»   » 'ಟಗರು' ಗೊಂಬೆ ಮಾನ್ವಿತಾ ಹೊಸ ಲುಕ್ ನೋಡಿದ್ರೆ ನೀವು ಶಾಕ್ ಆಗ್ತೀರಾ

'ಟಗರು' ಗೊಂಬೆ ಮಾನ್ವಿತಾ ಹೊಸ ಲುಕ್ ನೋಡಿದ್ರೆ ನೀವು ಶಾಕ್ ಆಗ್ತೀರಾ

Posted By:
Subscribe to Filmibeat Kannada

'ಕೆಂಡಸಂಪಿಗೆ' ಗಿಣಿಮರಿ, ಗೌರಿ ಅಲಿಯಾಸ್ ಮಾನ್ವಿತಾ ಹರೀಶ್ ಅವರನ್ನು ನೀವು ಯಾವೆಲ್ಲಾ ಅವತಾರದಲ್ಲಿ ನೋಡಿರುತ್ತೀರಾ.?. ಸಲ್ವಾರ್, ಲಂಗ-ದಾವಣಿ, ಜೀನ್ಸ್ ಪ್ಯಾಂಟ್-ಟೀ ಶರ್ಟ್ ಹಾಕಿ ಮಾಮೂಲಿಯಾಗಿ ಇರೋದನ್ನ ನೋಡಿರುತ್ತೀರಾ.

ಅದೇ ಮುದ್ದು ಬೆಡಗಿ ಮಾನ್ವಿತಾ ಹರೀಶ್ ಶರ್ಟ್ ಮೇಲೆತ್ತಿ ಕಟ್ಟಿ, ಚಿಕ್ಕ ಚಡ್ಡಿ ಹಾಕಿ ತಮಟೆ ಸೌಂಡ್ ಗೆ ಸಖತ್ ಆಗಿ ವಿಶಲ್ ಹೊಡೆದು ಡ್ಯಾನ್ಸ್ ಮಾಡಿದ್ರೆ, ವಾವ್ ಹೇಗಿರುತ್ತೆ, ಹಾಗೆ ಸ್ವಲ್ಪ ಊಹೆ ಮಾಡಿ ನೋಡೋಣ. ಸೂಪರ್ ಅಲ್ವಾ.?['ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ]


ಹಾ....ನೀವು 'ಕೆಂಡಸಂಪಿಗೆ' ಚೆಲುವೆ ಮಾನ್ವಿತಾ ಹರೀಶ್ ಅವರನ್ನು 'ಟಪ್ಪಾಂಗುಚ್ಚಿ' ಲುಕ್ ನಲ್ಲಿ ನೋಡಬೇಕಾದ್ರೆ, 'ಟಗರು' ಸಿನಿಮಾ ಬರೋವರೆಗೂ ಕಾಯಲೇಬೇಕು.


ಮೊದಲ ಸಿನಿಮಾದ ಮೂಲಕಾನೇ ಪ್ರೇಕ್ಷಕರ ಮನಗೆದ್ದ ನಟಿ ಮಾನ್ವಿತ ಹರೀಶ್ ಅವರ, ಎರಡನೇ ಸಿನಿಮಾ ಕೂಡ ಸ್ಟಾರ್ ನಾಯಕನ ಜೊತೆಗೆ ಅನ್ನೋದು ವಿಶೇಷ. ಜೊತೆಗೆ ಮೊದಲ ಸಿನಿಮಾದಲ್ಲಿ ಬ್ರೇಕ್ ಕೊಟ್ಟ ನಿರ್ದೇಶಕರೇ ಎರಡನೇ ಸಿನಿಮಾದಲ್ಲೂ ಆಕ್ಷನ್-ಕಟ್ ಹೇಳುತ್ತಿದ್ದಾರೆ.


ಇದೆಲ್ಲಾ ಇರ್ಲಿ, ಇದೀಗ ಮಾನ್ವಿತಾ ಹರೀಶ್ ಅವರು 'ಟಗರು' ಚಿತ್ರದಲ್ಲಿ 'ಟಪ್ಪಾಂಗುಚ್ಚಿ' ಗೆಟಪ್ ನಲ್ಲಿ ಹೇಗೆ ಕಾಣಿಸಬಹುದು, ಅನ್ನೋದನ್ನು ನೋಡೋ ಕುತೂಹಲ ಇದ್ರೆ, ಸ್ಲೈಡ್ಸ್ ಕ್ಲಿಕ್ ಮಾಡಿ....


ಚಿಂದಿ ಉಡಾಯಿಸಲಿರುವ ಮಾನ್ವಿತಾ

'ಕೆಂಡಸಂಪಿಗೆ' ಚಿತ್ರದಲ್ಲಿ ಮುದ್ದು-ಮುದ್ದಾಗಿ, ಗ್ಲಾಮರ್ ಬೊಂಬೆಯಂತಿದ್ದ ಮಾನ್ವಿತಾ ಹರೀಶ್ ಅವರು 'ಟಗರು' ಚಿತ್ರದಲ್ಲಿ ಚಿಂದಿ ಉಡಾಯಿಸಿದ್ದಾರೆ. ಅದನ್ನು ನಾವು ಹೇಳೋದಕ್ಕಿಂತ ನೀವೇ ನೋಡಿ ಈ ಚಿತ್ರದಲ್ಲಿ ಮಾನ್ವಿತಾ ಹೇಗೆ ಕಾಣಿಸುತ್ತಾರೆ ಅಂತ.['ರಾಟೆ' ರಾಜನ ರಗಡ್ ಲುಕ್ ಬೋ ಪಸಂದ್ ಆಗೈತಿ...]


