For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿಗೆ ಬರ್ತಾರೆ ನಟಿ ಕಾಜಲ್ ಅಗರ್ವಾಲ್: ಏನು ವಿಶೇಷ.?

  By Harshitha
  |

  ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಬಹು ಬೇಡಿಕೆಯ ನಾಯಕಿ ಆಗಿರುವ ಕಾಜಲ್ ಅಗರ್ವಾಲ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಾರೆ ಎಂಬ ಸುದ್ದಿ ಮೊನ್ನೆ ಮೊನ್ನೆಯಷ್ಟೇ ಕೇಳಿಬಂದಿತ್ತು.

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾದ ವಿಶೇಷ ಹಾಡಲ್ಲಿ ಕಾಜಲ್ ಅಗರ್ವಾಲ್ ಸ್ಟೆಪ್ ಹಾಕ್ತಾರೆ ಎಂಬ ಗುಸುಗುಸು ಕೂಡ ಹರಿದಾಡಿತ್ತು. ಆದ್ರೀಗ, 'ಕೆ.ಜಿ.ಎಫ್' ಸೆಟ್ ಗೆ ಹಾಲು ಗಲ್ಲದ ಸುಂದರಿ ತಮನ್ನಾ ಭಾಟಿಯಾ ಎಂಟ್ರಿಕೊಟ್ಟಿದ್ದಾರೆ.

  ಅತ್ತ ರಮೇಶ್ ಅರವಿಂದ್ ನಿರ್ದೇಶನದ 'ಕ್ವೀನ್' ಸಿನಿಮಾದ ತಮಿಳು ವರ್ಷನ್ 'ಪ್ಯಾರಿಸ್ ಪ್ಯಾರಿಸ್' ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಇದರ ನಡುವೆಯೇ ನಟಿ ಕಾಜಲ್ ಅಗರ್ವಾಲ್ ಬೆಂಗಳೂರಿಗೆ ಬರ್ತಿದ್ದಾರೆ.

  ಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿ

  ಏನು ವಿಶೇಷ.? ಯಾವುದಾದರೂ ಕನ್ನಡ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ತಾರಾ.? ಅಂತ ನೀವು ಅಂದುಕೊಳ್ತಿದ್ರೆ, ಖಂಡಿತ ಇಲ್ಲ. ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಮಳಿಗೆಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಟಿ ಕಾಜಲ್ ಅಗರ್ವಾಲ್ ಆಗಸ್ಟ್ 11 ರಂದು ಬೆಂಗಳೂರಿಗೆ ಬರ್ತಿದ್ದಾರೆ.

  ನಾನು 'ಆ' ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾಯಿತು: ಕಾಜಲ್ ಅಗರ್ವಾಲ್ನಾನು 'ಆ' ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾಯಿತು: ಕಾಜಲ್ ಅಗರ್ವಾಲ್

  ಅಂದ್ಹಾಗೆ, ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದ 'ಅರೇ.. ಅರೇ.. ಏನಾಯ್ತು..' ಹಾಡಿಗೆ ದನಿಯಾಗಿರುವುದು ಇದೇ ಕಾಜಲ್ ಅಗರ್ವಾಲ್ ಅನ್ನೋದು ನಿಮಗೆ ನೆನಪಿದೆ ತಾನೇ.?!

  English summary
  Actress Kajal Aggarwal is coming to Bengaluru for a store launch in Rajajinagar on Aug 11th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X