Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಗ್ನ ಚಿತ್ರಗಳನ್ನ ನೋಡಿ ನೋಡಿ ಬೇಸರ: ಫೇಸ್ ಬುಕ್ ಗೆ ದೊಡ್ಡ ನಮಸ್ಕಾರ ಹಾಕಿದ ನಟಿ.!
ಅನ್ಯಾಯದ ವಿರುದ್ಧ ದನಿ ಎತ್ತಲು ಫೇಸ್ ಬುಕ್, ಟ್ವಿಟ್ಟರ್ ಅಂತಹ ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆ. ಎಲ್ಲೋ ಇರುವ ಫ್ರೆಂಡ್ಸ್ ಗಳ ಜೊತೆಗೆ ಮಾತನಾಡಲು ಸೋಷಿಯಲ್ ಮೀಡಿಯಾ ತುಂಬಾ ಸಹಕಾರಿ. ಪ್ರಬಲ ಮಾಧ್ಯಮವಾಗಿ ಬೆಳೆದಿರುವ ಸಾಮಾಜಿಕ ಜಾಲತಾಣಗಳಿಂದ ಎಷ್ಟು ಅನುಕೂಲ ಇದ್ಯೋ, ಅಷ್ಟೇ ಅವಾಂತರಗಳು ಕೂಡ ಸೃಷ್ಟಿ ಆಗುತ್ತಿವೆ.
ಅದ್ರಲ್ಲೂ, ಹೆಣ್ಮಕ್ಕಳಿಗೆ ಸೋಷಿಯಲ್ ಮೀಡಿಯಾದಿಂದ ಆಗುತ್ತಿರುವ ಕಿರಿಕಿರಿ, ಕಿರುಕುಳ ಒಂದೆರಡಲ್ಲ. ಫೇಕ್ ಅಕೌಂಟ್ ಗಳನ್ನ ಸೃಷ್ಟಿಸಿ, ಅದರಿಂದ ಹುಡುಗಿಯರಿಗೆ ಅಸಭ್ಯ, ಅಶ್ಲೀಲ ಸಂದೇಶ ಕಳುಹಿಸುವ ಕಿಡಿಗೇಡಿಗಳು ನಮ್ಮ ಸಮಾಜದಲ್ಲಿ ಇದ್ದಾರೆ.
ಸೋಷಿಯಲ್ ಮೀಡಿಯಾನ ದುರುಪಯೋಗ ಪಡಿಸಿಕೊಂಡು ಹೆಣ್ಮಕ್ಕಳ ಫೋಟೋಗಳನ್ನು ಮಾರ್ಪಡಿಸಿ, ನಗ್ನ ಚಿತ್ರಗಳನ್ನು ತಯಾರಿಸುವ ವಿಕೃತಕಾಮಿಗಳೂ ಇದ್ದಾರೆ. ಇದನ್ನೆಲ್ಲ ಕಂಡ ಕಿರುತೆರೆ ನಟಿ ಕವಿತಾ ಕೌಶಿಕ್ ಫೇಸ್ ಬುಕ್ ಗೆ ಗುಡ್ ಬೈ ಹೇಳಿದ್ದಾರೆ.
ತಮ್ಮ ಮಾರ್ಪಡಿಸಿದ ನಗ್ನ ಚಿತ್ರಗಳನ್ನು ನೋಡಿ ನೋಡಿ ಬೇಸೆತ್ತ ಕವಿತಾ ಕೌಶಿಕ್ ಫೇಸ್ ಬುಕ್ ಗೆ ದೊಡ್ಡ ನಮಸ್ಕಾರ ಹಾಕಿದ್ದಾರೆ. ಇನ್ಯಾವತ್ತೂ ಫೇಸ್ ಬುಕ್ ಕಡೆ ತಲೆ ಹಾಕಲ್ಲ ಎಂದಿದ್ದಾರೆ ಕವಿತಾ ಕೌಶಿಕ್. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಅಶ್ಲೀಲತೆ ತುಂಬಿರುವ ಜಾಗ
ಹಿಂದಿ ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದಿರುವ ನಟಿ ಕವಿತಾ ಕೌಶಿಕ್ ಫೇಸ್ ಬುಕ್ ಗೆ ಗುಡ್ ಬೈ ಹೇಳಿದ್ದಾರೆ. ''ಅಶ್ಲೀಲತೆ ತುಂಬಿರುವ ಈ ಜಾಗ ನನಗಲ್ಲ'' ಎನ್ನುವ ಮೂಲಕ ತಮ್ಮ ಫೇಸ್ ಬುಕ್ ಅಕೌಂಟ್ ನ ಕವಿತಾ ಕೌಶಿಕ್ ಡಿಆಕ್ಟಿವೇಟ್ ಮಾಡಿದ್ದಾರೆ.
ಅಶ್ಲೀಲ ಮೆಸೇಜ್ ಕಳುಹಿಸಿ ಭಾವನಾ ಬೆಳಗೆರೆಗೆ ಫೇಸ್ ಬುಕ್ ನಲ್ಲಿ ಕಿರುಕುಳ

ಮಾರ್ಪಡಿಸಿದ ನಗ್ನ ಚಿತ್ರ...
ತಮ್ಮ ಫೋಟೋಗಳಿಂದ ಮಾರ್ಪಟ್ಟ ನಗ್ನ ಚಿತ್ರಗಳು ಫೇಸ್ ಬುಕ್ ನಲ್ಲಿ ಹೆಚ್ಚು ವೈರಲ್ ಆದ ಕಾರಣ ಫೇಸ್ ಬುಕ್ ಗೆ ಕವಿತಾ ಕೌಶಿಕ್ ಟಾಟಾ ಹೇಳಿದ್ದಾರೆ ಎಂದು ವರದಿ ಆಗಿದೆ.
ದರ್ಶನ್ ಪತ್ನಿಯನ್ನ ನಿಂದಿಸಿದ ಅನಾಮಧೇಯ ವ್ಯಕ್ತಿ: ದೂರು ದಾಖಲು

ಪದೇ ಪದೇ ಕಿರಿಕಿರಿ
ಸೋಷಿಯಲ್ ಮೀಡಿಯಾದಿಂದ ಭಾವನಾ ಬೆಳಗೆರೆ, ವಿಜಯಲಕ್ಷ್ಮಿ ದರ್ಶನ್, ಸಂಗೀತಾ ಭಟ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಿರುಕುಳ ಅನುಭವಿಸಿದ್ದಾರೆ. ಪದೇ ಪದೇ ಕಿರಿಕಿರಿಗೊಂಡ ಕವಿತಾ ಕೌಶಿಕ್ ಫೇಸ್ ಬುಕ್ ನಿಂದ ಹೊರಬಂದಿದ್ದಾರೆ.
ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳಿಂದ ಕಾಟ: ಗುಡುಗಿದ ನಟಿ ಸಂಗೀತಾ ಭಟ್

ಯಾರೀ ಕವಿತಾ ಕೌಶಿಕ್.?
ಹಿಂದಿ ಕಿರುತೆರೆಯಲ್ಲಿ ಕವಿತಾ ಕೌಶಿಕ್ ಸಿಕ್ಕಾಪಟ್ಟೆ ಫೇಮಸ್. 'ಎಫ್.ಐ.ಆರ್', 'ಕುಟುಂಬ್', 'ಕಹಾನಿ ಘರ್ ಘರ್ ಕಿ', 'ರೀಮಿಕ್ಸ್', 'ಯೇ ಮೇರಿ ಲೈಫ್ ಹೇ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕವಿತಾ ಕೌಶಿಕ್ ಅಭಿನಯಿಸಿದ್ದಾರೆ.