For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ನಟಿ ಡಿಸ್ಕೋ ಶಾಂತಿ ಪುತ್ರ ಎಂಟ್ರಿ

  |

  ಇಂದಿನ ಐಟಂ ಸಾಂಗ್ ನಟಿಯರು ಯಾರು ಎನ್ನುವುದು ಅನೇಕರಿಗೆ ತಿಳಿಯುವುದಿಲ್ಲ. ಆದರೆ, ಒಂದು ಕಾಲದಲ್ಲಿ ತನ್ನ ಐಟಂ ಸಾಂಗ್ ಗಳ ಮೂಲಕವೇ ಸ್ಡಾರ್ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದು, ನಟಿ ಶಾಂತಿ, ಅಲಿಯಾಸ್ ಡಿಸ್ಕೋ ಶಾಂತಿ.

  ಕನ್ನಡ, ತಮಿಳು, ತೆಲುಗು, ಹಿಂದಿ ಎಲ್ಲ ಚಿತ್ರರಂಗದಲ್ಲಿಯೂ ಡಿಸ್ಕೋ ಶಾಂತಿ ವೈಯಾರ ತೋರಿಸಿದ್ದರು. ಕನ್ನಡದಲ್ಲಿ ಅಂಜದ ಗಂಡು, ಸಾಂಗ್ಲಿಯಾನ, ಯುದ್ಧಕಾಂಡ, ಗಂಡುಗಲಿ, ಸಿಬಿಐ ಶಂಕರ್, ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಇವರ ಹಾಡು ಇದೆ. ನೂರಕ್ಕೂ ಹೆಚ್ಚು ಸಿನಿಮಾಗಳ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

  ತಮಿಳು 'ಸರಿಗಮಪ'ಗೆ ಆಯ್ಕೆಯಾದ ಕನ್ನಡದ ಐಶ್ವರ್ಯ

  ಡಿಸ್ಕೋ ಶಾಂತಿ ನಂತರ ಅವರ ಹೆಸರನ್ನು ಮತ್ತಷ್ಟು ಹೆಚ್ಚು ಮಾಡಲು ಅವರ ಮಗ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರ ಮಗ ಯಾರು, ಯಾವ ಸಿನಿಮಾ ಎನ್ನುವ ವಿವರ ಮುಂದಿದೆ ಓದಿ....

  ನಟ ಮೇಘಾಂಶ್ ಚಿತ್ರರಂಗಕ್ಕೆ

  ನಟ ಮೇಘಾಂಶ್ ಚಿತ್ರರಂಗಕ್ಕೆ

  ನಟಿ ಡಿಸ್ಕೋ ಶಾಂತಿ ಪುತ್ರನ ಹೆಸರು ಮೇಘಾಂಶ್. ಈಗ ಇವರು ಚಿತ್ರರಂಗಕ್ಕೆ ಬರುವ ತಯಾರಿ ನಡೆಸಿದ್ದಾರೆ. ತಮ್ಮ ತಾಯಿಯ ಸಿನಿಮಾ ಕೆರಿಯರ್ ಗಮನಿಸಿ, ತಾನು ಕೂಡ ಹೀರೋ ಆಗಬೇಕು ಎಂದು ಕನಸು ಕಂಡಿದ್ದ ಮೇಘಾಂಶ್ ಆಸೆ ಅಂತು ಈಡೇರುತ್ತಿದೆ. ಮದುವೆಯ ಬಳಿಕ ಡಿಸ್ಕೋ ಶಾಂತಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ನಿಲ್ಲಿಸಿದ್ದು, ಈಗ ಅವರ ಮಗ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ.

  ವರ್ಮಾ ಮಾಡಿದ ಆ ಚಿತ್ರದಿಂದಲೇ ಸಿಎಂ ಸ್ಥಾನ ಕಳೆದುಕೊಂಡ್ರಂತೆ ಚಂದ್ರಬಾಬು.!

  ಟಾಲಿವುಡ್ ನಿಂದ ಸಿನಿಮಾ ಎಂಟ್ರಿ

  ಟಾಲಿವುಡ್ ನಿಂದ ಸಿನಿಮಾ ಎಂಟ್ರಿ

  ನಾಲ್ಕು ಚಿತ್ರರಂಗದಲ್ಲಿ ಡಿಸ್ಕೋ ಶಾಂತಿ ಸಿನಿಮಾ ಮಾಡಿದ್ದು, ಅವರ ಮಗ ಯಾವ ಚಿತ್ರರಂಗದಿಂದ ಲಾಂಚ್ ಆಗುತ್ತಾರೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅಂದಹಾಗೆ, ಮೇಘಾಂಶ್ ಟಾಲಿವುಡ್ ನಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ರಾಜಧೂತ್' ಎಂಬ ತೆಲುಗು ಚಿತ್ರ ಅವರ ಮೊದಲ ಸಿನಿಮಾವಾಗಿದೆ.

  'ರಾಜಧೂತ್' ಸಿನಿಮಾ

  'ರಾಜಧೂತ್' ಸಿನಿಮಾ

  'ರಾಜಧೂತ್' ಎಂಬ ತೆಲುಗು ಸಿನಿಮಾದ ಮೂಲಕ ಮೇಘಾಂಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಲವರ್ ಬಾಯ್ ಗೆಟಪ್ ನಲ್ಲಿ ಮೇಘಾಂಶ್ ಕಾಣಿಸಿಕೊಳ್ಳುತ್ತಿದ್ದಾರೆ. 'ರಾಜಧೂತ್' ಮಾಸ್ ಹಾಗೂ ಸೆಂಟಿಮೆಂಟ್ ಅಂಶಗಳನ್ನು ಹೊಂದಿರುವ ಸಿನಿಮಾವಾಗಿದೆ. 'ರಾಜಧೂತ್' ಎಂಬ ಟೈಟಲ್ ಪವರ್ ಫುಲ್ ಆಗಿದ್ದು, ಚಿತ್ರಕ್ಕೆ ಆ ಹೆಸರನ್ನು ಇಡಲಾಗಿದೆ.

  ಅರ್ಜುನ್ ನಿರ್ದೇಶನ

  ಅರ್ಜುನ್ ನಿರ್ದೇಶನ

  ಅರ್ಜುನ್ ಎಂಬುವವರು ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಲಕ್ಷ್ಯ ಬ್ಯಾನರ್​ನಲ್ಲಿ ಸತ್ಯನಾರಾಯಣ ಎಂಬುವವರು ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಟಾಲಿವುಡ್ ಇಂಡಸ್ಟ್ರಿ ಮೂಲಕ ಮೇಘಾಂಶ್ ಸಿನಿಮಾ ಪಯಣ ಶುರು ಆಗುತ್ತಿದೆ. ಈ ಸಿನಿಮಾ ಇನ್ನಷ್ಟು ಮಾಹಿತಿ ಮುಂದಿನ ದಿನದಲ್ಲಿ ತಿಳಿಯಲಿದೆ.

  English summary
  Kannada actress Disco Shanti son Meghamsh making his tollywood debut from Rajdoot movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X