»   » ಮೌಂಟ್ ಕಾರ್ಮೆಲ್ ಹುಡುಗಿ, 'ಬಾಕ್ಸರ್' ಬೆಡಗಿ ಕೃತಿಕಾ, ಏನಂತಾರೆ..?

ಮೌಂಟ್ ಕಾರ್ಮೆಲ್ ಹುಡುಗಿ, 'ಬಾಕ್ಸರ್' ಬೆಡಗಿ ಕೃತಿಕಾ, ಏನಂತಾರೆ..?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಮೌಂಟ್ ಕಾರ್ಮೆಲ್ ಹುಡುಗಿ, ಸ್ಯಾಂಡಲ್ ವುಡ್ ನ ಬೇಬಿ ಡಾಲ್ ಅಮೂಲ್ಯಾ ಅವರು 'ಚೆಲುವಿನ ಚಿತ್ತಾರ'ದ ಮೂಲಕ ಗೋಲ್ಡನ್ ಸ್ಟಾರ್ ಗೆ ನಾಯಕಿಯಾಗಿ ಕಾಣಿಸಿಕೊಂಡು ಸಿನಿ ರಸಿಕರನ್ನು ರಂಜಿಸುವುದರ ಜೊತೆಗೆ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡರು.

  ಇದೀಗ ಅದೇ ಸಾಲಿಗೆ ಮತ್ತೊಂದು ಸೇರ್ಪಡೆ ನಟಿ ಕೃತಿಕಾ ಜಯಕುಮಾರ್. ಹೌದು ಇವರು ಕೂಡ ಮೌಂಟ್ ಕಾರ್ಮೆಲ್ ಕಾಲೇಜಿನ ಹುಡುಗಿಯಾಗಿದ್ದು, ನಿರ್ದೇಶಕ ಪ್ರೀತಂ ಗುಬ್ಬಿ ಆಕ್ಷನ್-ಕಟ್ ಹೇಳಿರುವ 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ್ ಅವರ ಜೊತೆ 'ಬಾಕ್ಸರ್' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.[ಟ್ರೈಲರ್: ಡೈರೆಕ್ಟರ್ ಸ್ಪೆಷಲ್ ಹುಡುಗನಿಗೆ 'ಬಾಕ್ಸರ್' ಆಗೋ ಕನಸು!]

  ಈ ಮೊದಲು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡು ಟಾಲಿವುಡ್ ಕ್ಷೇತ್ರದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸಿನಿಪ್ರೀಯರ ಮನಗೆದ್ದಿರುವ ಬಹುಭಾಷಾ ನಟಿ ಕೃತಿಕಾ ಜಯಕುಮಾರ್ ನಮ್ಮ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಮೊದಲ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ. ಅಲ್ಲಧೇ ಭರತನಾಟ್ಯ ಕ್ಷೇತ್ರದಲ್ಲಿ ಈಕೆಯದು ಎತ್ತಿದ ಕೈ.

  ಇನ್ನು 19ರ ಹರೆಯದ ಈ ಮುದ್ದು ಚೆಲುವೆ ತಮ್ಮ ಕನ್ನಡದ ಚೊಚ್ಚಲ ಚಿತ್ರ 'ಬಾಕ್ಸರ್' ಬಗ್ಗೆ ರಸವತ್ತಾಗಿ ಹಂಚಿಕೊಂಡಿದ್ದಾರೆ. ಅದೇನೆಂಬುದನ್ನು ತಿಳಿಯಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ತೆಲುಗಿನ 'ದೃಶ್ಯಂ' ಮೂಲಕ ನಟನಾ ಕ್ಷೇತ್ರಕ್ಕೆ ಧುಮುಕಿದರು

  19ರ ಹರೆಯದ ಈ ಕನ್ನಡತಿ ಮೊದಲು ಮಿಂಚಿದ್ದು, ಟಾಲಿವುಡ್ ಕೇತ್ರದಲ್ಲಿ. ನಟ ವಿಕ್ಟರಿ ವೆಂಕಟೇಶ್ ಹಾಗೂ ನಟಿ ಮೀನಾ ಕಾಣಿಸಿಕೊಂಡಿದ್ದ, ತೆಲುಗಿನ 'ದೃಶ್ಯಂ' ಚಿತ್ರದ ಮೂಲಕ ನಮ್ಮ ಬೆಂಗಳೂರಿನ ಹುಡುಗಿ ಕೃತಿಕಾ ಜಯಕುಮಾರ್ ಅವರು ಮೊಟ್ಟ ಮೊದಲ ಬಾರಿಗೆ ನಟನಾ ಕ್ಷೇತ್ರಕ್ಕೆ ಧುಮುಕಿದರು. ಚಿತ್ರದಲ್ಲಿ ತೆಲುಗು ನಟ ವಿಕ್ಟರಿ ವೆಂಕಟೇಶ್ ಅವರ ದೊಡ್ಡ ಮಗಳಾಗಿ ನಟಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು.

  'ವಿನವಯ್ಯ ರಾಮಯ್ಯ' ಮೂಲಕ ಸೆಕೆಂಡ್ ಇನ್ನಿಂಗ್ಸ್

  ಚೊಚ್ಚಲ ನಾಯಕ ನಾಗ ಅನ್ವೇಶ್ ಜೊತೆ ಟಾಲಿವುಡ್ ಕ್ಷೇತ್ರದಲ್ಲಿ 'ವಿನವಯ್ಯ ರಾಮಯ್ಯ' ಎಂಬ ಲವ್-ಕಾಮಿಡಿ ಚಿತ್ರದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಇಲ್ಲಿ ಕೃತಿಕಾ ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಟಾಲಿವುಡ್ ಪ್ರೇಕ್ಷಕರ ಮನಗೆಲ್ಲಲಿದ್ದಾರೆ.

  'ಬಾಕ್ಸರ್' ನಲ್ಲಿ ವಿಭಿನ್ನ ಪಾತ್ರ

  ಇನ್ನು ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರ 'ಬಾಕ್ಸರ್' ಬಗ್ಗೆ ನಟಿ ಕೃತಿಕಾ ಜಯಕುಮಾರ್ ತುಂಬು ಅಭಿಮಾನ ವ್ಯಕ್ತಪಡಿಸುತ್ತಾರೆ. ಈ ಇಡೀ ಸಿನಿಮಾ ನಾಯಕ ಧನಂಜಯ್ ಹಾಗೂ ನಾಯಕಿ ಕೃತಿಕಾ ಹಿಂದೆ-ಮುಂದೆ ಸುತ್ತುತ್ತಿದ್ದು, ಒಟ್ನಲ್ಲಿ ಬಹಳ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರಂತೆ.[ಡೈರೆಕ್ಟರ್ ಸ್ಪೆಷಲ್ ಹುಡುಗ 'ಬಾಕ್ಸರ್' ಹೇಗಾದ? ವಿಡಿಯೋ ನೋಡಿ! ]

  'ಬಾಕ್ಸರ್' ನನಗೆ ವಿಶೇಷ ಸಿನಿಮಾ

  ಅಂದಹಾಗೆ ಮುದ್ದು ಬೆಡಗಿ ಕೃತಿಕಾ ಜಯರಾಂ ಅವರಿಗೆ 'ಬಾಕ್ಸರ್' ವಿಶೇಷ ಸಿನಿಮಾ ಅಂತೆ. ಇದರಲ್ಲಿ ಮಾಮೂಲಿ ಪಾತ್ರಕ್ಕಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಲ್ಲಿ ನನಗೆ ನನ್ನ ನಟನಾ ಕೌಶಲ್ಯವನ್ನು ತೋರಿಸುವ ಅವಕಾಶ ಸಿಕ್ಕಿದೆ. ಸಿನಿಮಾದ ಕೇಂದ್ರ ಬಿಂದು ನಾನು ಮತ್ತು ಧನಂಜಯ್. ನನಗೆ ಸ್ಕ್ರಿಪ್ಟ್ ಬಹಳ ಇಷ್ಟ ಆಯಿತು. ನನಗೆ ನಟಿಸಲು ಇದೊಂದು ಒಳ್ಳೆಯ ಚಿತ್ರ ಎಂದು ಅನಿಸಿತು. ಎನ್ನುತ್ತಾರೆ ಈ ಸಿಂಪಲ್ ಬ್ಯೂಟಿ.

  'ಬಾಕ್ಸರ್' ನಲ್ಲಿ ಅಂಧ ಹುಡುಗಿಯ ಪಾತ್ರ

  'ದೃಶ್ಯಂ' ಹುಡುಗಿ ಎಂದೇ ಖ್ಯಾತಿ ಗಳಿಸಿರುವ ನಟಿ ಕೃತಿಕಾ ಜಯಕುಮಾರ್ ಅವರು ಕನ್ನಡದ 'ಬಾಕ್ಸರ್' ಚಿತ್ರದಲ್ಲಿ ಅಂಧ ಹುಡುಗಿಯ ಪಾತ್ರ ವಹಿಸಿದ್ದಾರೆ. 'ವೃತ್ತಿ ಜೀವನದ ಮೊದ ಮೊದಲು ಇಂತಹ ಪಾತ್ರ ಸಿಗೋದು ಬಹಳ ಕಷ್ಟ. ಅದರಲ್ಲೂ ನನಗಂತೂ ಈ ಪಾತ್ರ ನಿಭಾಯಿಸೋದು ಬಹಳ ಕಷ್ಟದ ಜೊತೆಗೆ ಸವಾಲಾಗಿತ್ತು ಎನ್ನುತ್ತಾರೆ ಈ ಚೆಲುವೆ.

  ಅಂಧ ಹುಡುಗಿಯ ಪಾತ್ರ ನಿಭಾಯಿಸಲು ಅಂಧ ಶಾಲೆಗೆ ಭೇಟಿ

  ಇನ್ನು ಪಾತ್ರಕ್ಕೆ ತಕ್ಕಂತೆ ತಮ್ಮನ್ನು ತಾವು ಹುರಿಗೊಳಿಸಲು, ಅಂಧ ಶಾಲೆಗೂ ಭೇಟಿ ಕೊಟ್ಟಿದ್ದ ಈ ನಟಿ ಅಲ್ಲಿನ ಅನುಭವ ಹಂಚಿಕೊಂಡಿದ್ದಾರೆ. 'ನಾನು ಅಂಧಶಾಲೆಯಲ್ಲಿ ಎರಡು ದಿನಗಳ ಕಾಲ ಇದ್ದು, ಅಲ್ಲಿನ ಅಂಧರೊಂದಿಗೆ ಪ್ರಾಕ್ಟೀಸ್ ಮಾಡಿದೆ. ಕಡ್ಡಿ ಹಿಡಿದು ಓಡಾಡೋದು, ಹಾಗು ಕಡ್ಡಿ ಹಿಡಿದು ಜಾಡು ಹಿಡಿಯುವುದನ್ನು ಅಲ್ಲಿ ಹೇಳಿಕೊಟ್ಟರು. ಇನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನಾನೇ ಕಣ್ಣು ಕಟ್ಟಿಕೊಂಡು ನಮ್ಮ ಮನೆ ಸುತ್ತಮುತ್ತ ಕಡ್ಡಿ ಹಿಡಿದು ಓಡಾಡುತ್ತಿದ್ದೆ. ಎನ್ನುತ್ತಾರೆ.

  ಭರತನಾಟ್ಯದಲ್ಲಿ ಈಕೆಯದು ಎತ್ತಿದ ಕೈ

  ಅಂದಹಾಗೆ ನಟಿ ಕೃತಿಕಾ ಜಯಕುಮಾರ್ ಅವರು ತಾವು 7 ವರ್ಷ ವಯಸ್ಸಿನವರಾಗಿರುವಾಗಲೇ ಭರತನಾಟ್ಯ ಕಲಿಯಲು ಆರಂಭಿಸಿದ್ದಾರೆ. ಕೇರಳ ತಿರುವನಂತಪುರಂ ಮುಂತಾದಡೆ ಭರತನಾಟ್ಯ ಶೋ ನೀಡುವ ಸಂದರ್ಭದಲ್ಲಿ ಈಕೆಯ ಅದ್ಭುತ ನಾಟ್ಯ ನೋಡಿದ ಮಲಯಾಳಂ ನಿರ್ದೇಶಕ ಬಾಲು ಕಿರಿಯಾತ್ ಅವರು ತೆಲುಗಿನ ದೃಶ್ಯಂ ಚಿತ್ರದಲ್ಲಿ ವೆಂಕಟೇಶ್ ಮಗಳಾಗಿ ಅಭಿನಯಿಸಲು ಕೇಳಿಕೊಂಡರು. ತದನಂತರ ಹಿಂತಿರುಗಿ ನೋಡದ ಕೃತಿಕಾ ಅವರು ಇದೀಗ ತಮ್ಮ ಮೂರನೇ ಯಶಸ್ವಿ ಇನ್ನಿಂಗ್ಸ್ ಆರಂಭಿಸಿದ್ದಾರೆ.

  English summary
  At just 19 years, Kruthika Jayakumar is a first-year student of journalism at Mount Carmel College and is living out her dream of being an actress too. The young girl who debuted with Drushyam in Telugu followed it up with Preetham Gubbi’s Boxer that marks her debut in Kannada.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more