For Quick Alerts
  ALLOW NOTIFICATIONS  
  For Daily Alerts

  'ಚೌಕ'ದೊಳು ಸೇರಿಕೊಂಡ 'ಕೆಂಡಸಂಪಿಗೆ' ಚೆಲುವೆ ಮಾನ್ವಿತಾ

  By Suneetha
  |

  'ಕೆಂಡಸಂಪಿಗೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟು, ಪ್ರೇಕ್ಷಕರಿಗೆ ಕಮಾಲ್ ಮಾಡಿದ ನಟಿ ಮಾನ್ವಿತಾ ಹರೀಶ್, ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಟಗರು' ಚಿತ್ರದಲ್ಲೂ ನಾಯಕಿ ಪಟ್ಟ ಅಲಂಕರಿಸಿದ್ದಾರೆ.

  ಇದೀಗ ಮಾನ್ವಿತಾ ಹರೀಶ್ ಅವರ ಕಡೆಯಿಂದ ಹೊಸ ಸುದ್ದಿ ಏನಪ್ಪಾ ಅಂದ್ರೆ, ಮಾನ್ವಿತಾ ಅವರು ಕುಳ್ಳ ದ್ವಾರಕೀಶ್ ಅವರ 50ನೇ ಸಿನಿಮಾ 'ಚೌಕ'ದಲ್ಲೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಕರಾವಳಿ ಬೆಡಗಿ ಮಾನ್ವಿತಾ ಹರೀಶ್ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ.['ಚೌಕ' ಚಿತ್ರದ ನಾಲ್ವರು ಹೀರೋಯಿನ್ ಗಳು 'ಈ' ನಟಿಯರೇ.!]

  ಈಗಾಗಲೇ ಹಲವಾರು ವಿಶೇಷತೆಗಳಿಂದ ಸುದ್ದಿ ಮಾಡುತ್ತಿರುವ 'ಚೌಕ' ಕುಳ್ಳ ದ್ವಾರಕೀಶ್ ನಿರ್ಮಾಣ ಸಂಸ್ಥೆಯ 50ನೇ ಸಿನಿಮಾ. ಈ ಚಿತ್ರದಲ್ಲಿ ಐವರು ನಾಯಕರು, ಐವರು ನಾಯಕಿಯರು ಪ್ರಮುಖ ಪಾತ್ರ ವಹಿಸಿದ್ದಾರೆ.[ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]

  Actress Manvitha Harish's guest role in Dwarakish's 5oth film 'Chowka'

  ಜೊತೆಗೆ ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕರು, ಖ್ಯಾತ ಸಂಗೀತ ನಿರ್ದೇಶಕರು ಮತ್ತು ತಂತ್ರಜ್ಞರು ಈ ಚಿತ್ರಕ್ಕೆ ದುಡಿದಿದ್ದಾರೆ. ಚಿತ್ರಕ್ಕೆ ಖಳನಟ ದಿವಂಗತ ಸುಧೀರ್ ಪುತ್ರ ತರುಣ್ ಸುಧೀರ್ ಅವರು ಮೊದಲ ಬಾರಿಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.

  ಇನ್ನು ಈ ಚಿತ್ರದಲ್ಲಿ ಸುದೀಪ್ ಅವರು ಕೂಡ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಮಾತ್ರವಲ್ಲದೇ, ಮೂಲಗಳ ಪ್ರಕಾರ ಹಿರಿಯ ಕಾಮಿಡಿ ನಟ ಕಾಶಿನಾಥ್ ಅವರಿಗೂ ಸಣ್ಣ ಪಾತ್ರ ಇದೆ ಎಂದು ಹೇಳಲಾಗುತ್ತಿದೆ.[50ನೇ ಚಿತ್ರದಲ್ಲಿ ಸಿನಿರಸಿಕರಿಗೆ ಮೋಡಿ ಮಾಡಲಿದ್ದಾರೆ ದ್ವಾರಕೀಶ್]

  ಇನ್ನುಳಿದಂತೆ ನಟ ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್ ದೇವರಾಜ್, ಲವ್ಲಿ ಸ್ಟಾರ್ ಪ್ರೇಮ, ನಟಿ ದೀಪಾ ಸನ್ನಿಧಿ, ನಟಿ ಐಂದ್ರಿತಾ ರೇ, ನಟಿ ಪ್ರಿಯಾಮಣಿ ಮತ್ತು ಮಲ್ಲುಕುಟ್ಟಿ ಭಾವನಾ ಮೆನನ್ ಮತ್ತಿತ್ತರರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

  ಈಗಾಗಲೇ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ತದನಂತೆ ಬಿಡುಗಡೆ ದಿನಾಂಕ ಹೊರಬೀಳಲಿದೆ.

  English summary
  Tarun Sudhir's debut direction kannada movie 'Chowka' that sees an ensemble cast of four heroes and four heroines also brings in 'Kendasampige' fame Actress Manvitha Harish on board for a guest appearance in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X