»   » ನ್ಯೂಜೆರ್ಸಿಯಲ್ಲಿ ತಾಳೆ ಹೂವ ಪೊದೆಯಿಂದ ಮಾಧವಿ

ನ್ಯೂಜೆರ್ಸಿಯಲ್ಲಿ ತಾಳೆ ಹೂವ ಪೊದೆಯಿಂದ ಮಾಧವಿ

Posted By:
Subscribe to Filmibeat Kannada
Actress Madhavi
ಅಣ್ಣಾವ್ರ ಜೊತೆ ಹಾಲು ಜೇನು, ಒಡಹುಟ್ಟಿದವರು, ಆಕಸ್ಮಿಕ, ಜೀವನ ಚೈತ್ರ, ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು ಚಿತ್ರಗಳಲ್ಲಿ ಅಭಿನಯಿಸಿದ ಒಂದು ಕಾಲದ ಮಾದಕ ತಾರೆ ಮಾಧವಿ ಈಗೆಲ್ಲಿದ್ದಾರೆ? ಹದಿನೇಳು ವರ್ಷಗಳ ಕಾಲ ಏಳು ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಮಾಧವಿ ಅವರದು.

ಸಾಹಸಸಿಂಹ ವಿಷ್ಣುವರ್ಧನ್ ಜೊತೆ 'ಮಲಯ ಮಾರುತ' ಚಿತ್ರದಲ್ಲೂ ಅಭಿನಯಿಸಿದ್ದರು ಮಾಧವಿ. ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ, ಮೊಹನ್ ಲಾಲ್, ಮಮ್ಮುಟ್ಟಿ, ಅಮಿತಾಬ್ ಬಚ್ಚನ್, ಜಿತೇಂದ್ರ, ರಾಜೇಶ್ ಖನ್ನ, ಅಜಯ್ ದೇವಗನ್, ರಿಷಿ ಕಪೂರ್ ಹೀಗೆ ಮಾಧವಿ ಅಭಿನಯಿಸಿದವರ ಪಟ್ಟಿ ಸುದೀರ್ಘವಾಗಿದೆ.

1996, ಫೆಬ್ರವರಿ 14ರಂದು ಜರ್ಮನ್ ಮೂಲದ ಫಾರ್ಮಾಸುಟಿಕಲ್ ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ವರಿಸಿದ ಮಾಧವಿ ಈಗ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಅವರೀಗ ಮೂರು ಮಕ್ಕಳ ತಾಯಿ. ಟಿಫಾನಿ (8), ಪ್ರಿಸಿಲ್ಲಾ (4) ಮತ್ತು ಎವಲಿನ್ (1). ಗಂಡ,ಅತ್ತೆಮಾವ ಹಾಗೂ ಮಕ್ಕಳೊಂದಿಗೆ ನನ್ನದೀಗ ಸಂತಸದ ಬದುಕು ಎಂದು ಮಾಧವಿ ಕಣ್ಣರಳಿಸುತ್ತಾರೆ.

ತಮ್ಮದೇ ಆದಂತಹ ಫಾರ್ಮಾಸುಟಿಕಲ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ಬೆಳ್ಳಿತೆರೆಗೆ ಖಂಡಿತ ಬರುವುದಿಲ್ಲ ಎಂದು ಮಾಧವಿ ಸ್ಪಷ್ಟಪಡಿಸಿದ್ದಾರೆ. ಈಗವರು ಆಧ್ಯಾತ್ಮಕ್ಕೆ ಹೊರಳಿದ್ದು ವೃದ್ಧಾಶ್ರಮವನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ನಿವೇಶನವನ್ನೂ ಪರಿಶೀಲಿಸುತ್ತಿದ್ದಾರಂತೆ. ಎಲ್ಲಿ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. 'ಖೈದಿ' ಚಿತ್ರದಲ್ಲಿ "ತಾಳೆ ಹೂವ ಪೊದೆಯಿಂದ..." ಎಂದು ಮಾದಕವಾಗಿ ಮಾಧವಿ ಅಭಿನಯಿಸಿದ್ದನ್ನು ಚಿತ್ರರಸಿಕರು ಮಾತ್ರ ಇನ್ನೂ ಮರೆತಿಲ್ಲ. (ಏಜೆನ್ಸೀಸ್)

English summary
Actress Madhavi played lead roles for 17 years in seven languages. She has acted in more than 300 films. Now she is settled in New Jersey. She married a pharmaceutical businessman named Ralph Sharma, who is half-Indian and half-German.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada