For Quick Alerts
  ALLOW NOTIFICATIONS  
  For Daily Alerts

  ಕೂದಲೆಳೆಯ ಅಂತರದಲ್ಲಿ ಪಾರಾದ ನಟಿ ಹರಿಪ್ರಿಯಾ

  By Suneetha
  |

  ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸುದ್ದಿಯಲ್ಲಿರುವ ನಟಿ ಯಾರು ಅಂದ್ರೆ ಅದು ಹರಿಪ್ರಿಯಾ ಅಂತಾನೇ ಹೇಳಬಹುದು. ಮೊನ್ನೆ ಮೊನ್ನೆ ಬಿಡುಗಡೆ ಆದ 'ರಿಕ್ಕಿ' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ಹರಿಪ್ರಿಯಾ ಅವರು ಇದೀಗ ಕೈ ತುಂಬಾ ಹೊಸ ಪ್ರಾಜೆಕ್ಟ್ ಗಳನ್ನು ಹಿಡಿದು ಓಡಾಡುತ್ತಿದ್ದಾರೆ.

  ಹೌದು ಬರೀ ಕನ್ನಡದಲ್ಲಿ ಮಾತ್ರವಲ್ಲದೇ, ತಮಿಳು ಭಾಷೆಯ ಸಿನಿಮಾದಲ್ಲೂ ಬ್ಯುಸಿಯಾಗಿರುವ ನಟಿ ಸದ್ಯಕ್ಕೆ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿರುವ 'ಅಥರ್ವನಂ' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.[ತುಂಡುಡುಗೆಯಲ್ಲಿ 'ಹಲೋ ಹಾಯ್' ಅಂತಿದ್ದಾರೆ ಹರಿಪ್ರಿಯಾ]

  ಇನ್ನು ಸದಾ ಪಕ್ಕದ್ಮನೆಯ ಹುಡುಗಿಯ ಪಾತ್ರ ವಹಿಸುತ್ತಿದ್ದ ಕನ್ನಡದ ಹುಡುಗಿ ನಟಿ ಹರಿಪ್ರಿಯಾ ಅವರು 'ನೀರ್ ದೋಸೆ' ಸಿನಿಮಾದ ಮೂಲಕ ಸಖತ್ ಹಾಟ್ ಸೀನ್ ಗಳಲ್ಲಿ ಮೈ ಚಳಿ ಬಿಟ್ಟು ನಟಿಸಲು ತೊಡಗಿದರು. ಜೊತೆಗೆ ಸಾಧು ಕೋಕಿಲಾ ನಿರ್ದೇಶನದ 'ಭಲೇ ಜೋಡಿ' ಸಿನಿಮಾದಲ್ಲೂ ಒಂದು ಐಟಂ ಸಾಂಗ್ ಗೆ ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ.[ನಟಿ ಹರಿಪ್ರಿಯಾ ಜೊತೆ ಅಪರಿಚಿತ ಯುವಕನ ಅಸಭ್ಯ ವರ್ತನೆ]

  ಅಂದಹಾಗೆ ನಟಿ ಹರಿಪ್ರಿಯಾ ಅವರು ತಾವು ನಟಿಸೋ ಚಿತ್ರದ ಬಗ್ಗೆ ಎಷ್ಟು ಶ್ರದ್ಧೆ ವಹಿಸುತ್ತಾರೆ ಎಂಬುದಕ್ಕೆ ಸದ್ಯಕ್ಕೆ ಅವರು ನಟಿಸುತ್ತಿರೋ ತಮಿಳು ಚಿತ್ರ 'ಅಥರ್ವನಂ' ಶೂಟಿಂಗ್ ಸೆಟ್ ನಲ್ಲಿ ನಡೆದ ಘಟನೆಯೇ ಸಾಕ್ಷಿ. ಅಷ್ಟಕ್ಕೂ ಬೆಂಗಳೂರಿನಲ್ಲಿ ನಡೆದ ಶೂಟಿಂಗ್ ಸೆಟ್ ನಲ್ಲಿ ನಡೆದಿದ್ದೇನು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಸತತ 10 ಘಂಟೆ ಸ್ವಿಮ್ಮಿಂಗ್ ಮಾಡಿದ ಹರಿಪ್ರಿಯಾ

  ಸತತ 10 ಘಂಟೆ ಸ್ವಿಮ್ಮಿಂಗ್ ಮಾಡಿದ ಹರಿಪ್ರಿಯಾ

  ತಮಿಳಿನ 'ಅಥರ್ವನಂ' ಶೂಟಿಂಗ್ ಸಂದರ್ಭದಲ್ಲಿ ಸಿನಿಮಾದ ಒಂದು ದೃಶ್ಯಕ್ಕಾಗಿ ಕನ್ನಡದ ಹುಡುಗಿ ನಟಿ ಹರಿಪ್ರಿಯಾ ಅವರು ಸತತ 10 ಘಂಟೆ, ಸುಮಾರು 12 ಅಡಿ ಆಳ ಇರುವ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಿದ ಪರಿಣಾಮ ಉಸಿರುಗಟ್ಟಿ ಮುಳುಗಿ ಆಪತ್ತು ತಂದುಕೊಳ್ಳಲಿದ್ದ ನಟಿ ಜಸ್ಟ್ ಮಿಸ್ ಆಗಿದ್ದಾರೆ.[ಪ್ರೀತಿ-ಸಮರಗಳ ನಡುವೆ ನಜ್ಜುಗುಜ್ಜಾಗುವ 'ರಿಕ್ಕಿ'ಗೆ ಸಲಾಂ]

  ಸಿಕ್ಕಾಪಟ್ಟೆ ಸುಸ್ತಾದ ಹರಿಪ್ರಿಯಾ

  ಸಿಕ್ಕಾಪಟ್ಟೆ ಸುಸ್ತಾದ ಹರಿಪ್ರಿಯಾ

  'ಅಥರ್ವನಂ' ಚಿತ್ರದ ದೃಶ್ಯವೊಂದಕ್ಕೆ ಸಂಜೆ 6 ಘಂಟೆಯಿಂದ ಬೆಳಗ್ಗೆ 6 ಘಂಟೆವರೆಗೆ ನಿರಂತರವಾಗಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಿದ್ದ ನಟಿ ಹರಿಪ್ರಿಯಾ ಅವರು ಶೂಟಿಂಗ್ ಮುಗಿಸಿ ಶಾಟ್ ಓಕೆ ಆಗುವಷ್ಟರಲ್ಲಿ ಸಿಕ್ಕಾಪಟ್ಟೆ ಸುಸ್ತಾಗಿ ನೀರಿನಲ್ಲಿಯೇ ಕುಸಿದು ಬಿದ್ದಂತಾಗಿದ್ದಾರೆ.

  ಉಸಿರಾಡಲು ಪರದಾಡಿದ ಹರಿಪ್ರಿಯಾ

  ಉಸಿರಾಡಲು ಪರದಾಡಿದ ಹರಿಪ್ರಿಯಾ

  ಸುಮಾರು 12 ಅಡಿ ಆಳದ ನೀರಿನೊಳಗೆ ಮುಳುಗುತ್ತಾ ಉಸಿರು ತೆಗೆದುಕೊಳ್ಳಲು ಪರದಾಡುತ್ತಿದ್ದ ನಟಿ ಹರಿಪ್ರಿಯಾ ಅವರನ್ನು ಅಲ್ಲೆ ಇದ್ದ ಚಿತ್ರತಂಡ ನೋಡಿದ್ದು, ಕೂಡಲೇ ಕೆಲವರು ಸ್ವಿಮ್ಮಿಂಗ್ ಪೂಲ್ ಗೆ ಧುಮುಕಿ ಹರಿಪ್ರಿಯಾ ಅವರನ್ನು ಪೂಲ್ ನಿಂದ ಎತ್ತಿ ಹೊರಗೆ ಕರೆದುಕೊಂಡು ಬಂದಿದ್ದಾರೆ.

  ಪ್ರಶಂಸಿದ ಚಿತ್ರತಂಡ

  ಪ್ರಶಂಸಿದ ಚಿತ್ರತಂಡ

  ಸದ್ಯಕ್ಕೆ ಯಾವುದೇ ರೀತಿಯ ಅಪಾಯ ಆಗದೆ ನಟಿ ಹರಿಪ್ರಿಯಾ ಅವರು ಬಚಾವಾಗಿದ್ದಾರೆ. ಆದರೆ ಕನ್ನಡದ ನಟಿಯ ಈ ರೀತಿಯ ವೃತ್ತಿಪರತೆಯನ್ನು ನೋಡಿ 'ಅಥರ್ವನಂ' ಚಿತ್ರತಂಡ ಭಾರಿ ಇಂಪ್ರೆಸ್ ಆಗಿದ್ದೂ ಹರಿಪ್ರಿಯಾ ಅವರನ್ನು ಹೊಗಳಿದ್ದಾರೆ.

  ವಿಜಯ ರಾಘವೇಂದ್ರ-ಹರಿಪ್ರಿಯಾ ಜುಗಲ್ ಬಂದಿ

  ವಿಜಯ ರಾಘವೇಂದ್ರ-ಹರಿಪ್ರಿಯಾ ಜುಗಲ್ ಬಂದಿ

  ಇದೇ ಮೊದಲ ಬಾರಿಗೆ ನಟ ವಿಜಯ ರಾಘವೇಂದ್ರ ಅವರು ತಮಿಳು ಸಿನಿಮಾದಲ್ಲಿ ಮಿಂಚುತ್ತಿದ್ದು, 'ಅಥರ್ವನಂ' ಚಿತ್ರದಲ್ಲಿ ಹರಿಪ್ರಿಯಾ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲೂ ಈ ಸಿನಿಮಾ ಮೂಡಿಬರಲಿರುವುದರಿಂದ ವಿಜಯ ರಾಘವೇಂದ್ರ ಅವರಿಗೆ ತಮಿಳಿನಲ್ಲಿ ಮಿಂಚುವ ಅವಕಾಶ ಲಭಿಸಿದೆ.

  ನಿರ್ದೇಶಕ ಆದಿರಾಜನ್ ಆಕ್ಷನ್-ಕಟ್

  ನಿರ್ದೇಶಕ ಆದಿರಾಜನ್ ಆಕ್ಷನ್-ಕಟ್

  ತಮಿಳು ಹಿಟ್ ಸಿನಿಮಾ 'ಸಿಲಂಧಿ' ಖ್ಯಾತಿಯ ನಿರ್ದೇಶಕರಾದ ಆದಿರಾಜನ್ ಅವರು ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗಿದೆ. ಒಟ್ನಲ್ಲಿ ಶೂಟಿಂಗ್ ಸೆಟ್ ನಲ್ಲಿ ನಡೆದ ಆಘಾತಕಾರಿ ಘಟನೆಗೆ ಇಡೀ ಚಿತ್ರತಂಡವೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಅವರ ಜೊತೆ ಅವರ ತಾಯಿ ಕೂಡ ಹಾಜರಿದ್ದರು.

  English summary
  Actress Haripriya almost drowned in a swimming pool while shooting for the bilingual titled 'Atharvanam' in Tamil. Kannada hero Vijay Raghavendra is being introduced in Tamil with this film. When DC contacted the film’s director Aadhiraajan of Silandhi fame, he admitted there was a huge commotion and the whole crew was shocked during the nightmarish incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X