»   » ಮಾಧ್ಯಮಗಳ ಮೇಲೆ ನಟಿ ಕತ್ರಿನಾ ಕೈಫ್ ಗರಂ

ಮಾಧ್ಯಮಗಳ ಮೇಲೆ ನಟಿ ಕತ್ರಿನಾ ಕೈಫ್ ಗರಂ

Posted By:
Subscribe to Filmibeat Kannada

ತನ್ನ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಜೊತೆ ಸ್ಪೇನ್ ನ ಇಬಿಜಾ ಸಮುದ್ರತೀರದಲ್ಲಿ ಈಜಾಡಿದ ರೋಚಕ ಚಿತ್ರಗಳು ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದವು. ಈಗವರು ಭಾರತಕ್ಕೆ ಬಂದ ಮೇಲೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ತಮ್ಮ ಬಿಕಿನಿ ಚಿತ್ರಗಳನ್ನು ನೋಡಿ ಕೆಂಡಾಮಂಡಲವಾಗಿದ್ದಾರೆ.

ತಮ್ಮ ಖಾಸಗಿ ಬದುಕನ್ನು ಹಾಳು ಮಾಡಿರುವ ಮಾಧ್ಯಮಗಳ ಮೇಲೆ ಅವರು ಗರಂ ಆಗಿದ್ದಾರೆ ಈ ಸಂಬಂಧ ಅವರು ಮಾಧ್ಯಮಗಳಿಗೆ ಪತ್ರವನ್ನೂ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಅನುಮತಿ ಇಲ್ಲದೆ ಫೋಟೋಗಳನ್ನು ತೆಗೆದು, ಅವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡ ನಿಯತಕಾಲಿಕೆಯೊಂದರ ಕೃತ್ಯವನ್ನು ಅವರು ಖಂಡಿಸಿದ್ದಾರೆ.


ತಮ್ಮ ಬಿಕಿನಿ ಚಿತ್ರಗಳನ್ನು ಪ್ರಕಟಿಸಿರುವ ನಿಯತಕಾಲಿಕೆಯನ್ನು ಇದೊಂದು ಹೇಡಿತನದ ಕೃತ್ಯ. ತಮ್ಮ ಖಾಸಗಿ ಚಿತ್ರಗಳನ್ನು ಪ್ರಕಟಿಸಿ ನನ್ನ ಮನಸಿಗೆ ಅತೀವ ನೋವುಂಟು ಮಾಡಿದ್ದಾರೆ ಎಂದು ಅವರು ಚಸ್ಕ ಮಸ್ಕ ರೀತಿಯಲ್ಲಿ ಪತ್ರ ಬರೆದಿದ್ದಾರೆ. ಇದು ಪತ್ರಿಕೋದ್ಯಮದ ಧರ್ಮ ಅಲ್ಲ ಎಂದೂ ಹೇಳಿದ್ದಾರೆ.

ಕತ್ರಿನಾ ಕೈಫ್ ಬಿಕಿನಿ ತೊಟ್ಟು ರಣಬೀರ್ ಜೊತೆ ಇರುವ ಚಿತ್ರವನ್ನು ಸ್ಟಾರ್ ಡಸ್ಟ್ ಮ್ಯಾಗಜೀನ್ ಪ್ರಕಟಿಸಿತ್ತು. ಈ ಬಗ್ಗೆ ಈ ಪ್ರಣಯ ಜೋಡಿ ಆಗ ಏನೂ ಬಾಯ್ಬಿಟ್ಟಿರಲಿಲ್ಲ. ಅಸಲಿಗೆ ಇಬಿಜಾಗೆ ವಿಹಾರಕ್ಕೆ ಹೋಗೇ ಇಲ್ಲ ಎಂದು ವಾದಿಸಿದ್ದರು. (ಏಜೆನ್ಸೀಸ್)

English summary
Bollywood actress Katrina Kaif has written an open letter to the media over pictures of herself and Ranbir Kapoor holidaying in Spain. Katrina and Ranbir, who have long been rumoured to be in a relationship, were snapped on the Spanish island of Ibiza last month.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada