»   » ಧೂಮ್ ಗರ್ಲ್ ಇಶಾ ಈಗ ಕೇರ್ ಆಫ್ ಫುಟ್ ಪಾತ್

ಧೂಮ್ ಗರ್ಲ್ ಇಶಾ ಈಗ ಕೇರ್ ಆಫ್ ಫುಟ್ ಪಾತ್

By: ಜೀವನರಸಿಕ
Subscribe to Filmibeat Kannada

"ಧೂಮ್ ಮಚಾಲೇ ಧೂಮಚಾಲೇ..." ಅಂತ ಪಡ್ಡೆಗಳ ಎದೆಗೆ ಕೊಳ್ಳಿ ಇಟ್ಟಿದ್ದ ಹಾಟ್ ಅಂಡ್ ಸ್ವೀಟ್ ಧೂಮ್ ಗರ್ಲ್ ಇಶಾ ಡಿಯೋಲ್ ಕೇರ್ ಆಫ್ ಫುಟ್ಪಾತ್-2 ಅಂದ್ರೆ ಅವರ ಗಂಡ ಬಿಟ್ಟುಬಿಟ್ರಾ ಇಲ್ಲಾ ಏನಾಯ್ತು ಈ ಚೆಂದುಳ್ಳಿ ಚೆಲುವೆಗೆ ಅಂತ ಶಾಕ್ ಆಯ್ತಾ. ಹಾಗೇನೂ ಇಲ್ಲ ಇಶಾ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ರು..

ಸದ್ಯ ಇಶಾ ಬೆಂಗಳೂರಿಗೆ ಬಂದಿದ್ದು ಗಿನ್ನಿಸ್ ದಾಖಲೆಯ ನಿರ್ದೇಶಕ ಕಿಶನ್ ನಿರ್ದೇಶನದ 'ಕೇರ್ ಆಫ್ ಫುಟ್ ಪಾತ್-2' ಸಿನಿಮಾದಲ್ಲಿ ನಟಿಸೋಕೆ. ಈ ಧೂಮ್ ಗರ್ಲ್ ಬೆಂಗಳೂರಿಗೆ ಬಂದು ಕನ್ನಡತಿಯಾಗಿ ಕಾಣಿಸಿಕೊಂಡಿದ್ದಾರೆ. [ಅಗ್ನಿಸಾಕ್ಷಿಯಾಗಿ ಇಷಾ ಡಿಯೋಲ್ ಕೈಹಿಡಿದ ಭರತ್]

ಶುಭ್ರವಾಗಿ, ಸಿಂಪಲ್ಲಾಗಿ ಸೀರೆ ಉಟ್ಟು ನಮ್ಮೂರ ಹುಡುಗಿ ತರಹ ಕಾಣಿಸಿಕೊಂಡ್ರು. ಕನ್ನಡ ಹಿಂದಿ ಭಾಷೆಯಲ್ಲಿ ತಯಾರಾಗ್ತಿರೋ 'ಕೇರ್ ಆಫ್ ಫುಟ್ಪಾತ್-2' ಸಿನಿಮಾದಲ್ಲಿ ಇಶಾ ಡಿಯೋಲ್ ಮಾಡ್ತಿರೋ ಪಾತ್ರವಾದ್ರೂ ಏನು. ಕನಸಿನ ಕನ್ಯೆಯ ಪುತ್ರಿಗೆ ಕನ್ನಡದ ಎಂಟ್ರಿ ಸಿಕ್ಕಿದ್ದು ಹೇಗೆ ಅನ್ನೋ ಇಂಟರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ.

ಇಶಾ ಅಡ್ವೋಕೇಟ್ ಪಾತ್ರದಲ್ಲಿ

ಈ ಚೆಂದುಳ್ಳಿ ಚೆಲುವೆ ಅಡ್ವೋಕೇಟ್ ಪಾತ್ರ ಮಾಡ್ತಿದ್ದಾರೆ. ಕೇರ್ ಆಫ್ ಫುಟ್ ಪಾತ್ ಸಿನಿಮಾ ಬಾಲಾಪರಾಧಕ್ಕೆ ಸಂಬಂಧಪಟ್ಟಿದ್ದಾಗಿದ್ದು ಈಶಾ ಇಲ್ಲಿ ಬಾಲಾಪರಾಧಿಗಳಿಂದ ಸತ್ಯವನ್ನ ಹೊರಗೆಡಹೋ ಅಡ್ವೋಕೇಟ್ ಪಾತ್ರ ಮಾಡ್ತಿದ್ದಾರೆ.

ಕನ್ನಡತಿಯಂತೆ ಕಂಗೊಳಿಸಿದ ಇಶಾ

ಅಡ್ವೋಕೇಟ್ ಪಾತ್ರದಲ್ಲಿ ಕೂಡ ಕನ್ನಡತಿಯಂತೆ ಕಂಗೊಳಿಸ್ತಾ ಇದ್ದ ಇಶಾ, ಕನ್ನಡ ಬರುತ್ತಾ ಅಂದ್ರೆ ಕನ್ನಡ ಬರೋದಿಲ್ಲ ಆದರೆ ಅಮ್ಮ ತಮಿಳಿನವರಾಗಿರೋದ್ರಿಂದ ಸೌತ್ ಇಂಡಿಯನ್ ಸಂಸ್ಕೃತಿ ಗೊತ್ತು ಅಂತಾರೆ.

