For Quick Alerts
  ALLOW NOTIFICATIONS  
  For Daily Alerts

  ಈ ಪುಟ್ಟ ಕಂದ ಯಾವ ಸೆಲೆಬ್ರಿಟಿ ಮಗು ಎಂದು ಗುರುತಿಸುವಿರಾ?

  |

  ಮುದ್ದು ಮುದ್ದಾಗಿರುವ ಪುಟ್ಟ ಕಂದನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಕರ್ಷಕವಾದ ಕಾಸ್ಟ್ಯೂಮ್ ಧರಿಸಿರುವ ಈ ಕಂದಮ್ಮ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅಂದ್ಹಾಗೆ ಈ ಕಾಸ್ಟ್ಯೂಮ್ ನೋಡಿದರೆ ಗೊತ್ತಾಗುತ್ತೆ ಇದು ಕೊಡವರ ಸಾಂಪ್ರದಾಯಿಕ ಉಡುವು ಎನ್ನುವುದು.

  ಕೊಡಗಿನ ಈ ಮುದ್ದಾದ ಕಂದಮ್ಮ ಮತ್ಯಾರು ಅಲ್ಲ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರ ಮಗು. ಹೌದು, ಶ್ವೇತಾ ಚಂಗಪ್ಪ ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಈಗ ನಾಲ್ಕು ತಿಂಗಳು. ಇದುವರೆಗೂ ಮಗನ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಆದರೀಗ ಮಗನ ಮೊದಲ ಮುದ್ದಾದ ಫೋಟೋವನ್ನು ಮತ್ತು ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ವಿಶೇಷ ದಿನದಂದು ಮಗನ ಫೋಟೋ ರಿವೀಲ್

  ವಿಶೇಷ ದಿನದಂದು ಮಗನ ಫೋಟೋ ರಿವೀಲ್

  ವಿಶೇಷ ದಿನ ಅಂದರೆ ಗಣರಾಜ್ಯ ದಿನದಂದು ಶ್ವೇತಾ ಮಗನ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ. ಇತ್ತೀಚಿಗೆ ಶ್ವೇತಾ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡದ್ದರು, ಆದರೆ ಮಗನ ಮುಖವನ್ನು ತೋರಿಸಿರಲಿಲ್ಲ. ಆದರೀಗ ಕೊಡಗಿನ ಉಡುಪು ಧರಿಸಿರುವ ಫೋಟೋ ಜೊತೆಗೆ ಶ್ವೇತಾ ಮಗ ದರ್ಶನ ನೀಡಿದೆ.

  ಮಗನೊಂದಿಗೆ ಮೊದಲ ಬಾರಿ ಪುತ್ತರಿ ಹಬ್ಬ ಆಚರಿಸಿದ ಶ್ವೇತಾ ಚೆಂಗಪ್ಪಮಗನೊಂದಿಗೆ ಮೊದಲ ಬಾರಿ ಪುತ್ತರಿ ಹಬ್ಬ ಆಚರಿಸಿದ ಶ್ವೇತಾ ಚೆಂಗಪ್ಪ

  ಜನವರಿ 26 ಶ್ವೇತಾಗೆ ವಿಶೇಷ ದಿನ

  ಜನವರಿ 26 ಶ್ವೇತಾಗೆ ವಿಶೇಷ ದಿನ

  ಜನವರಿ 26 ಗಣರಾಜ್ಯ ದಿನದ ವಿಶೇಷ ಒಂದಾದರೆ, ಶ್ವೇತಾ ಪಾಲಿಗಿದು ತುಂಬಾ ವಿಶೇಷವಾದ ದಿನ. ಯಾಕಂದ್ರೆ ಶ್ವೇತಾ ಜನವರಿ 26ರಂದು ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ ದಿನವಂತೆ. ಈ ಮೂಲಕ ಶ್ವೇತಾ ಚಂಗಪ್ಪ ಕನ್ನಡಿಗರಿಗೆ ಪರಿಚಯವಾದರು. ಅದೆ ವಿಶೇಷ ದಿನದಂದು ಮಗನನ್ನು ಪರಿಚಯಿಸಬೇಕೆಂದು ಕಾದು ಈಗ ಶ್ವೇತಾ ಮಗನನ್ನು ಪರಿಚಯಿಸಿದ್ದಾರೆ.

  ಮಗನ ಹೆಸರು ರಿವೀಲ್

  ಮಗನ ಹೆಸರು ರಿವೀಲ್

  ಶ್ವೇತಾ ಚಂಗಪ್ಪ ಮತ್ತು ಕಿರಣ್ ಅಪ್ಪಚ್ಚು ದಂಪತಿಯ ಮುದ್ದಾದ ಮಗುವಿಗೆ ಸುಂದರ ಹೆಸರಿಟ್ಟಿದ್ದಾರೆ. ಕೊಡವ ಸಾಂಪ್ರದಾಯ ಶೈಲಿಯ ಉಡುಪು ಧರಿಸಿ ಮಗನ ಫೋಟೋ ಜೊತೆಗೆ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಶ್ವೇತಾ ಮಗುವಿಗೆ 'ಜಿಯಾನ್ ಅಯ್ಯಪ್ಪ' ಎಂದು ನಾಮಕರಣ ಮಾಡಿದ್ದಾರೆ.

  ಶ್ವೇತಾ ಚಂಗಪ್ಪ ಸೀಮಂತ ಕಾರ್ಯದಲ್ಲಿ ಮಜಾ ಫ್ಯಾಮಿಲಿಶ್ವೇತಾ ಚಂಗಪ್ಪ ಸೀಮಂತ ಕಾರ್ಯದಲ್ಲಿ ಮಜಾ ಫ್ಯಾಮಿಲಿ

  ಸಾಮಾಜಿಕ ಜಾಲತಾಣದಲ್ಲಿ ಶ್ವೇತಾ ಹೇಳಿದ್ದೇನು?

  ಸಾಮಾಜಿಕ ಜಾಲತಾಣದಲ್ಲಿ ಶ್ವೇತಾ ಹೇಳಿದ್ದೇನು?

  ಶ್ವೇತಾ ಚಂಗಪ್ಪ ಮಗನ ಫೋಟೋವನ್ನು ರಿವೀಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. "ಇದೆ ದಿನ ಜನವರಿ 26ರಂದು, ಒಂದೂವರೆ ದಶಕಗಳ ಹಿಂದೆ ನಾನು ಮೊದಲ ಬಾರಿಗೆ ಕ್ಯಾಮರಾವನ್ನು ಎದುರಿಸಿದೆ. ನಿಮ್ಮಲ್ಲರಿಗೂ ಪರಿಚಯವಾದೆ. ಈ ಸ್ಮರಣೀಯ ದಿನದಂದು ನಾನು ನನ್ನ ಮಗನನ್ನು ಎಲ್ಲರಿಗೂ ಪರಿಚಯಿಸಲು ಬಯಸುತ್ತೇನೆ. ನನ್ನ ಪುಟ್ಟ ಹೃದಯ, ನನ್ನ ಜೀವನಕ್ಕೆ ಅಪಾರ ಸಂತಸ ತಂದ. ನನ್ನ ಪುಟ್ಟ ಕೊಡವ ಯೋಧ ಜಿಯಾನ್ ಅಯ್ಯಪ್ಪ. ನಿಮ್ಮೆಲ್ಲರಿಗೂ ಹಾಯ್ ಹೇಳುತ್ತಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಮಗನ ಮೇಲಿರಲಿ" ಎಂದು ಬರೆದುಕೊಂಡಿದ್ದಾರೆ.

  Read more about: shwetha chengappa baby ಮಗು
  English summary
  Kannada Actress come Anchor Shwetha Chengappa revealed her baby Photo and Name. Shweta changappa named her son Jiyaan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X