For Quick Alerts
ALLOW NOTIFICATIONS  
For Daily Alerts

  ನೋವ ಮರೆತು ಎಂಜಾಯ್ ಮಾಡುವುದ ಕಲಿಸಿದ್ರು ಅಂಬಿ : ಖುಷ್ಬೂ

  By ಜೇಮ್ಸ್ ಮಾರ್ಟಿನ್
  |

  ಕನ್ನಡ ಚಿತ್ರರಂಗದ ಮೇರುನಟ ಅಂಬರೀಷ್ ಅವರ ಅಗಲಿಕೆಯ ನೋವು ಸ್ಯಾಂಡಲ್ ವುಡ್ಡಿಗೆ ಮಾತ್ರ ಸೀಮಿತವಾಗಿಲ್ಲ. ತೆಲುಗು, ತಮಿಳು ಚಿತ್ರರಂಗದ ಗಣ್ಯಾತಿಗಣ್ಯರು, ಬಹುಭಾಷಾ ತಾರೆಯರಿಗೂ ತಟ್ಟಿದೆ.

  ಅಂಬರೀಷ್ ಅವರ ಸ್ನೇಹವಲಯ ಅತ್ಯಂತ ದೊಡ್ಡದು, ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್ ತನಕ ಇದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಲವು ದಶಕಗಳಿಂದ ಸಂಪಾದಿಸಿದ ಈ ಸ್ನೇಹವನ್ನು ಇಂದಿಗೂ ಅವರ ಆಪ್ತರು ಉಳಿಸಿಕೊಂಡಿದ್ದಾರೆ.

  ತಂದೆ ನಿಧನರಾದ ದಿನ ದರ್ಶನ್ ಸಹಾಯಕ್ಕೆ ಬಂದದ್ದು ಒಬ್ಬ ಡ್ರೈವರ್ !

  ಹಲವಾರು ಯುವ ನಟ, ನಟಿಯರಿಗೆ ತಂತ್ರಜ್ಞರಿಗೆ ಅಂಬರೀಷ್ ಅವರು ಹೇಗೆ ನೆರವಾಗುತ್ತಿದ್ದರು. ಕಷ್ಟಕಾಲದಲ್ಲಿ ಜೀವನವನ್ನು ದೂಷಿಸುವುದಕ್ಕಿಂತ ಜೀವನವನ್ನು ಎಂಜಾಯ್ ಮಾಡುವುದು ಮುಖ್ಯ ಎಂಬ ಪಾಠವನ್ನು ಕಲಿಸಿದವರು ಎಂದು ಬಹುಭಾಷಾ ತಾರೆ ಖುಷ್ಬೂ ಅವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ...

  * ವೃತ್ತಿಜೀವನವು ಪ್ರಾರಂಭ ಹಂತದಲ್ಲಿ ಭೇಟಿ

  ಅಂಬರೀಶ್ ಅವರದ್ದು ತುಂಬಾ ಆರಾಮದಾಯಕ. ತುಂಬಾ ಸ್ನೇಹಿ ಸ್ವಭಾವ. ನೀವು ಅವರೊಂದಿಗೆ ಕೆಲಸವನ್ನು ಆನಂದಿಸಬಹುದು. ಒಮ್ಮೆ ಅವರೊಂದಿಗೆ ನಟಿಸಿದವರು ಮತ್ತೊಮ್ಮೆ ನಟಿಸಬೇಕು ಎಂದು ಬಯಸದೆ ಇರುವುದಿಲ್ಲ. ವೃತ್ತಿ ಜೀವನದ ಆರಂಭದಲ್ಲಿ ನಮ್ಮ ಸಿನಿಮಾ ಕೆರಿಯರ್ ಬೆಳವಣಿಗೆ ಇಂಥ ಕರ್ಫಟಬಲ್ ವ್ಯಕ್ತಿಯ ಗೆಳೆತನ ಅವಶ್ಯ.

  ಮೊದಲ ಬಾರಿಗೆ ಎಲ್ಲಿ ಭೇಟಿಯಾಗಿದ್ದು?

  ನಾನು 'ಒಂಟಿ ಸಲಗ' ದ ಕನ್ನಡ ಚಲನಚಿತ್ರ ಸೆಟ್ಟಿನಲ್ಲಿ ಭೇಟಿಯಾದೆ. ನಾನು ಸೂಪರ್ ಸ್ಟಾರ್, ನನಗೆ ಸೆಟ್ ನಲ್ಲಿ ಪ್ರತಿಯೊಬ್ಬರೂ ಗೌರವಿಸಬೇಕು ಎನ್ನುವಂಥ ವ್ಯಕ್ತಿಯಲ್ಲ. ಎಂಥಾ ದೊಡ್ಡ ಸ್ಟಾರ್ ನಟರಾದರೂ ಅವರಲ್ಲಿ ಸರಳ, ಸ್ನೇಹಪರ ಸ್ವಭಾವವಿತ್ತು. ಹೀರೋಯಿನ್ ಗೆ ಮರ್ಯಾದೆ ಕೊಡುತ್ತಿದ್ದರು. ನನಗೆ ಮೊದಲ ಭೇಟಿಯಲ್ಲೇ ಅವರ ಬಗ್ಗೆ ತುಂಬಾ ಗೌರವ ಮೂಡಿತು.

  ರೆಬೆಲ್ ಸ್ಟಾರ್ ಬಗ್ಗೆ ಇನ್ನಷ್ಟು ಹೇಳಿ

  ಅವರು ಬೆಳ್ಳಿತೆರೆ ಮೇಲೆ ಮಾತ್ರ ರೆಬೆಲ್ ಸ್ಟಾರ್. ಅವರು ತಮ್ಮ ವೃತ್ತಿಜೀವನದ ಅಂತ್ಯದವರೆಗೆ ಎಲ್ಲಾ ಸಣ್ಣ ಪುಟ್ಟ ಕಲಾವಿದರನ್ನು ಗೌರವದಿಂದ ಕಾಣುತ್ತಿದ್ದರು. ಒರಟು ಮಾತಿನಲ್ಲೂ ಪ್ರೀತಿ ಇರುತ್ತಿತ್ತು, ಗೆಳೆಯರ ಜತೆ ಇರುವಾಗ ಭಯ ಎಲ್ಲಿರುತ್ತೇ ಹೇಳಿ? ಕಲಾವಿದರಿಗೆ ಒಂದು ಭದ್ರತೆ ತಂದುಕೊಟ್ಟ ಅವರು ರೆಬೆಲ್ ಅಲ್ಲ ಲೆಜೆಂಡ್.

  80ರ ದಶಕದ ಸ್ಟಾರ್ ಗಳ ಸಮ್ಮಿಲನ

  80ರ ದಶಕದ ಸ್ಟಾರ್ ಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ನಾವೆಲ್ಲ ಪಾಲ್ಗೊಳ್ಳುತ್ತಿದ್ದೆವು. ಈ ವರ್ಷ ಅವರು ಆರೋಗ್ಯ ಕಾರಣಗಳಿಗಾಗಿ ಹಾಜರಾಗಲು ಸಾಧ್ಯವಾಗಿರಲಿಲ್ಲ. ಆದರೆ, ಪ್ರತಿ ವರ್ಷ ಸೇರಿದಾಗಲೂ ನಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಿದ್ದೆವು. 2015ರಲ್ಲಿ, ಮೋಹನ್ ಲಾಲ್ ಆಯೋಜಿಸಿದ್ದಾಗ ಅಂಬರೀಷ್ ಸಕತ್ ಆಗಿ ಎಂಜಾಯ್ ಮಾಡುತ್ತಿದ್ದರು. ನಮ್ಮ ಬದುಕಿನ ನೋವಿನ ಬಗ್ಗೆ ಅವರಿಗೆ ಹೇಗೋ ಗೊತ್ತಾಗುತ್ತಿತ್ತು. ನಮಗೆ ನೆರವು ನೀಡುವುದಲ್ಲದೆ, ಮಾನಸಿಕ ಸ್ಥೈರ್ಯ ತುಂಬಿ, ಜೀವನವನ್ನು ಎಂಜಾಯ್ ಮಾಡಿ ಎನ್ನುತ್ತಿದ್ದ ವ್ಯಕ್ತಿ ಈಗ ಇಲ್ಲ ಎಂದರೆ ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತಿದೆ.

  English summary
  Actress Khusboo speaks about 'Rebel Star' Ambareesh who was not only 'Star' of Film Industry but, a true leader who taught life look simple

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more