ಮನೆಯಲ್ಲಿ ತಮಿಳು ಮಾತ್ನಾಡ್ತಾರೆ

ಸೂಪರ್ ಸ್ಟಾರ್ ದಂಪತಿಯಾದ ಹೇಮಾ ಮಾಲಿನಿ ಧರ್ಮೇಂದ್ರ ಪುತ್ರಿಯಾಗಿರೋ ಇಶಾ ಡಿಯೋಲ್ ತಂದೆ ಧರ್ಮೇಂದ್ರ ಪಂಜಾಬಿಯಾದ್ರೂ ತಾಯಿ ಹೇಮಾಮಾಲಿನಿ ತಮಿಳು. ತಂದೆಗಿಂತ ತಾಯಿಯ ಭಾಷೇನೇ ಹೆಚ್ಚು ಮಾತ್ನಾಡೋದು ಅಂತಾರೆ.

ಹೇಮಾಮಾಲಿನಿ ಮಾಡ್ಬೇಕಿದ್ದ ಪಾತ್ರ

ಇಶಾ ಡಿಯೋಲ್ ಮಾಡ್ತಿರೋ ಅಡ್ವೋಕೇಟ್ ಮತ್ತು ಸಾಮಾಜಿಕ ಕಾರ್ಯಕರ್ತೆ ಪಾತ್ರವನ್ನ ಹೇಮಾ ಮಾಲಿನಿ ಮಾಡ್ಬೇಕಿತ್ತು. ಆದರೆ ಚುನಾವಣೆಗೆ ನಿಂತಿರೋದ್ರಿಂದ ಹೇಮಾ ಪಾತ್ರ ಮಗಳ ಪಾಲಾಯ್ತು.

ಮಥುರಾ ಎಲೆಕ್ಷನ್ ಕ್ಯಾಂಪೇನ್ ಮುಗಿಸಿಬಂದ ಇಶಾ

ಇಶಾ ಡಿಯೋಲ್ ಮಥುರಾದಲ್ಲಿ ಅಮ್ಮ ಹೇಮಾಮಾಲಿನಿ ಪರ ಭರ್ಜರಿ ಪ್ರಚಾರ ನಡೆಸಿ ನೇರವಾಗಿ ಬೆಂಗಳೂರಿಗೆ ಬಂದಿದ್ರು. ಬೆಂಗಳೂರು ಸೂಪರ್ ಅಂದ್ರು.

ಮನೆಯಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು ಮಾಡ್ತೀವಿ

ಸೌತ್ ಇಂಡಿಯನ್ ತಿಂಡಿ ಎಲ್ಲವನ್ನೂ ಮಾಡ್ತೀವಿ ಅನ್ನೋ ಇಶಾ ಅಮ್ಮನಿಂದ ಎಲ್ಲವನ್ನ ಕಲಿತಿದ್ದೀನಿ. ಸೌತ್ ಇಂಡಿಯನ್ ಫುಡ್ ಇಷ್ಟ ಅಂತಾರೆ

ಆಬ್ ಕಿ ಬಾರ್ ಕಾಂಗ್ರೆಸ್ ಢಮಾರ್

ಬಿಜೆಪಿಯಲ್ಲಿ ಸ್ಪರ್ಧಿಸಿರೋ ಅಮ್ಮ ಹೇಮಾ ಮಾಲಿನಿ ಪರವಾಗಿ ಪ್ರಚಾರ ಮಾಡಿರೋ ಈಶಾ ಆಬ್ ಕಿ ಬಾರ್ ಮೋದಿ ಸರ್ಕಾರ್ ಜೊತೆಗೆ ಕಾಂಗ್ರೆಸ್ ಢಮಾರ್ ಅಂತಾರೆ.

ಆಗಸ್ಟ್ ವೇಳೆಗೆ ಕೇರ್ ಆಫ್ ಫುಟ್ ಪಾತ್ ರಿಲೀಸ್

ಹತ್ತು ಹಲವು ವಿಶೇಷತೆಗಳ ಕೇರ್ ಆಫ್ ಫುಟ್ ಪಾತ್ ಶೇಕಡ 80 ಶೂಟಿಂಗ್ ಮುಗಿಸಿರೋ ಕಿಶನ್ ಅಂಡ್ ಟೀಂ ಆಗಸ್ಟ್ ವೇಳೆಗೆ ವರ್ಲ್ಡ್ ವೈಡ್ ರಿಲೀಸ್ ಮಾಡೋ ಯೋಚನೆಯಲ್ಲಿದೆ. ಚಿತ್ರದಲ್ಲಿ ಸೂಪರ್ ಸ್ಟಾರ್ 'ಜೆಕೆ' ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ.

English summary
Bollywood star Esha Deol, daughter of Hema Malini & Dharmendra is playing a lawyer role in Master Kishan's 'C/o Footpath 2'. The film produced by Kiran Movie Makers, directed by Kishan SS, world's youngest director, is a sequel to the 2006 movie 'C/o Footpath'
Please Wait while comments are loading...