»   » ಹೊಸ ದಾಖಲೆ ಬರೆದ ಕನ್ನಡದ ನಟಿ 'ಹರಿಪ್ರಿಯಾ'

ಹೊಸ ದಾಖಲೆ ಬರೆದ ಕನ್ನಡದ ನಟಿ 'ಹರಿಪ್ರಿಯಾ'

Posted By:
Subscribe to Filmibeat Kannada

'ನೀರ್ ದೋಸೆ' ನಾಯಕಿ ಹರಿಪ್ರಿಯಾ ಈಗ ಸಖತ್ ಬ್ಯುಸಿ. ಕೈನಲ್ಲಿ ಸಾಕಷ್ಟು ಸಿನಿಮಾಗಳನ್ನ ಇಟ್ಟುಕೊಂಡಿರುವ ಹರಿಪ್ರಿಯಾ ಹೊಸ ದಾಖಲೆಯನ್ನ ಸೃಷ್ಟಿ ಮಾಡಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಇಲ್ಲಿ ತನಕ ಯಾವುದೇ ಹೀರೋಯಿನ್ಸ್ ಮಾಡಿರದ ರೆಕಾರ್ಡ್ ನ ಈಗ ಹರಿಪ್ರಿಯಾ ಅವರ ಹೆಸರಿನಲ್ಲಿದೆ.

ಅಷ್ಟಕ್ಕೂ ಈ ನಾಯಕಿ ಮಾಡಿರುವ ದಾಖಲೆಯಾದರೂ ಏನು.? ದಾಖಲೆಗಾಗಿ ಹರಿಪ್ರಿಯಾ ತಯಾರಿ ಅಥವಾ ಸಾಹಸ ಏನಾದರೂ ಮಾಡಿದ್ರಾ ಅಂದರೆ ಖಂಡಿತ ಇಲ್ಲ. ಹರಿಪ್ರಿಯಾ ಪ್ರತಿಭೆಗೆ ಈಗ ಫಲ ಸಿಕ್ಕಿದೆ. ಆ ಹೊಸ ದಾಖಲೆಯ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ...

ಹರಿಪ್ರಿಯಾ ಹೆಸರಲ್ಲಿ ಸೃಷ್ಟಿಯಾಯ್ತು ದಾಖಲೆ

ಚಿತ್ರರಂಗದಲ್ಲಿ ಹರಿಪ್ರಿಯಾ 17 ವರ್ಷಗಳಿಂದ ನಾಯಕಿಯಾಗಿ ಮಿಂಚುತಿರುವ ನಟಿ. ಈ ಹಿಂದೆ ಯಾವುದೇ ನಾಯಕಿಯರು ಸೃಷ್ಟಿ ಮಾಡಿರದ ದಾಖಲೆಯನ್ನ ಹರಿಪ್ರಿಯಾ ಮಾಡಿದ್ದಾರೆ. ಒಂದೇ ಕುಟುಂಬದ ಮೂವರು ಕಲಾವಿದರ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಟಾಲಿವುಡ್ ನಟ ಬಾಲಕೃಷ್ಣ ಜೊತೆ ನಟಿಸಲಿದ್ದಾರೆ 'ನೀರ್ ದೋಸೆ' ಹರಿಪ್ರಿಯಾ

ಸರ್ಜಾ ಫ್ಯಾಮಿಲಿ ವಿತ್ ಹರಿಪ್ರಿಯಾ

ಸರ್ಜಾ ಫ್ಯಾಮಿಲಿಯ ಮೂವರು ನಾಯಕರಾದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಮೂರು ನಾಯಕರ ಜೊತೆ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಹಿಂದೆ ಯಾವ ಹೀರೋಯಿನ್ ಕೂಡ ಈ ಮೂವರ ಜೊತೆ ಆಕ್ಟ್ ಮಾಡಿಲ್ಲ.

ಹರಿಪ್ರಿಯ ಹೆಸರಲ್ಲಿ ದಾಖಲೆ

'ಕುರುಕ್ಷೇತ್ರ'ದಲ್ಲಿ ಅರ್ಜುನ್ ಸರ್ಜಾ ಜೊತೆಯಲ್ಲಿ ಹಾಗೂ ಧ್ರುವ ಸರ್ಜಾ ಜೊತೆಯಲ್ಲಿ 'ಭರ್ಜರಿ' ಸಿನಿಮಾದಲ್ಲಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಇನ್ನು ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಟಾಲಿವುಡ್ ಬಾಲಯ್ಯ ಸಿನಿಮಾದಲ್ಲಿ ನೀರ್ ದೋಸೆ ಬೆಡಗಿ ಹರಿಪ್ರಿಯಾ.!

ಬ್ಯುಸಿಯಾಗಿರುವ ನಟಿ

ಕುರುಕ್ಷೇತ್ರ, ಸಂಹಾರ, ಸೂಜಿದಾರ, ಲೈಫ್ ಜೊತೆ ಒಂದ್ ಸೆಲ್ಫಿ ಇವುಗಳ ಜೊತೆಯಲ್ಲಿ ಟಾಲಿವುಡ್ ನಲ್ಲಿ ಬಾಲಯ್ಯ ಅಭಿನಯದ ಸಿನಿಮಾದಲ್ಲಿ ಹರಿಪ್ರಿಯಾ ಅಭಿನಯಿಸುತ್ತಿದ್ದಾರೆ. ಇವಷ್ಟೇ ಅಲ್ಲದೆ ಸಾಕಷ್ಟು ವಿಭಿನ್ನ ಪಾತ್ರಗಳು ಹರಿಪ್ರಿಯರನ್ನ ಹುಡುಕಿ ಬರ್ತಿದೆ.

English summary
By acting with three heroes of Sarja Family, Actress Haripriya creates a new record in Kannada cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada