For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರ ವಿರೋಧಿಗಳ ವಿರುದ್ಧ 'ಕೆಂಡಸಂಪಿಗೆ' ಮಾನ್ವಿತಾ ಯುದ್ಧ

  By Harshitha
  |

  'ಕನ್ನಡ್ ಗೊತ್ತಿಲ್ಲ....ಕನ್ನಡ್ ಬರಲ್ಲ....I don't watch Kannada Films....ಯಾರ್ರೀ ಕನ್ನಡ ಸಿನಿಮಾ ನೋಡ್ತಾರೆ....ಕನ್ನಡ ಚಿತ್ರಗಳಲ್ಲಿ ಅಂತದ್ದೇನಿದೆ' - ಇಂತಹ ಅನೇಕ ಡೈಲಾಗ್ ಗಳನ್ನ ನಿಮ್ಮ ಅಕ್ಕ-ಪಕ್ಕ ಪ್ರತಿನಿತ್ಯ ಕೇಳಿರ್ತಿರಾ.

  ದುಡಿಯೋದು ಇಲ್ಲಿ, ಸೆಟ್ಲ್ ಆಗಿರುವುದು ಇಲ್ಲಿಯೇ ಆದರೂ ಕನ್ನಡ ಕಲಿಯದ ಪರಭಾಷೆಯವರ ವಿರುದ್ಧ ನಿಮಗೆ ಸಿಟ್ಟು ಬಂದಿದೆಯೋ ಇಲ್ವೋ, ಆದರೆ 'ಕೆಂಡಸಂಪಿಗೆ' ನಟಿ ಮಾನ್ವಿತಾ ಹರೀಶ್ ಗೆ ಮಾತ್ರ ಸಿಕ್ಕಾಪಟ್ಟೆ ಕೋಪ ಬಂದಿದೆ. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

  ಕನ್ನಡ ಭಾಷೆ ಮತ್ತು ಕನ್ನಡ ಚಿತ್ರಗಳ ಬಗ್ಗೆ ಕೇವಲವಾಗಿ ಮಾತನಾಡುವವರ ವಿರುದ್ಧ ನಟಿ ಮಾನ್ವಿತಾ ಹರೀಶ್ ಗರಂ ಆಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸುದೀರ್ಘ ಸ್ಟೇಟಸ್ ಹಾಕಿದ್ದಾರೆ.

  I'm sorry! I don't appreciate you, if you don't learn atleast basic Kannada living in Karnataka. Please go back to your...

  Posted by Manvitha Harish on Monday, January 4, 2016

  ''ಕರ್ನಾಟಕದಲ್ಲಿದ್ದು ಕನ್ನಡ ಕಲಿಯದವರಿಗೆ ನಾನು ಭೇಷ್ ಎನ್ನುವುದಿಲ್ಲ. ನನ್ನ ಕ್ಷಮಿಸಿ. ನಿಮ್ಮ ನಿಮ್ಮ ರಾಜ್ಯಕ್ಕೆ ಹೋಗಿ ಅಲ್ಲೇ ಹೊಟ್ಟೆ ಪಾಡು ನೋಡಿಕೊಳ್ಳಿ. ಇವ್ರಿಗೆ ಆಶ್ರಯ ಕೊಡ್ಬೇಕು, ಕೆಲಸ ಕೊಡ್ಬೇಕು, ನಮ್ಮ ಭಾಷೆ, ನಮ್ಮ ನೆಲ, ನಮ್ಮ ಸಿನಿಮಾ ಬಗ್ಗೆ ಕೆಟ್ಟದಾಗಿ ಅನಿಸಿಕೊಳ್ಳಬೇಕು. ಇಂತವ್ರಿಗೆ ಸಪೋರ್ಟ್ ಮಾಡೋದು ಪಕ್ಕದಲ್ಲಿ ನಿಂತಿರೋ ಕರ್ನಾಟಕದವರೇ. ಅವರನ್ನ ವಹಿಸಿಕೊಂಡು, ''ಕನ್ನಡ ಚಿತ್ರಗಳಲ್ಲಿ ಅಂತದ್ದು ಏನಿದೆ'' ಅಂತ ಕೇಳ್ತಾರೆ. ಅಂತಹ ಕಾಮೆಂಟ್ಸ್ ಕೇಳಿದ್ರೆ ನನಗೆ ಕೋಪ ಬರುತ್ತೆ. ನೀವು ನನ್ನನ್ನ ಕಳ್ಕೊಂಡಿದ್ದೀರಾ. ಜೀವನದಲ್ಲಿ ಇನ್ನೆಂದೂ ನಿಮ್ಮ ಮುಖಗಳನ್ನ ನಾನು ನೋಡಲಾರೆ. ಗುಡ್ ಬೈ'' ಅಂತ ಮಾನ್ವಿತಾ ಹರೀಶ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಕನ್ನಡ ಹುಡುಗಿಯ ಈ ಭಾಷಾಭಿಮಾನಕ್ಕೆ ಕನ್ನಡಿಗರು ಭೇಷ್ ಅನ್ನಲೇಬೇಕು. ಅಲ್ಲವೇ?

  English summary
  Kannada Actress Manvitha Harish of 'Kendasampige' fame has taken her facebook account to express her anger against Non-Kannada speaking people in Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X