»   » ಟಾಲಿವುಡ್ ನಲ್ಲಿ ನಟಿ ಹರಿಪ್ರಿಯಾ ಲುಂಗಿ 'ಗಲಾಟೆ'

ಟಾಲಿವುಡ್ ನಲ್ಲಿ ನಟಿ ಹರಿಪ್ರಿಯಾ ಲುಂಗಿ 'ಗಲಾಟೆ'

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಚತುರ್ಭಾಷಾ ತಾರೆ ಹರಿಪ್ರಿಯಾರ ಲಂಗ ದಾವಣಿ ಬಿಟ್ಟು ಲುಂಗಿಗೆ ಶರಣಾಗಿದ್ದಾರೆ. ಇಷ್ಟು ದಿನ ಲಂಗ ದಾವಣಿಯಲ್ಲಿ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಹರಿಪ್ರಿಯಾ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹಾಕಿ ಲುಂಗಿಯಲ್ಲಿ ದರ್ಶನ ಭಾಗ್ಯ ನೀಡಿದ್ದಾರೆ.

ತಮ್ಮ ಮುಂದಿನ ಚಿತ್ರಕ್ಕಾಗಿ ಹರಿಪ್ರಿಯಾರ ಹೊಸ ವೇಷವಿದು. ಈಗ ಈ ಚಿತ್ರ ಟಾಲಿವುಡ್ ನಲ್ಲಿ ಭಾರಿ ಸಂಚಲನ ಮೂಡಿಸಿದೆ. ತಮ್ಮ ಮುಂದಿನ ಚಿತ್ರ 'ಗಲಾಟ' ಚಿತ್ರದ ಸನ್ನಿವೇಶವೊಂದರಲ್ಲಿ ಹರಿಪ್ರಿಯಾ ಈ ರೀತಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ. [ಸದಾಶಿವನಗರದಲ್ಲಿ ನಮ್ಮ ಮನೆಯೇ ಇಲ್ಲ]


ಈ ಬಗ್ಗೆ ಹರಿಪ್ರಿಯಾ ಮಾತನಾಡುತ್ತಾ, "ಮೊದಲು ಲುಂಗಿ ಧರಿಸಲು ತಿರಸ್ಕರಿಸಿದೆ. ಆದರೆ ಆ ಸನ್ನಿವೇಶದ ಪ್ರಾಮುಖ್ಯತೆಯನ್ನು ನಿರ್ದೇಶಕರು ಮನವರಿಕೆ ಮಾಡಿಕೊಟ್ಟ ಮೇಲೆ ಅಂಗೀಕರಿಸಿದೆ." ಎಂದಿದ್ದಾರೆ.

ಈ ಲುಂಗಿ ಗೆಟಪ್ ಸಿನಿಮಾದ ಇಂಟ್ರಡಕ್ಷನ್ ಹಾಡಿನಲ್ಲಿ ಬರುತ್ತದೆ. ಈ ಹಾಡಿನಲ್ಲಿ ಅದ್ಭುತ ಸ್ಟೆಪ್ಸ್ ಹಾಕಿದ್ದೇನೆ. ಹಾಡನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇನೆ. ಅಭಿಮಾನಿಗಳಿಗೂ ಈ ಹಾಡು ಖಂಡಿತ ಇಷ್ಟವಾಗುತ್ತದೆ ಎಂದಿದ್ದಾರೆ ಹರಿಪ್ರಿಯಾ.

ಇನ್ನು ಹರಿಪ್ರಿಯಾ ಅಭಿನಯದ ಸಾಕಷ್ಟು ಕನ್ನಡ ಚಿತ್ರಗಳು ಬಿಡುಗಡೆಯಾಗಬೇಕಿವೆ. ಶ್ರೀಮುರಳಿ ಜೊತೆಗಿನ ಉಗ್ರಂ, ಕ್ರೇಜಿಸ್ಟಾರ್ ಜೊತೆಗಿನ ಮಂಜಿನ ಹನಿ ಹಾಗೂ ರಣತಂತ್ರ ಚಿತ್ರಗಳು ಇನ್ನೂ ಚಿತ್ರೀಕರಣ ಹಂತದಲ್ಲಿವೆ.

English summary
"I had some doubts initially as the prospect of wearing a lungi did terrify me. It isn't the most glamourous of outfits and it was my introduction song in the Galatta movie" Hari Priya said.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada