»   » ವಿಜಿ 'ಮಾಸ್ತಿ ಗುಡಿ'ಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್

ವಿಜಿ 'ಮಾಸ್ತಿ ಗುಡಿ'ಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್

Posted By:
Subscribe to Filmibeat Kannada

ಚಂದನವನದ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಹಾಗು ನಾಗಶೇಖರ್ ಕಾಂಬಿನೇಷನ್ ನ ವಿಭಿನ್ನ ಸಿನಿಮಾ 'ಮಾಸ್ತಿ ಗುಡಿ' ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಷಯದ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದ್ದು, ಇದೀಗ ಹೊಸದಾಗಿ ಚಿತ್ರಕ್ಕೆ ಇನ್ನೊಬ್ಬ ಗ್ಲಾಮರ್ ನಾಯಕಿ ಆಯ್ಕೆಯಾಗುವ ಮೂಲಕ ಮತ್ತೆ ಸುದ್ದಿಯಾಗಿದೆ.[ಚಿತ್ರಗಳು: ವಿಜಿ 'ಮಾಸ್ತಿ ಗುಡಿ'ಗೆ ಅಮ್ಮಂದಿರಿಂದ ಮುಹೂರ್ತ]


ಕಾಡು ಪ್ರಾಣಿಗಳನ್ನು ಸಂರಕ್ಷಿಸುವ ಕಥೆಯಾಧರಿತ 'ಮಾಸ್ತಿ ಗುಡಿ' ಚಿತ್ರದಲ್ಲಿ ದುನಿಯಾ ವಿಜಿ ಅವರು ಹಲವಾರು ಗೆಟಪ್ ಗಳಲ್ಲಿ ಮಿಂಚಿದ್ದಾರೆ.[ಬರ್ತ್ ಡೇ ಬಾಯ್ ವಿಜಿಗೆ 'ಮಾಸ್ತಿ ಗುಡಿ' ಟೀಸರ್ ಗಿಫ್ಟ್]


ಮೊನ್ನೆ ಮೊನ್ನೆ ನಟಿ ಅಮೂಲ್ಯ ಅವರು ವಿಜಿ ಅವರ ಜೊತೆ ನಾಯಕಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಇದೀಗ ಮತ್ತೋರ್ವ ಸ್ಯಾಂಡಲ್ ವುಡ್ ನ ಕ್ಯೂಟ್ ಬೆಡಗಿ ವಿಜಿ ಅವರ ಜೊತೆ ಗ್ಲಾಮರ್ ರೋಲ್ ನಲ್ಲಿ ಮಿಂಚಲಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು ಎಂದು ತಿಳಿಯಬೇಕೆ?, ಹಾಗಿದ್ರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


'ಗೂಗ್ಲಿ' ಬೆಡಗಿ ಕೃತಿ ಕರಬಂಧ

ಚಿತ್ರದಲ್ಲಿ ನಟಿ ಅಮೂಲ್ಯ ಮೊದಲ ನಾಯಕಿ ಆದರೆ ಕೃತಿ ಕರಬಂಧ ಅವರು ವಿಜಿ ಅವರ ಜೊತೆ ಗ್ಲಾಮರ್ ಪಾತ್ರದಲ್ಲಿ ಮಿಂಚಲಿದ್ದಾರೆ. ನಿರ್ದೇಶಕ ನಾಗಶೇಖರ್ ಅವರ 'ಸಂಜು ವೆಡ್ಸ್ ಗೀತಾ ಭಾಗ 2' ಚಿತ್ರಕ್ಕೆ ನಟಿ ಕೃತಿ ಅವರು ಆಯ್ಕೆ ಆಗಿದ್ದು, ಇದೀಗ ನಾಗಶೇಖರ್ ಅವರ 'ಮಾಸ್ತಿ ಗುಡಿ' ಚಿತ್ರದಲ್ಲೂ ನಟಿಸುವ ಅವಕಾಶ ದೊರಕಿದೆ.


ಬಾಲಿವುಡ್ ನಲ್ಲೂ ಬ್ಯುಸಿಯಾಗಿರುವ ಕೃತಿ

ದಕ್ಷಿಣ ಭಾರತ ಸೇರಿದಂತೆ ಸ್ಯಾಂಡಲ್ ವುಡ್ ಹಾಗೂ ಸದ್ಯಕ್ಕೆ ಬಾಲಿವುಡ್ ಕ್ಷೇತ್ರದಲ್ಲೂ ನಟಿ ಕೃತಿ ಅವರು ಬ್ಯುಸಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ಕ್ಷೇತ್ರದಲ್ಲಿ ಮಿಂಚುತ್ತಿರುವ ನಟಿ ಕೃತಿ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಅವರ ಜೊತೆ ನಿರ್ದೇಶಕ ವಿಕ್ರಮ್ ಭಟ್ ಅವರ 'ರಾಝ್ 4' ಚಿತ್ರದಲ್ಲಿ ಮಿಂಚುತ್ತಿದ್ದಾರೆ.[ಬಿಟೌನ್ ನ ಕಿಸ್ಸರ್ ಬಾಯ್ ಜೊತೆ 'ಗೂಗ್ಲಿ' ಬೆಡಗಿ ರೊಮ್ಯಾನ್ಸ್..!]


ಮೊದಲ ಬಾರಿಗೆ ಹಾರರ್ ಥ್ರಿಲ್ಲರ್ ನಲ್ಲಿ ಕೃತಿ

ಹಿಂದಿ ಚಿತ್ರ 'ರಾಝ್ 4' ಹಾರರ್ ಥ್ರಿಲ್ಲರ್ ಸಿನಿಮಾವಾಗಿದ್ದು ಇದೇ ಮೊದಲ ಬಾರಿಗೆ ಗ್ಲಾಮರ್ ರೋಲ್ ನ ಜೊತೆ ಜೊತೆಗೆ ಹಾರರ್ ಥ್ರಿಲ್ಲರ್ ಸಿನಿಮಾದಲ್ಲಿ ಕೃತಿ ಅವರು ಅಭಿನಯಿಸುತ್ತಿದ್ದಾರೆ. ಸದಾ ಪಕ್ಕಾ ಸಂಪ್ರದಾಯದ ಹುಡುಗಿಯಂತಿದ್ದ ಕೃತಿ ಅವರು ಬಾಲಿವುಡ್ ಸಿನಿಮಾದಲ್ಲಿ ಮೈ ಚಳಿ ಬಿಟ್ಟು ಕಾಣಿಸಿಕೊಳ್ಳಲಿದ್ದಾರೆ.


ಅಮೂಲ್ಯ ಸ್ಕೂಲ್ ಹುಡುಗಿ

ಇನ್ನು ವಿಜಿ ಅವರ 'ಮಾಸ್ತಿ ಗುಡಿ' ಸಿನಿಮಾದಲ್ಲಿ ನಟಿ ಅಮೂಲ್ಯ ಅವರು ಮತ್ತೆ ಸ್ಕೂಲ್ ಹುಡುಗಿಯಾಗುತ್ತಿದ್ದಾರೆ. ಸ್ಕೂಲ್ ಹುಡುಗಿಯಾಗಿರುವಾಗಲೇ ನಾಯಕಿ ನಟಿಯಾಗಿ ಕಾಣಿಸಿಕೊಂಡ ಅಮೂಲ್ಯ ಇದೀಗ 'ಮಾಸ್ತಿ ಗುಡಿ' ಮೂಲಕ ಮತ್ತೆ ತಮ್ಮ ಹಳೇ ಚಾರ್ಮ್ ಗೆ ಮರಳಿದ್ದಾರೆ.['ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್ ಜೊತೆ ಅಮೂಲ್ಯ ಬೇಬಿ?]


ಹೊಸ ಲುಕ್ ನಲ್ಲಿ ವಿಜಿ

'ಮಾಸ್ತಿ ಗುಡಿ' ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಇಲ್ಲಿಯವರೆಗೆ ಯಾರೂ ನೋಡಿರದ ಮೂರು ವಿಭಿನ್ನ ಲುಕ್ ನಲ್ಲಿ ಮಿಂಚುತ್ತಿದ್ದಾರೆ. 25 ಚಿಗುರು ಮೀಸೆಯ ಯುವಕ, 35ರ ಮಧ್ಯ ವಯಸ್ಸಿನ ಯುವಕ ಹಾಗೂ 75ರ ಮುದುಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಒಟ್ನಲ್ಲಿ ಈ ಸಿನಿಮಾ ದುನಿಯಾ ವಿಜಿ ಅವರ ಸಿನಿ ಜರ್ನಿಯಲ್ಲಿ ದೊಡ್ಡ ಮಟ್ಟದ ಬ್ರೇಕ್ ಕೊಡುವ ಸಿನಿಮಾವಾಗಲಿದೆ.


ವಿಲನ್ ಪಾತ್ರದಲ್ಲಿ ಅನಿಲ್ ಕುಮಾರ್

ವಿಜಿ ಅವರ 'ಮಾಸ್ತಿ ಗುಡಿ' ಸಿನಿಮಾದಲ್ಲಿ ಖಳನಟನ ಪಾತ್ರದಲ್ಲಿ ವಿಜಿ ಅವರ ಖಾಸ ದೋಸ್ತ್ ನಿರ್ಮಾಪಕ ಕಮ್ ಖಳ ನಟ ಅನಿಲ್ ಕುಮಾರ್ ಅವರು ಮಿಂಚಲಿದ್ದಾರೆ. ಅನಿಲ್ ಅವರು 'ಮಾಸ್ತಿ ಗುಡಿ' ಚಿತ್ರಕ್ಕೆ ನಿರ್ಮಾಪಕರು ಆಗಿದ್ದಾರೆ.[ದುನಿಯಾ ವಿಜಿ 'ಮಾಸ್ತಿ ಗುಡಿ' ವಿಲನ್ ಬಗ್ಗೆ ನಿಮಗೆಷ್ಟು ಗೊತ್ತು?]


ಸಾಹಿತ್ಯ ಕವಿರಾಜ್, ಸಂಗೀತ ಸಾಧು

ನಟ ಕಮ್ ನಿರ್ದೇಶಕ ನಾಗಶೇಖರ್ ಅಕ್ಷನ್-ಕಟ್ ಹೇಳುತ್ತಿರುವ 'ಮಾಸ್ತಿ ಗುಡಿ' ಚಿತ್ರದ ಹಾಡುಗಳಿಗೆ ಗೀತರಚನೆಕಾರ ಕವಿರಾಜ್ ಅವರು ಸಾಹಿತ್ಯ ಬರೆದಿದ್ದು, ಕಾಮಿಡಿ ನಟ ಕಮ್ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.(ಚಿತ್ರಕೃಪೆ: ದುನಿಯಾ ವಿಜಿ ಫೇಸ್ ಬುಕ್)


English summary
Actress Kriti Kharbanda has signed Nagashekar's 'Maasthi Gudi'. The movie stars Duniya Vijay in the lead role. Earlier, the film-maker roped in Amulya to play the female role. Now, he has brought Kriti as the second lead opposite 'Black Cobra' aka Duniya Vijay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada