For Quick Alerts
  ALLOW NOTIFICATIONS  
  For Daily Alerts

  ಅನುಪಮಾ ಗೌಡಗೆ ಸಿಕ್ತು ಬಂಪರ್ ಆಫರ್

  |

  ಕಿರುತೆರೆಯ ಖ್ಯಾತಿಯ ನಟಿ 'ಅಕ್ಕ', ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಈಗ ಸಖತ್ ಬ್ಯುಸಿಯಾಗಿದ್ದಾಕೆ. ಕಿರುತೆರೆ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಅನುಪಮಾ ಆನಂತರ ಬೆಳ್ಳಿತೆರೆಗೆ ಎಂಟ್ರಿ ಕೊಡುವ ಜೊತೆಗೆ ನಿರೂಪಕಿಯಾಗಿಯೂ ಮಿಂಚುತ್ತಿದ್ದಾರೆ.

  ಇದೆಲ್ಲದರ ಜೊತೆಗೀಗ ಅನುಪಮಾ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅನು ಈಗ ಇಂಡಿಪೆಂಡೆಂಟ್ ಫೀಚರ್ ಫಿಲ್ಮ್ ನಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ಇದು ಹಿಂದಿಯಲ್ಲಿ ತಯಾರಾಗುತ್ತಿದೆ. ಸ್ಯಾಂಡಲ್ ವುಡ್ ನ 'ಊರ್ವಿ' ಖ್ಯಾತಿಯ ನಿರ್ದೇಶಕ ಪ್ರದೀಪ್ ವರ್ಮಾ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

  ಚಿತ್ರಗಳು: 'ಬಾಲಿ'ಯಲ್ಲಿ 'ಬಿಗ್ ಬಾಸ್' ಹುಡುಗಿಯರ ಮಸ್ತ್ ಮಜಾ.!

  ಅಂದ್ಹಾಗೆ ಈ ಇಂಡಿಪೆಂಡೆಂಟ್ ಫೀಚರ್ ಫಿಲ್ಮ್ ಗೆ 'ದಿ ಫಾಲನ್' ಎಂದು ಹೆಸರಿಟ್ಟಿದ್ದಾರಂತೆ. ನಿರ್ದೇಶಕ ಪ್ರದೀಪ್ ವರ್ಮಾ ಈ ಮೊದಲೆ ಹಿಂದಿಯಲ್ಲಿ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಮಾರಾಸಿಮ್ ಎನ್ನುವ ಕಿರುಚಿತ್ರ ನಿರ್ಮಿಸಿರುವ ಪ್ರದೀಪ್ ಈಗ ದಿ ಫಾಲನ್ ಎನ್ನುವ ಚಿತ್ರ ತಯಾರಿಸುತ್ತಿದ್ದಾರೆ.

  'ದಿ ಫಾಲನ್' ಚಿತ್ರದ ವಿಶೇಷ ಅಂದ್ರೆ, ಇದು ಬರೋಬ್ಬರಿ 4 ಸಾವಿರ ವರ್ಷಗಳ ಹಿಂದಿನ ಕಥೆಯಂತೆ. ಕಲ್ಪನೆಗೂ ಮೀರಿದ ಕಥೆ ಚಿತ್ರದಲ್ಲಿ ಇದೆಯಂತೆ. ಸದ್ಯ ಇಷ್ಟು ರಿವೀಲ್ ಮಾಡಿರುವ ಚಿತ್ರತಂಡ ಪಾತ್ರದ ಬಗ್ಗೆ ಹೆಚ್ಚೇನು ಮಾಹಿತಿ ಬಿಟ್ಟು ಕೊಟ್ಟಿಲ್ಲ. ತುಂಬಾ ಅದ್ಧೂರಿಯಾಗಿ ಕಿರುಚಿತ್ರ ತಯಾರಾಗುತ್ತಿದ್ದು ಫೋಟೋಶೂಟ್ ಕೂಡ ಮಾಡಿಸುವ ಪ್ಲಾನ್ ಕೂಡ ಮಾಡಿದ್ದಾರಂತೆ.

  ಈ ಕಿರುಚಿತ್ರವನ್ನು ಲೇಹ್, ಲದಾಕ್, ಮನಾಲಿ ಸುತ್ತಮತ್ತ ಫೋಟೋಶೂಟ್ ಗೆ ತಯಾರಿ ಮಾಡಲಾಗುತ್ತಿದೆಯಂತೆ. ಅಲ್ಲದೆ 30 ದಿನಗಳ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆಯಂತೆ. ಸಧ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು ಈ ಚಿತ್ರದ ಬಗ್ಗೆ ಅನುಪಮಾ ಸಖತ್ ಎಕ್ಸಾಯಿಟ್ ಆಗಿದ್ದಾರೆ.

  English summary
  Kannada actress come anchor Anupama Gowda will play in Hindi short film. This short film is directed by Pradeep varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X