»   » ನರ್ತಕಿಯಲ್ಲಿ 'ಸಂಗೊಳ್ಳಿ ರಾಯಣ್ಣ' ವೀಕ್ಷಿಸಿದ ಜಯಪ್ರದಾ

ನರ್ತಕಿಯಲ್ಲಿ 'ಸಂಗೊಳ್ಳಿ ರಾಯಣ್ಣ' ವೀಕ್ಷಿಸಿದ ಜಯಪ್ರದಾ

Posted By:
Subscribe to Filmibeat Kannada
ದರ್ಶನ್ ನಾಯಕತ್ವದ 'ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ನಟಿಸಿರುವ ಹಿರಿಯ ನಟಿ ಜಯಪ್ರದಾ ನರ್ತಕಿ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಿದ್ದಾರೆ. ಇಂದು (04 ನವೆಂಬರ್ 2012) ನಿರ್ದೇಶಕ ನಾಗಣ್ಣ ಹಾಗೂ ಚಿತ್ರತಂಡದ ಹಲವರೊಡನೆ ಚಿತ್ರವನ್ನು ವೀಕ್ಷಿಸಿದ ನಟಿ ಜಯಪ್ರದಾ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂಬ ಅಭಿಪ್ರಾಯವನ್ನು ಹೇಳಿದ್ದಾರಂತೆ.

ಚಿತ್ರ ವೀಕ್ಷಣೆಯ ನಂತರ ಮಾತನಾಡಿದ ಜಯಪ್ರದಾ, ತಾವು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ನಟಿಸಿರುವ ಬಗ್ಗೆ ಖುಷಿಯಾಗಿದೆ ಎಂದಿದ್ದಲ್ಲದೇ ಪಾತ್ರಕ್ಕೆ ತಮ್ಮಿಂದ ನ್ಯಾಯ ದೊರಕಿದೆ ಎಂದೇ ಭಾವಿಸಿದ್ದೇನೆ ಎಂದಿದ್ದಾರಂತೆ. ಈ ವಿಷಯವನ್ನು ಅವರೊಂದಿಗೆ ಚಿತ್ರವೀಕ್ಷಣೆಯಲ್ಲಿದ್ದ 'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ದೇಶಕ ನಾಗಣ್ಣ ನಮ್ಮ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

ಚಿತ್ರದಲ್ಲಿ ಚೆನ್ನಮ್ಮನ ಪಾತ್ರದಲ್ಲಿನ ಜಯಪ್ರದಾ ನಟನೆಯನ್ನು ಪ್ರೇಕ್ಷಕರು ಈಗಾಗಲೇ ಮೆಚ್ಚಿದ್ದಾರೆ ಎಂಬುದನ್ನು ಗಮನಿಸಬಹುದು. ಚೆನ್ನಮ್ಮನ ಪಾತ್ರದಲ್ಲಿ ರಾಣಿಯ ಪೋಷಾಕು ಧರಿಸಿರುವ ಜಯಪ್ರದಾ ಪಕ್ಕಾ ರಾಣಿಯಂತೆ ಕಂಗೊಳಿಸಿದರೆ, ಯುದ್ಧ ಸನ್ನಿವೇಶಗಳಲ್ಲಿ ವೀರವನಿತೆಯ ಗತ್ತು ಗಾಂಭೀರ್ಯಗಳಿಂದ ಗಮನಸೆಳೆಯುವ ಅಭಿನಯ ನೀಡಿದ್ದಾರೆ. ಅಷ್ಟೇ ಅಲ್ಲ, ಬ್ರಿಟೀಷರಿಗೆ ಸೆರೆಸಿಕ್ಕು ಸೆರೆಮನೆಯಲ್ಲಿರುವಾಗ ಸೆಂಟಿಮೆಂಟ್ ದೃಶ್ಯಗಳಲ್ಲೂ ಜಯಪ್ರದಾ ನಟನೆ ಅತ್ಯುತ್ತಮವಾಗಿ ಮೂಡಿಬಂದಿದೆ ಎಂಬುದು ಎಲ್ಲರ ಅಭಿಪ್ರಾಯ.

ನಾಯಕ ನಟ ದರ್ಶನ್ ಈ ಚಿತ್ರದಲ್ಲಿ ಕಿತ್ತೂರು ಚೆನ್ನಮ್ಮನ ಬಲಗೈ ಬಂಟ ಹಾಗೂ ದತ್ತುಪುತ್ರ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಅವರ ವೃತ್ತಿ ಜೀವನದಲ್ಲೇ ಶ್ರೇಷ್ಠ ಎನ್ನಬಹುದಾದ ಅಮೋಘ ಅಭಿನಯ ನೀಡಿದ್ದಾರೆ ಎಂಬ ಪ್ರಶಂಸೆ ಎಲ್ಲೆಡೆ ವ್ಯಕ್ತವಾಗಿದೆ. ಸಂಗೊಳ್ಳಿ ರಾಯಣ್ಣ (ದರ್ಶನ್) ತಾಯಿ ಪಾತ್ರದಲ್ಲಿ ನಟಿಸಿರುವ ಹಿರಿಯ ನಟಿ ಉಮಾಶ್ರೀ ಬಗ್ಗೆ ಕೂಡ ಪ್ರೇಕ್ಷಕವಲಯ ಹಾಗೂ ವಿಮರ್ಶಕರಿಂದ ಅತೀವ ಮೆಚ್ಚುಗೆ ವ್ಯಕ್ತವಾಗಿದೆ.

ಒಟ್ಟಿನಲ್ಲಿ, ನವೆಂಬರ್ 01, 2012 ರ ಕರ್ನಾಟಕ ರಾಜ್ಯೋತ್ಸವದಂದು ಬಿಡುಗಡೆಯಾಗಿರುವ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರವು ಒಂದೇ ದಿನದಲ್ಲಿ ರು. 3.5 ಕೋಟಿ ಗಳಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಕನ್ನಡದಲ್ಲಿ ಬಂದ ಈವರೆಗಿನ ಚಿತ್ರಗಳಲ್ಲೇ ಅತಿ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಐತಿಹಾಸಿಕ 'ಸಂಗೊಳ್ಳಿ ರಾಯಣ್ಣ' ಚಿತ್ರವು ದೇಶಭಕ್ತ ಹಾಗೂ ಸ್ವಾತಂತ್ರ್ಯ ಯೋಧ ಸಂಗೊಳ್ಳಿ ರಾಯಣ್ಣನ ಕಥೆ ಹೊಂದಿದೆ. (ಒನ್ ಇಂಡಿಯಾ ಕನ್ನಡ)

English summary
Actress Jayaprada, who acted in successfully screening movie Sangolli Rayanna is watching the movie at Nathaki Theater at Bangalore today on 04th November 2012. This is told by the Director Naganna to our Oneindia Kannada. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada