»   » ಎರಡನೇ ಇನ್ನಿಂಗ್ಸ್ ಗೆ ಸಿದ್ಧವಾದ 'ಗಿರಿಬಾಲೆ' ಗೀತಾ

ಎರಡನೇ ಇನ್ನಿಂಗ್ಸ್ ಗೆ ಸಿದ್ಧವಾದ 'ಗಿರಿಬಾಲೆ' ಗೀತಾ

Posted By:
Subscribe to Filmibeat Kannada
Actress Geetha
ಗಿರಿ ಬಾಲೆ, ಎರಡು ರೇಖೆಗಳು (ಕೆ ಬಾಲಚಂದರ್ ನಿರ್ದೇಶನ), ರಾಮಾಪುರದ ರಾವಣ, ಮಿಥಿಲೆಯ ಸೀತೆಯರು, ಆಕಸ್ಮಿಕ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿರುವ ಗೀತಾ ಅವರು ಕನ್ನಡದಲ್ಲಿ ಎರಡನೆ ಇನ್ನಿಂಗ್ಸ್ ಗೆ ಸಿದ್ಧವಾಗಿದ್ದಾರೆ.

ಮಮತೆಯ ಮಡಿಲು, ಧೃವತಾರೆ, ಅರುಣರಾಗ, ಅನುರಾಗ ಅರಳಿತು, ಶೃತಿ ಸೇರಿದಾಗ, ದೇವತಾ ಮನುಷ್ಯ...ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿದ್ದ ಗೀತಾ ತಮ್ಮ ಪಾತ್ರಗಳ ಮೂಲಕ ಮನೆ ಮಾತಾಗಿದ್ದಾರೆ. ಈಗವರು ಕನ್ನಡದ 'ಮೀನಾಕ್ಷಿ' ಚಿತ್ರಕ್ಕೆ ಸಹಿಹಾಕುವ ಮೂಲಕ ಪುನರಾಗಮಿಸಿದ್ದಾರೆ.

'ಮೀನಾಕ್ಷಿ' ಚಿತ್ರವನ್ನು ನಿರ್ಮಿಸುತ್ತಿರುವ ವಜ್ರೇಶ್ವರಿ ರಮೇಶ್ ಅವರು ಕಥೆ ಹೇಳಿದ ಕೂಡಲೆ ಗೀತಾ ತಮ್ಮ ಒಪ್ಪಿಗೆ ಸೂಚಿಸಿದರಂತೆ. ಶುಭಾ ಪೂಂಜಾ ಹಾಗೂ ರಘು ಮುಖರ್ಜಿ ಅವರು ಮುಖ್ಯಪಾತ್ರಗಳಲ್ಲಿರುವ ಚಿತ್ರ ಇದಾಗಿದೆ.

ಶ್ರೀಧರ್ ಹೆಗಡೆ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ರಿಯಲ್ ಎಸ್ಟೇಟ್ ಮಾಫಿಯಾದ ಕಥಾಹಂದವರನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಗೀತಾ ಅವರು ನ್ಯಾಯಮೂರ್ತಿಯಾಗಿ ಗಮನಾರ್ಹ ಪಾತ್ರವನ್ನು ಪೋಷಿಸಲಿದ್ದಾರೆ. ಅವರ ಆಗಮನದಿಂದ ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ಪೋಷಕ ತಾರೆ ಸಿಕ್ಕಂತಾಗಿದೆ.

ಕೆಲವು ಕಾಲ ಕಿರುತೆರೆ ಧಾರಾವಾಹಿಗಳಲ್ಲೂ ಗೀತಾ ಅವರು ಬಿಜಿಯಾಗಿದ್ದರು. 1997ರಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ವಾಸನ್ ಅವರನ್ನು ವರಿಸಿದ ಬಳಿಕ ನ್ಯೂಯಾರ್ಕ್ ಗೆ ಸ್ಥಳಾಂತರವಾಗಿದ್ದರು. ಆ ಬಳಿಕ ಅವರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಅಪರೂಪ.

ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಅವರ ಆಗಮನವಾಗಿದೆ. ಡಾ.ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್ ಹಾಗೂ ಅನಂತನಾಗ್ ಅವರ ಜೊತೆ ಅಭಿನಯಿಸಿದ ಗೀತಾ ಅವರಿಗೆ ಈಗ ವಯಸ್ಸು 50 ಆಗಿದ್ದರೂ ಇನ್ನೂ ಪುಟಿಯುವ ಉತ್ಸಾಹ ಅವರದು. (ಏಜೆನ್ಸೀಸ್)

English summary
Ester years South Indian popular actress Geetha back to Kannada films. She make a comeback in the latest Kannada movie Meenakshi. She accepted the role of a judge in the Kannada film. Shuba Punja and Raghu Mukerjee play lead roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada