For Quick Alerts
  ALLOW NOTIFICATIONS  
  For Daily Alerts

  ಹಿಂದಿ ವೆಬ್ ಸಿರೀಸ್ ನಲ್ಲಿ ಕನ್ನಡ ನಟಿ ಲಾಸ್ಯ ನಾಗ್

  |

  ಬರಹಗಾರ ಸಲ್ಮಾನ್ ರಶ್ದಿ ಅವರ 'ಮಿಡ್ ನೈಟ್ ಚಿಲ್ಡನ್' ಎಂಬ ಪ್ರಸಿದ್ಧ ಕಾದಂಬರಿ ಈಗ ದೃಶ್ಯ ರೂಪ ಪಡೆದುಕೊಳ್ಳುತ್ತಿದೆ. ಈ ಕಾದಂಬರಿ ಆಧಾರಿತ ವೆಬ್ ಸೀಸನ್ ಹಿಂದಿಯಲ್ಲಿ ಶುರು ಆಗುತ್ತಿದೆ. ಇದರಲ್ಲಿ ಕನ್ನಡದ ನಟಿ ಲಾಸ್ಯ ನಾಗ್ ನಟಿಸುತ್ತಿದ್ದಾರೆ.

  ಕನ್ನಡದ ಜೊತೆಗೆ ದಕ್ಷಿಣ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದ ಲಾಸ್ಯ ಈಗ ಬಾಲಿವುಡ್ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ಈ ಅವಕಾಶ ಅವರಿಗೆ ನಟ ನವಾಜುದ್ದೀನ್ ಸಿದ್ಧಿಕಿ ಅವರಿಂದ ಸಿಕ್ಕಿದೆ.

  ಹಾಟ್ ಫೋಟೋ ಶೂಟ್ ನಲ್ಲಿ 'ಬಿಗ್ ಬಾಸ್' ಲಾಸ್ಯ

  ಲಾಸ್ಯ ನಿರ್ದೇಶಕ ಮುಖೇಶ್ ಚಾಬ್ರಾ ಅವರ ನೆಟ್​ಫ್ಲಿಕ್ಸ್ ಕಂಟೆಂಟ್ ಸಿನಿಮಾದ ಆಡಿಷನ್​ಗೆ ಹೋಗಿದ್ದರಂತೆ. ಆದರೆ, ನಿರ್ದೇಶಕರಿಗೆ 35ರ ವರ್ಷದ ನಟಿ ಬೇಕಾಗಿದ್ದರಿಂದ ಅವರು ಆಯ್ಕೆ ಆಗಲಿಲ್ಲವಂತೆ. ಬಳಿಕ ಮುಖೇಶ್ ಮತ್ತು ನವಾಜುದ್ದೀನ್ ಅವರಿಂದ ಮತ್ತೊಂದು ಅವಕಾಶ ಸಿಕ್ಕಿತಂತೆ .

  ಮುಖೇಶ್ ಮತ್ತು ನವಾಜುದ್ದೀನ್ ರಂದ ವಿಶಾಲ್ ಭಾರದ್ವಾಜ್ ಪರಿಚಯವಾಗಿ ಅವರ ವೆಬ್ ಸಿರೀಸ್​ಗೆ ಆಯ್ಕೆಯಾದರಂತೆ. ಈ ವೆಬ್ ಸೀರಿಸ್ ನಲ್ಲಿ ತಮಿಳುನಾಡು ಮೂಲದ ಪರಿ ಅಯ್ಯರ್ ಪಾತ್ರದಲ್ಲಿ ಲಾಸ್ಯ ಕಾಣಿಸಿಕೊಳ್ಳಲಿದ್ದಾರೆ.

  ಬಿಬಿಸಿ (ಬ್ರಿಟಿಷ್ ಬ್ರಾಡ್ ​ಕಾಸ್ಟಿಂಗ್ ಕಂಪನಿ) ಮಿಡ್​ನೈಟ್ ಚಿಲ್ಡನ್'ಗೆ ಬಂಡವಾಳ ಹಾಕುತ್ತಿದ್ದು, 1947ರ ಸ್ವಾತಂತ್ರ್ಯ ನಂತರದ ದಿನಗಳನ್ನೇ ವೆಬ್​ ಸಿರೀಸ್ ರೂಪದಲ್ಲಿ ಕಟ್ಟಿಕೊಡಲಾಗುತ್ತಿದೆ. 2020ರ ಡಿಸೆಂಬರ್​ನಲ್ಲಿ ಈ ವೆಬ್ ಸಿರೀಸ್ ಬಿಡುಗಡೆ ಆಗಲಿದೆ.

  ಅಂದಹಾಗೆ, ಲಾಸ್ಯ ನಾಗ್ ಕನ್ನಡದ ಕೆಲವು ಸಿನಿಮಾ ಮಾಡಿದ್ದು, ಬಿಗ್ ಬಾಸ್ ಸೀಸನ್ 5ರ ವಿಶೇಷ ಸ್ಪರ್ಧಿ ಆಗಿದ್ದರು.

  English summary
  Kannada actress Lasya Nag will be playing lead role in 'Midnight Children Dream' Hindi web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X