'ಟಗರು'ಪುಟ್ಟಿಯಾದ ಮಾನ್ವಿತಾ

'ಕೆಂಡಸಂಪಿಗೆ' ಗೌರಿ 'ಟಗರು' ಚಿತ್ರದಲ್ಲಿ ಶಿವಣ್ಣನ 'ಟಗರು' ಪುಟ್ಟಿಯಾಗಿ ಮಿಂಚಿದ್ದಾರೆ. 'ಡಂಕಣಕ' ತಮಟೆ ಸೌಂಡ್ ಗೆ ಮೈಮರೆತು ಹೆಜ್ಜೆ ಹಾಕುತ್ತಿರುವ ಮುದ್ದು ಪೋರಿ ಮಾನ್ವಿತಾ ಹರೀಶ್.[ಪೊಗರು ತುಂಬಿದ 'ಟಗರು' ಶಿವಣ್ಣನ ಜೊತೆ ಸುಹಾಸಿನಿ.?]


ಲೇಡಿ 'ಟಗರು'

'ಲೇಡಿ ಟೈಗರ್' ಮಾಲಾಶ್ರೀ ಅವರನ್ನು ತೆರೆಯ ಮೇಲೆ ನೋಡಿದ್ದೀರಿ, ಇನ್ನೇನು ಸದ್ಯದಲ್ಲೇ 'ಲೇಡಿ ಟಗರು' ಮಾನ್ವಿತಾ ಹರೀಶ್ ಅವರನ್ನು ನೋಡಿ.[ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ]


'ಟಗರು' ಗೊಂಬೆ

ಯಾವ ಹಳ್ಳಿ ಹೈಕಳಿಗೂ ಕಡಿಮೆ ಇಲ್ಲದಂತೆ 'ಟಗರು' ಚಿತ್ರದಲ್ಲಿ ನಟಿ ಮಾನ್ವಿತಾ ಹರೀಶ್ ಅವರು ತಮಟೆ ಸೌಂಡ್ ಗೆ ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಮೊಟ್ಟ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡು, ಎರ್ರಾ-ಬಿರ್ರಿ ಡ್ಯಾನ್ಸ್ ಮಾಡೋ ಅವಕಾಶ ಸಿಕ್ಕಿದ್ದಕ್ಕೆ ಮಾನ್ವಿತಾ ಅವರು ಕೂಡ ಫುಲ್ ಖುಷ್ ಆಗಿದ್ದಾರೆ.


ಮಾನ್ವಿತಾ ಲುಕ್ ಗೆ ಅಭಿಮಾನಿಗಳು ಫಿದಾ

ಸದ್ಯಕ್ಕೆ ಬಿಡುಗಡೆ ಆಗಿರುವ ಮಾನ್ವಿತಾ ಅವರ 'ಟಗರು' ಚಿತ್ರದ ಫಸ್ಟ್ ಲುಕ್ ಚಿತ್ರಗಳನ್ನು ನೋಡುತ್ತಿದ್ದರೆ, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಪಕ್ಕಾ ಮಾಸ್ ಸ್ಟೈಲ್ ನಲ್ಲಿ ಮಾನ್ವಿತಾ ಅವರನ್ನು ನೋಡೋದೇ ಒಂಥರಾ ಚೆಂದ.


ವಿಶೇಷತೆಗಳುಳ್ಳ 'ಟಗರು'

ದುನಿಯಾ ಸೂರಿ ನಿರ್ದೇಶನ ಮಾಡುತ್ತಿರುವ 'ಟಗರು-ಮೈಯೆಲ್ಲಾ ಪೊಗರು' ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಮೊದಲು ಧನಂಜಯ್ ಅವರಿಗೆ ಹೊಸ ಲುಕ್ ಕೊಟ್ಟು ಸರ್ ಪ್ರೈಸ್ ಕೊಟ್ಟ ಸೂರಿ, ಇದೀಗ ಮಾನ್ವಿತಾ ಹರೀಶ್ ಅವರನ್ನು ಮಾಸ್ ಲುಕ್ ನಲ್ಲಿ ತೋರಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಬಾರಿ ಶಿವಣ್ಣ ಅವರು ಕೂಡ ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ಲಾಂಗ್ ಹಿಡಿದಿದ್ದಾರೆ.


English summary
'Kendasampige' fame Kannada Actress Manvitha Harish's new Tapanguchi look for Kannada Movie ''Tagaru- Maiyella Pogaru". Here is the First look pictures check out. Kannada Actor Shiva Rajkumar, Kannada Actor Dhananjay in the lead. The movie is directed by Duniya Soori.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada