»   » ಬೆಂಗಳೂರಲ್ಲಿ ಚಿನ್ನದ ಮಳಿಗೆ ತೆರೆದ ದಿಯಾ ಮಿರ್ಜಾ

ಬೆಂಗಳೂರಲ್ಲಿ ಚಿನ್ನದ ಮಳಿಗೆ ತೆರೆದ ದಿಯಾ ಮಿರ್ಜಾ

Posted By:
Subscribe to Filmibeat Kannada

ಇತ್ತೀಚೆಗಷ್ಟೇ ದಾಂಪತ್ಯ ಗೀತೆ ಹಾಡಿದ ಬಾಲಿವುಡ್ ತಾರೆ ದಿಯಾ ಮಿರ್ಜಾ ಅವರಿಗೆ ಮದುವೆಯಾದ ಮೇಲೆ ಚಿನ್ನಾಭರಣಗಳ ಮೇಲೆ ಮನಸ್ಸಾಯಿತೆ? ಲಕಲಕ ಹೊಳೆಯುವ ವಜ್ರಾಭರಣಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯ ದಿಯಾಗೆ ಇಂದು ಕೂಡಿಬಂತು. ಕಣ್ತುಂಬಿಕೊಳ್ಳುವುದೇನು ಬಂತು ಚಿನ್ನಾಭರಣ ಮಳಿಗೆಯನ್ನೇ ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದ್ದಾರೆ.

ಶತಮಾನಗಳಷ್ಟು ಹಿರಿಯ ಸಂಸ್ಥೆಯಾಗಿರುವ ಕೆ.ಜಿ.ಕೆ. ಸಮೂಹದ ಅದ್ಭುತ ಚಿನ್ನಾಭರಣಗಳ ಬ್ರ್ಯಾಂಡ್ ನ ಎಂಟೈಸ್ ಬೂಟಿಕ್ ಕರ್ನಾಟಕದಲ್ಲಿ ತನ್ನ ಪ್ರಥಮ ಕೇಂದ್ರವನ್ನು ಉದ್ಯಾನ ನಗರಿ ಬೆಂಗಳೂರಿನ ಹೃದಯ ಭಾಗದಲ್ಲಿ ಬಾಗಿಲು ತೆರೆದಿದೆ. [ದಿಯಾಗೆ ಮದುವೆ ಮಂಟಪದಲ್ಲೇ ಮಕ್ಕಳ ಕನಸು]

Dia Mirza

ಬೆಂಗಳೂರಿನಲ್ಲಿ ಎಂಟೈಸ್ ಪ್ರಥಮ ಬೂಟಿಕ್ ಕೇಂದ್ರವನ್ನು ಬಾಲಿವುಡ್‍ ಮೋಹಕ ತಾರೆ ದಿಯಾ ಮಿರ್ಜಾ ಅವರು ಶನಿವಾರ (ಡಿಸೆಂಬರ್ 13) ಉದ್ಘಾಟಿಸಿದರು. ನಗರದ ರಿಚ್‍ಮಂಡ್ ವೃತ್ತದ ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿ ಕಾರ್ಯಾರಂಭ ಮಾಡಿದೆ ಎಂಟೈಸ್ ಬೂಟಿಕ್ ಕೇಂದ್ರ.

ಭಾರತದಲ್ಲಿ ಇದು ಎಂಟೈಸ್ ನ ಐದನೇ ಬೂಟಿಕ್ ಕೇಂದ್ರವಾಗಿದೆ. ಮುಂಬೈನಲ್ಲಿ ಎರಡು (ಒಪೇರಾ ಹೌಸ್ ಮತ್ತು ಬೋರಿವಿಲಿ), ದೆಹಲಿ ಹಾಗೂ ಜೈಪುರದಲ್ಲಿ ತಲಾ ಒಂದು ಬೂಟಿಕ್ ಗಳನ್ನು ಎಂಟೈಸ್ ಬ್ರ್ಯಾಂಡ್ ನಡಿ ಯಶಸ್ವಿಯಾಗಿ ನಡೆಸಲಾಗುತ್ತಿದೆ.

Dia Mirza

ಈಗ ಬೆಂಗಳೂರಿನಲ್ಲಿ (ಭಾರತದಲ್ಲಿ ಐದನೇ) ಹೊಸ ಕೇಂದ್ರವನ್ನು ಆರಂಭಿಸುವುದರೊಂದಿಗೆ ವಿಶ್ವದಾದ್ಯಂತ ಇರುವ ಎಂಟೈಸ್ ಬ್ರ್ಯಾಂಡ್ ನ ಬೂಟಿಕ್ ಗಳ ಸಂಖ್ಯೆ 17ಕ್ಕೇರಿದೆ. ಉದ್ಯಾನ ನಗರಿಯಲ್ಲಿ ಅದ್ದೂರಿಯಾಗಿ ಕಾರ್ಯಾರಂಭ ಮಾಡಿರುವ ಎಂಟೈಸ್ ಬೂಟಿಕ್, ವಿಶಿಷ್ಟ ವಜ್ರಗಳು ಮತ್ತು ಕುಂದನ್ ಪೊಲ್ಕಿ ವಿನ್ಯಾಸದ ಆಭರಣಗಳ ಸಂಗ್ರಹದ ಮೂಲಕ ಜನಾಕರ್ಷಕ ಎನಿಸಿಕೊಳ್ಳಲಿದೆ.
Dia Mirza

ಎರಡು ಅಂತಸ್ತುಗಳಲ್ಲಿ, 3 ಸಾವಿರ ಚದರಡಿಗಳಷ್ಟು ಸುವಿಸ್ತಾರವಾದ ಜಾಗದಲ್ಲಿ ಆಕರ್ಷಕ ಒಳಾಂಗಣ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆದುಕೊಳ್ಳಲು ಸಜ್ಜಾಗಿರುವ ಎಂಟೈಸ್ ಬೂಟಿಕ್, ಗ್ರಾಹಕರಿಗೆ ಖರೀದಿಯ ಎಲ್ಲ ಸೊಗಸು, ಖುಷಿಯನ್ನೂ ಹೆಚ್ಚಿಸಲಿದೆ. (ಫಿಲ್ಮಿಬೀಟ್ ಕನ್ನಡ)
English summary
Entice, the fine jewellery brand by the century old KGK group, has inaugurated its boutique in the Garden city- Bengaluru. Renowned Bollywood actress, Dia Mirza, inaugurated the boutique, situated in the choicest location of Richmond Circle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada