For Quick Alerts
  ALLOW NOTIFICATIONS  
  For Daily Alerts

  ಇನ್ನೊಮ್ಮೆ 'ಎಲೆಕ್ಷನ್' ಎದುರಿಸುತ್ತಿದ್ದಾರೆ ಮಾಲಾಶ್ರೀ

  By Rajendra
  |

  ಕನ್ನಡದ ಕನಸಿನ ರಾಣಿ ಮಾಲಾಶ್ರೀ ಅವರಿಗೆ ಇದು ಎರಡನೇ 'ಎಲೆಕ್ಷನ್'. ಮೊದಲ ಬಾರಿ 'ಎಲೆಕ್ಷನ್' ನಲ್ಲಿ ಅಭಿಮಾನಿಗಳನ್ನು ತಕ್ಕಮಟ್ಟಿಗೆ ಗೆದ್ದಿದ್ದರು. ಈ ಬಾರಿ ಅವರು ಮರು ಚುನಾವಣೆ ಎದುರಿಸುತ್ತಿದ್ದಾರೆ. ಈ ಸಲವೂ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಅವರಿಗಿದೆ.

  ಇದು ಅಸಲಿ ಅಲ್ಲ ರೀಲ್ 'ಎಲೆಕ್ಷನ್'. ರಾಮು ಎಂಟರ್ ಪ್ರೈಸಸ್ ಅವರ 'ಎಲೆಕ್ಷನ್' ರಜತ ಪರದೆಯ ಮೇಲೆ ಮತ್ತೆ ರಾರಾಜಿಸಲಿದೆ. ನವೆಂಬರ್ ಮೊದಲ ದಿವಸ ಅಂದರೆ ರಾಜ್ಯೋತ್ಸವದಂದು ಚಿತ್ರವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ನಿರೂಪಣೆ ಶೈಲಿಯಲ್ಲಿ ನ್ಯಾಯ ನೀತಿ ಧರ್ಮ ಪರಿಪಾಲನೆ 'ಎಲೆಕ್ಷನ್' ಕಮಿಷನರ್ ಅನುಷ್ಠಾನ ಗೊಳಿಸುವ ವಿಚಾರ. [ಎಲೆಕ್ಷನ್ ಚಿತ್ರ ವಿಮರ್ಶೆ]

  ಖಡಕ್ ಅಧಿಕಾರಿ ಆಗಿ ಇಂದಿರಾ ಪಾತ್ರವನ್ನು ಮಾಲಾಶ್ರೀ ಪೋಷಿಸಿದ್ದಾರೆ. ನಿರ್ದೇಶಕ ಎನ್ ಓಂ ಪ್ರಕಾಶ್ ರಾವ್ ಅವರು ಅನೇಕ ಸಾಹಸಮಯ ಹಾಗೂ ಜನ ಮೆಚ್ಚುಗೆ ಗಳಿಸುವ ರೀತಿಯಲ್ಲಿ ಛಾಯಾಗ್ರಾಹಕ ರಾಜೇಶ್ ಖಟ್ಟ ಅವರ ನೇತೃತ್ವದಲ್ಲಿ ಚಿತ್ರೀಕರಣ ಮಾಡಲಾಗಿದೆ.

  'ಆಕ್ಷನ್ ರಾಣಿ' ಆಗಿ ಪ್ರಖ್ಯಾತರಾಗಿರುವ ಮಾಲಾಶ್ರೀ ಅವರು 'ಎಲೆಕ್ಷನ್' ಚಿತ್ರಕ್ಕೆ ಹೆಚ್ಚಿನ ಶ್ರಮದ ಜೊತೆಗೆ ಹಲವಾರು ಸಾಹಸದ ಹಾಗೂ ಸಮಂಜಸ ಎನ್ನುವ ಇಂಜೆಕ್ಷನ್ ಸಹ ನೀಡಿದ್ದಾರೆ. ಸಾಹಸ ಚಿತ್ರಗಳ ಸರ್ದಾರ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ರಾಮು ಅವರ 'ಲಾಕ್ ಅಪ್ ಡೆತ್, ಸಿಂಹದ ಮರಿ, ಎಕೆ 47, ಕಲಾಸಿಪಾಳ್ಯ ಹಾಗೂ 'ಕನ್ನಡದ ಕಿರಣ್ ಬೇಡಿ' ಸಿನೆಮಾಗಳನ್ನು ನಿರ್ದೇಶನ ಮಾಡಿದವರು.

  'ಎಲೆಕ್ಷನ್' ಚಿತ್ರಕ್ಕೆ ರಾವು ಅವರೇ ಚಿತ್ರಕಥೆ ಬರೆದಿದ್ದಾರೆ. ಕನ್ನಡ ಚಿತ್ರರಂಗದ ನಾದ ಬ್ರಹ್ಮ ಸಾಹಿತ್ಯದ ಸರದಾರ ರಾಷ್ಟ್ರ ಪ್ರಶಸ್ತಿ ವಿಜೇತ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ಹಾಗೂ ಸಾಹಿತ್ಯವನ್ನು ಒದಗಿಸಿದ್ದಾರೆ. ರಾಜೇಶ್ ಖಟ್ಟ ಅವರ ಛಾಯಾಗ್ರಹಣ, ಮನೋಹರ್ ಅವರ ಸಂಕಲನ, ಆನಂದ್ ಅವರ ಸಂಭಾಷಣೆ, ಸರಿಗಮ ವಿಜಿ ಹಾಗೂ ಸೋಮ ರಾಜ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

  ಪೋಷಕ ಪತ್ರಗಳಲ್ಲಿ ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೊ ನಾಗರಾಜ್, ಸುಚಿಂದ್ರಪ್ರಸಾದ್, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಬುಲ್ಲೆಟ್ ಪ್ರಕಾಷ್, ಶೋಬಾರಾಜ್, ಪ್ರದೀಪ್ ರಾವತ್, ಹನುಮಂತೆ ಗೌಡ, ಜಿ.ಕೆ.ಗೋವಿಂದ ರಾವು, ಸುಚಿತ್ರಾ, ದಿವ್ಯ, ಶ್ರವಣ್, ಶಂಕೆರ್ಣರಾಯಣ್, ಕೀರ್ತಿರಾಜ್, ಮೈಕೊ ಶಿವು, ರವಿ, ವಿಕಾಸ್ ಹಾಗೂ ಇತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada films action queen Malashree faces 'Election' again. But not real election her Election movie is all set to re-releasing on 'Kannada Rajyotsava' (1st November). 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X