For Quick Alerts
  ALLOW NOTIFICATIONS  
  For Daily Alerts

  ಮಮತಾ ಮೋಹನ್ ದಾಸ್ ದಾಂಪತ್ಯದಲ್ಲಿ ಬಿರುಕು

  By Rajendra
  |

  ದಕ್ಷಿಣದ ತಾರೆ ಮಮತಾ ಮೋಹನ್ ದಾಸ್ ಅವರ ಹಾಲಿನಂತಹ ಸಂಸಾರ ಈಗ ಒಡೆದಿದೆ. ಆಕೆ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಕಿಚ್ಚ ಸುದೀಪ್ ಮುಖ್ಯಭೂಮಿಕೆಲ್ಲಿದ್ದ ಗೂಳಿ ಚಿತ್ರದಲ್ಲಿ ಅಭಿನಯಿಸಿದ್ದ ಮಮತಾ ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.

  11.11.11ರಂದು ಮಮತಾ ಮೋಹನ್ ದಾಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ 28.12.11ಕ್ಕೆ ಪ್ರಜಿತ್ ಪದ್ಮನಾಭನ್ ಅವರ ಕೈಹಿಡಿದಿದ್ದರು. ಈಗ ತಮ್ಮ ವಿವಾಹ ವಿಚ್ಛೇದನಕ್ಕೂ ಫ್ಯಾನ್ಸಿ ಸಂಖ್ಯೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

  12.12.12ರಂದು ವಿವಾಹ ವಿಚ್ಛೇದನದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕಳೆದ ಕೆಲಸಮಯದಿಂದಲೂ ಮಮತಾ ಅವರು ತಮ್ಮ ಪತಿಯ ಜೊತೆಗಿಲ್ಲ. ಇಬ್ಬರೂ ಬೇರೆಬೇರೆಯಾಗಿ ವಾಸಿಸುತ್ತಿದ್ದರು. ಈಗ ಕಾನೂನಿನ ರೀತ್ಯ ಬೇರ್ಪಡಲು ಮುಂದಾಗಿದ್ದಾರೆ.

  ಇಬ್ಬರ ಮನೋಭಾವಗಳು ಭಿನ್ನವಾಗಿದ್ದು ನಾವಿಬ್ಬರೂ ಒಟ್ಟಿಗೆ ಬಾಳಲು ಸಾಧ್ಯವಿಲ್ಲ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ತಮ್ಮ ಬಾಳ ಬಂಡಿ ಸಾಗುತ್ತಿದೆ ಎಂದಿದ್ದಾರೆ ಮಮತಾ. ಆದರೆ ಸೂಕ್ತವಾದ ಕಾರಣ ಇದಿರಲಿಕ್ಕಿಲ್ಲ. ಇನ್ನೇನೋ ಇರಬೇಕು ಎಂಬ ಅನುಮಾಮವೂ ಮಮತಾ ಆತ್ಮೀಯರನ್ನು ಕಾಡುತ್ತಿದೆ.

  ಕೋಜಿಕೋಡ್‌ನಲ್ಲಿ ಇವರಿಬ್ಬರ ಮದುವೆ ಸರಳವಾಗಿ ನೆರವೇರಿತ್ತು. ಬಹ್ರೇನ್‌ನಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಪ್ರಜಿತ್. ಮಮತಾ ಅವರ ತಂದೆ ಬ್ಯಾಂಕ್ ಆಫ್ ಅಮೆರಿಕಾದಲ್ಲಿ ಹಿರಿಯ ಅಧಿಕಾರಿ. ಇವರಿಬ್ಬರ ಮದುವೆ ಕೇವಲ ಆತ್ಮೀಯರು ಸಮ್ಮುಖದಲ್ಲಿ ನೆರವೇರಿತ್ತು.

  ಮಮತಾ ಮೋಹನ್ ದಾಸ್ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಖತ್ ಬಿಸಿ ತಾರೆ. ಸಾಲದಕ್ಕೆ ಈಕೆ ಗಾಯಕಿ ಕೂಡ. 'ಗೂಳಿ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಮತ್ತೆ ಈಕೆಗೆ ಕನ್ನಡದಲ್ಲಿ ನಟಿಸುವ ಚಾನ್ಸ್ ಸಿಗಲೇ ಇಲ್ಲ. (ಏಜೆನ್ಸೀಸ್)

  English summary
  A year ago on 11.11.11, Mamata Mohandas had got engaged to Pregith Padmanabhan. Today exactly a year later the couple has decided to part ways. Speaking to a popular daily, Mamata disclosed the news and announced her decision to divorce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X