»   » ಯುವ ನಿರ್ಮಾಪಕನ ಜೊತೆ 'ಜಾಕಿ' ಭಾವನಾ ಮದುವೆ ಫಿಕ್ಸ್!

ಯುವ ನಿರ್ಮಾಪಕನ ಜೊತೆ 'ಜಾಕಿ' ಭಾವನಾ ಮದುವೆ ಫಿಕ್ಸ್!

Posted By:
Subscribe to Filmibeat Kannada

ಬಹು ಭಾಷಾ ನಟಿ ಮಲ್ಲು ಕುಟ್ಟಿ ಭಾವನಾ ದಾಂಪತ್ಯ ಜೀವನದ ಬಗ್ಗೆ 3 ವರ್ಷಗಳ ಹಿಂದೆಯೇ ಗಾಸಿಪ್‌ ಹರಿದಾಡುತ್ತಿತ್ತು. 2016 ಫೆಬ್ರವರಿಯಲ್ಲಿ ಹಾರ್ಟ್‌ ಬ್ರೇಕ್ ಆಗುವ ನ್ಯೂಸ್ ನೀಡಿ ಗಾಸಿಪ್‌ಗೆ ಬ್ರೇಕ್ ಸಹ ಹಾಕಿದ್ದರು. ಈಗ ಕೊನೆಗೂ ತಮ್ಮ ಕುಮಾರಿ ಜೀವನಕ್ಕೆ 2017 ರ ಏಪ್ರಿಲ್‌ನಲ್ಲಿ ಬ್ರೇಕ್‌ ಹಾಕುತ್ತಿದ್ದಾರೆ.

[ಹುಡುಗರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್: ಪ್ರಿಯಾಮಣಿಗೆ ಮದುವೆ]

ಕನ್ನಡ ನಿರ್ಮಾಪಕನೊಂದಿಗೆ ಡೇಟಿಂಗ್ ಕ್ಲಾರಿಟಿ ನೀಡದ ಭಾವನಾ, 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ತಮ್ಮ ತಂದೆ ಸಾವನ್ನಪ್ಪಿದ್ದರಿಂದ ಮದುವೆಯನ್ನು ಮುಂದೂಡಲಾಯಿತು. ಅಸಲಿ ಅವರ ಮದುವೆ ಯಾರ ಜೊತೆ, ಯಾವಾಗ, ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿರಿ.

ಭಾವನಾ ಮುದುವೆ

ಕನ್ನಡ ಚಿತ್ರರಂಗಕ್ಕೆ 'ಜಾಕಿ' ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ ನಟಿ ಭಾವನಾ ಮದುವೆ ಏಪ್ರಿಲ್‌ಗೆ ಎನ್ನಲಾಗುತ್ತಿದೆ. ಆದರೆ ಭಾವನಾ ತಾಯಿ ಅವರ ಮದುವೆ ಬಗ್ಗೆ ಬೇರೆಯೇ ಮಾಹಿತಿ ನೀಡುತ್ತಿದ್ದಾರೆ. ಅದೇನು ಮುಂದೆ ಓದಿ..

ಭಾವನಾ ತಾಯಿ ಪುಷ್ಪಾಗೆ

" ಭಾವನಾ ಮದುವೆಯ ದಿನಾಂಕವನ್ನು ನಾವೇ ಇನ್ನೂ ನಿಗದಿಪಡಿಸಿಲ್ಲ. ಮಾಧ್ಯಮಗಳು ಈಗಾಗಲೇ ಭಾವನಾ ಮದುವೆ ಬಗ್ಗೆ ನನಗೆ ತಿಳಿದಿರದ ಕುತೂಹಲಕಾರಿ ಸಂಗತಿಗಳನ್ನು ಪ್ರಚಾರ ಮಾಡುತ್ತಿವೆ, ಇನ್ನೂ ಕೆಲವು ವಿಚಾರಗಳನ್ನು ತಿಳಿಯುವ ಕಾತರದಲ್ಲಿದ್ದೇನೆ" ಎಂದು ಭಾವನಾ ತಾಯಿ ಪುಷ್ಪಾ ಹರಿಹಾಯ್ದಿದ್ದಾರೆ.

ಭಾವನಾ ಏನ್ಮಾಡ್ತಿದ್ದಾರೆ

ನಟಿ ಭಾವನಾ ಪ್ರಸ್ತುತದಲ್ಲಿ 'ಹನೀ ಬೀ' ಚಿತ್ರದ 2ನೇ ಭಾಗದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಮದುವೆ ದಿನಾಂಕವನ್ನು ಅವರೇ ಖಚಿತ ಪಡಿಸುತ್ತಾರೆ. ಸಿನಿಮಾ ಶೂಟಿಂಗ್ ಅನ್ನು ಮದುವೆಯ ನಂತರ ಮುಂದುವರೆಸುವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪುಷ್ಪಾ ಹೇಳಿದ್ದಾರೆ.

ಗಂಡು ಯಾರು

3 ವರ್ಷಗಳ ಹಿಂದೆ ಗಾಸಿಪ್‌ ಗೆ ಒಳಗಾಗಿದ್ದ ನಮ್ಮ ಕನ್ನಡ ಚಿತ್ರ ನಿರ್ಮಾಪಕ ನವೀನ್ ರವರು ಭಾವನಾ ಮದುವೆ ಆಗಲಿರುವ ಗಂಡು. ಅಂದಹಾಗೆ ಭಾವನಾ-ನವೀನ್‌ 2012 ರ 'ರೋಮಿಯೋ' ಚಿತ್ರದ ಶೂಟಿಂಗ್ ವೇಳೆ ಮೊದಲು ಪರಿಚಯವಾಗಿ ಗೆಳೆತನವಾಗಿತ್ತು. ನಂತರ ಈ ಇಬ್ಬರೂ ಲವರ್ಸ್‌.

'ಜಾಕಿ' ಭಾವನಾ ಮದುವೆ ಆಗ್ತಿರೋದು ಯಾರನ್ನ ಅಂತ ನಿಮಗೆ ಗೊತ್ತಾ?

ಮದುವೆ

ನಟಿ ಭಾವನಾ ಮತ್ತು ಕನ್ನಡ ಚಿತ್ರ ರಂಗದ ನಾಯಕ ಮತ್ತು ನಿರ್ಮಾಪಕ ನವೀನ್‌ 2014 ರಲ್ಲೇ ಮದುವೆ ಆಗಬೇಕಿತಂತೆ. ಆದರೆ ಭಾವನಾ ಚಿತ್ರಗಳಿಗೆ ಕಮಿಟ್ ಆಗಿದ್ದರಿಂದ ಮದುವೆ ಮುಂದೂಡಿದ್ದರು.

ಕನ್ನಡ

ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ', 'ಯಾರೇ ಕೂಗಾಡಲಿ' ಮತ್ತು 'ಮೈತ್ರಿ', ಕಿಚ್ಚ ಸುದೀಪ್ ಅಭಿನಯದ 'ವಿಷ್ಣುವರ್ಧನ' ಮತ್ತು 'ಬಚ್ಚನ್', ಗಣೇಶ್ ರವರ 'ರೋಮಿಯೋ' ಹಾಗೂ ಉಪೇಂದ್ರ ಅಭಿನಯದ 'ಟೋಪಿವಾಲಾ' ಚಿತ್ರಗಳಲ್ಲಿ ಭಾವನಾ ಅಭಿನಯಿಸಿದ್ದರು. ಬಚ್ಚನ್, ಮುಕುಂದ ಮುರಾರಿ, ಮೈತ್ರಿ ಸಿನಿಮಾಗಳಲ್ಲಿ ಗೆಸ್ಟ್‌ ರೋಲ್‌ನಲ್ಲಿ ಅಪಿಯರ್ ಆಗಿದ್ದರು.

English summary
Multi language actress Bhavana Menon Will get Marrie with kannada film producer Naveen. The Reports said that She will get marrie next year in April.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada