಹೋತ್ಸವ ನಡೆಯಲಿದೆ. ['ಜಾಕಿ' ಭಾವನಾ ಮದುವೆ ಆಗ್ತಿರೋದು ಯಾರನ್ನ ಅಂತ ನಿಮಗೆ ಗೊತ್ತಾ?]

ವಿವಾಹ ಎಲ್ಲಿ.?

ಮೂಲತಃ ಕೇರಳದವರೇ ಆಗಿರುವುದರಿಂದ ಭಾವನಾ ಕುಟುಂಬಸ್ಥರು ಕೇರಳದ ತ್ರಿಶೂರ್ ನಲ್ಲಿಯೇ ವಿವಾಹ ಮಹೋತ್ಸವ ನಡೆಸಲು ನಿರ್ಧರಿಸಿದ್ದಾರಂತೆ.

ಮದುವೆ ಆಹ್ವಾನ ಯಾರ್ಯಾರಿಗೆ.?

ಭಾವನಾ-ನವೀನ್ ಮದುವೆಗೆ ಸಂಬಂಧಿಕರು, ಸ್ನೇಹಿತರು ಹಾಗೂ ಆಪ್ತರಿಗಷ್ಟೇ ಆಹ್ವಾನ ನೀಡುವುದಾಗಿ ಭಾವನಾ ತಾಯಿ ಪುಷ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾವನಾ ಶೂಟಿಂಗ್ ನಲ್ಲಿ ಬಿಜಿ

ಸದ್ಯ ಭಾವನಾ ಮಲೆಯಾಳಂ ಚಿತ್ರವೊಂದರ ಶೂಟಿಂಗ್ ಗಾಗಿ ಸ್ಕಾಟ್ಲೆಂಡ್ ಗೆ ತೆರಳಿದ್ದಾರೆ. ಈ ತಿಂಗಳ ಕೊನೆಯಲ್ಲಿ ಸ್ಕಾಟ್ಲೆಂಡ್ ನಿಂದ ಭಾವನಾ ವಾಪಸ್ ಆಗಲಿದ್ದು, ಅಲ್ಲಿಂದ ಮದುವೆ ತಯಾರಿ ಆರಂಭವಾಗಲಿದೆ.

ದಿಢೀರ್ ಅಂತ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವನಾ

ಮಾರ್ಚ್ 9 ರಂದು ಕೊಚ್ಚಿಯಲ್ಲಿನ ತಮ್ಮ ನಿವಾಸದಲ್ಲಿ ನಟಿ ಭಾವನಾ-ನವೀನ್ ನಿಶ್ಚಿತಾರ್ಥ ದಿಢೀರ್ ಅಂತ ನೆರವೇರಿತ್ತು.

ಯಾರೀ ನವೀನ್.?

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಜೊತೆಯಾಗಿ ನಟಿಸಿದ್ದ 'ರೋಮಿಯೋ' ಚಿತ್ರದ ಬಂಡವಾಳ ಹಾಕಿದ್ದವರು ಇದೇ ನವೀನ್. ಅದಕ್ಕೂ ಮೊದಲು ಕನ್ನಡದ 'ನಾಯಕ' ಎಂಬ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ನವೀನ್ ನಟಿಸಿದ್ದರು.

ನಾಲ್ಕು ವರ್ಷಗಳ ಪ್ರೀತಿ

'ರೋಮಿಯೋ' ಸಿನಿಮಾ ಶೂಟಿಂಗ್ ಟೈಮ್ ನಲ್ಲಿ ಭೇಟಿ ಆದ ನವೀನ್-ಭಾವನಾ ಮೊದಮೊದಲು ಉತ್ತಮ ಗೆಳೆಯರಾಗಿದ್ದರು. ಅವರ ಗೆಳೆತನ ಪ್ರೀತಿಗೆ ತಿರುಗಿ ನಾಲ್ಕು ವರ್ಷಗಳಾಗಿವೆ. ನಾಲ್ಕು ವರ್ಷಗಳ ಪ್ರೀತಿಗೆ ಅಕ್ಟೋಬರ್ ನಲ್ಲಿ ಅಧಿಕೃತ ಮುದ್ರೆ ಬೀಳಲಿದೆ.

English summary
Kannada/Malayalam Actress Bhavana and Naveen to wed on October 27th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada