For Quick Alerts
  ALLOW NOTIFICATIONS  
  For Daily Alerts

  ಮಾಳವಿಕಾ ಅವಿನಾಶ್ ಈಗ ರಾಜ್ಯ ಬಿಜೆಪಿ ವಕ್ತಾರೆ

  By Rajendra
  |

  ನಟಿ, ನಿರೂಪಕಿ ಮಾಳವಿಕಾ ಅವಿನಾಶ್ ಅವರು ಹೊಸ ಜವಾಬ್ದಾರಿಯ ಬಂಡಿ ಎಳೆಯಲು ಸಿದ್ಧವಾಗಿದ್ದಾರೆ. ಅವರನ್ನು ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಜಂಟಿ ವಕ್ತಾರೆಯನ್ನಾಗಿ ಆಯ್ಕೆ ಮಾಡಲಾಗಿದೆ.

  ಕಳೆದ ವರ್ಷವಷ್ಟೆ ಮಾಳವಿಕಾ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದವರು. ಅದಕ್ಕೂ ಮುನ್ನ ಜೆಡಿಎಸ್ ಪಾಳಯದಲ್ಲಿದ್ದವರು. ಎರಡು ವರ್ಷಗಳ ಕಾಲ ಜೆಡಿಎಸ್ ನ ತೆನೆಹೊತ್ತ ಮಹಿಳೆ ಮಾಳವಿಕಾ ಅವರಿಗೆ ಹೊಸ ಹೊರೆ ನೀಡಲಿಲ್ಲ. ಕಡೆಗೂ ಅವರಿಗೆ ಜೆಡಿಎಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿರಲಿಲ್ಲ.

  ಆದರೆ ಬಿಜೆಪಿ ಪಕ್ಷ ಮಾಳವಿಕಾ ಅವರಿಗೆ ಹೊಸ ಜವಾಬ್ದಾರಿಯನ್ನು ನೀಡಿದೆ. ಹದಿನಾರನೇ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಳವಿಕಾ ಅವರಿಗೆ ಈ ಹೊಸ ಪದವಿಯನ್ನು ನೀಡಿರುವುದು ವಿಶೇಷ.

  ಇನ್ನು ಮಾಳವಿಕ ಅವರು ಕರ್ನಾಟಕದಲ್ಲಿ ಟಿವಿ ನೋಡುವ ಹೆಣ್ಣು ಮಕ್ಕಳಿಗೆ ಚಿರಪರಿಚಿತ ಮುಖ. ಕಿರುತೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದವರು. ಮಾಯಾಮೃಗ ಸೀರಿಯಲ್ಲು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ.

  ಜೀ ಕನ್ನಡ ವಾಹಿನಿಯ ಬದುಕು ಜಟಕ ಬಂಡಿ ಕಾರ್ಯಕ್ರಮದಲ್ಲಿ ಕ್ಯಾಮೆರಾ ಎದುರಲ್ಲೇ ಪಂಚಾಯಿತಿ ಮಾಡಿ ಸ್ಥಳದಲ್ಲೇ ಪರಿಹಾರ ಹುಡುಕಿ ಸಾಕಷ್ಟು ಹೆಣ್ಣು ಮಕ್ಕಳ ಕಣ್ಣೀರು ಒರೆಸಿದ್ದಾರೆ. ಈಗ ಬಿಜೆಪಿ ವಕ್ತಾರೆಯಾಗಿ ಕಮಲಕ್ಕೆ ಇನ್ನಷ್ಟು ಹೊಳಪು ನೀಡಲಿದ್ದಾರೆ.(ಏಜೆನ್ಸೀಸ್)

  English summary
  Actress and television host Malavika Avinash, noted for her wide repertoire of work in Kannada and Tamil has been appointed as the joint spokesperson of Karnataka state BJP unit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X