For Quick Alerts
  ALLOW NOTIFICATIONS  
  For Daily Alerts

  ಮೊನ್ನೆ ಪ್ರಿಯಾಂಕಾ ಆಯ್ತು, ಈಗ ಚಾರ್ಮಿ ಕೌರ್; ಈ ನಟಿಯರೇಕೆ ಹೀಗೆ?

  By Bharath Kumar
  |

  ಅದ್ಯಾಕೋ ಇತ್ತೀಚೆಗೆ ನಟಿಯರ ತೊಡುವ ಬಟ್ಟೆಗಳು ಹೆಚ್ಚು ಸುದ್ದಿ ಮಾಡುತ್ತಿವೆ. ಗ್ಲಾಮರ್ ಲೋಕದಲ್ಲಿ ಬಣ್ಣದ ಚಿಟ್ಟೆಗಳಂತೆ ಕಲರ್ ಫುಲ್ ಕಾಸ್ಟ್ಯೂಮ್ಸ್ ತೊಟ್ಟು ಎಲ್ಲರ ಕಣ್ಣುಕುಕ್ಕಿಸುವ ನಟಿಯರು, ಗೊತ್ತಿದ್ದೋ ಗೊತ್ತಿಲ್ಲದೇನೋ ವಿವಾದಕ್ಕೆ ಗುರಿಯಾಗುತ್ತಿದ್ದಾರೆ.

  ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಕಾಲು ಮೇಲೆ ಕಾಲು ಹಾಕ್ಕೊಂಡು ಕೂತಿದ್ದಲ್ಲದೇ, ತುಂಡುಡುಗೆ ತೊಟ್ಟು ಕಾಲು ತೋರಿಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.

  ಪ್ರಿಯಾಂಕ ಪ್ರದರ್ಶನಕ್ಕಿಟ್ಟಳು ಕಾಲು, ಶುರುವಾಯ್ತು ಟ್ರೋಲ್ಪ್ರಿಯಾಂಕ ಪ್ರದರ್ಶನಕ್ಕಿಟ್ಟಳು ಕಾಲು, ಶುರುವಾಯ್ತು ಟ್ರೋಲ್

  ಇದೀಗ, ಸೌತ್ ಸುಂದರಿ ಚಾರ್ಮಿ ಕೌರ್ ಕೂಡ ಬಟ್ಟೆಯ ವಿಚಾರದಲ್ಲಿ ಈಗ ವಿವಾದಕ್ಕೆ ಗುರಿಯಾಗಿದ್ದಾರೆ. ಸಿಖ್ ರ ಪವಿತ್ರ ಸ್ಥಳಕ್ಕೆ ಪ್ಯಾಂಟ್ ಲೆಸ್ ಆಗಿ ಭೇಟಿ ಕೊಟ್ಟು ಸುದ್ದಿಯಾಗಿದ್ದಾಳೆ. ಮುಂದೆ ಓದಿ.....

  ಗುರುದ್ವಾರಕ್ಕೆ ಭೇಟಿ ವೇಳೆ ಘಟನೆ

  ಗುರುದ್ವಾರಕ್ಕೆ ಭೇಟಿ ವೇಳೆ ಘಟನೆ

  ಚಿತ್ರವೊಂದರ ಶೂಟಿಂಗ್ ಗಾಗಿ ಪೋರ್ಚಗಲ್ ನಲ್ಲಿರುವ ನಟಿ ಚಾರ್ಮಿ ಕೌರ್, ಅಲ್ಲಿನ ಪವಿತ್ರ ಗುರುದ್ವಾರಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ತಾವು ಹಾಕಿಕೊಂಡಿದ್ದ ತುಂಡುಡುಗೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

  ಪಿಗ್ಗಿ ಕಾಲು ಪ್ರದರ್ಶನ ವಿವಾದ ಕುರಿತು ಅಮಿತಾಬ್ ಬಚ್ಚನ್ ಹೇಳಿದ್ದೇನು?ಪಿಗ್ಗಿ ಕಾಲು ಪ್ರದರ್ಶನ ವಿವಾದ ಕುರಿತು ಅಮಿತಾಬ್ ಬಚ್ಚನ್ ಹೇಳಿದ್ದೇನು?

  ಪ್ಯಾಂಟ್ ಲೆಸ್ ಕಾಸ್ಟ್ಯೂಮ್

  ಪ್ಯಾಂಟ್ ಲೆಸ್ ಕಾಸ್ಟ್ಯೂಮ್

  ಗುರುದ್ವಾರಕ್ಕೆ ಭೇಟಿ ಕೊಟ್ಟಿದ್ದ ಚಾರ್ಮಿ ಕೌರ್ ಕಪ್ಪು ಬಣ್ಣದ ನಿಲುವಂಗಿ ತೊಟ್ಟಿದ್ದರು, ಆದ್ರೆ, ಅದಕ್ಕೆ ಪ್ಯಾಂಟ್ ಧರಿಸಿರಲಿಲ್ಲ. ತೊಡೆಗಳು ಕಾಣುವ ಹಾಗೆ ಬಟ್ಟೆ ಧರಿಸಿ ಗುರುದ್ವಾರಕ್ಕೆ ಹೋಗಿದ್ದು ಸರಿಯಿಲ್ಲ ಎಂಬ ವಿವಾದಕ್ಕೆ ಚಾರ್ಮಿ ಸಿಲುಕಿದ್ದಾರೆ.

  ಧಾರ್ಮಿಕತೆಗೆ ಧಕ್ಕೆ

  ಧಾರ್ಮಿಕತೆಗೆ ಧಕ್ಕೆ

  ಯಾವುದೇ ದೇವಸ್ಥಾನ, ಪವಿತ್ರ ಸ್ಥಳಗಳಿಗೆ ಹೋಗಬೇಕಾದರೇ ವಸ್ತ್ರ ಸಂಹಿತೆ ಹೀಗೆ ಇರಬೇಕು ಎಂಬ ನಿಯಮಗಳಿವೆ. ಆದ್ರೆ, ಈ ನಿಯಮಗಳಿಗೆ ವಿರುದ್ಧವಾಗಿ ನಟಿ ಚಾರ್ಮಿ ಕೌರ್ ನಡೆದುಕೊಂಡಿದ್ದಾರೆ. ಇನ್ನು ಮೊಣಕಾಲ ಮೇಲೆ ಕೂತು ಪ್ರಸಾದ ತೆಗೆದುಕೊಂಡಿರುವುದು ಕೂಡ ಧಾರ್ಮಿಕತೆಗೆ ಧಕ್ಕೆ ತರುವಂತಿದೆ ಎಂಬ ಆರೋಪಗಳು ಚಾರ್ಮಿಯ ವಿರುದ್ಧ ಕೇಳಿ ಬಂದಿದೆ.

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

  ಚಾರ್ಮಿ ಕೌರ್ ಅವರು ಗುರುದ್ವಾರಕ್ಕೆ ಭೇಟಿ ಕೊಟ್ಟಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ತಿಕರು ನಟಿಯ ನಡವಳಿಕೆ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  English summary
  Actress Charmi Kaur Starlet had Disrespected the Sikh Traditions by Not Covering Herself up While Visiting a Gurudwara in Portugal. Her half kurta Costume Without a Pant has Angered Some Conservative Traditionalists.
  Wednesday, June 14, 2017, 9:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X