For Quick Alerts
  ALLOW NOTIFICATIONS  
  For Daily Alerts

  Exclusive: ಮಾನ್ವಿತಾ ತಾಯಿ ಚಿಕಿತ್ಸೆಗೆ ಸೋನು ಸೂದ್ ನೆರವು: ರಿಯಲ್ ಹೀರೊ ಎಂದ ನಟಿ!

  |

  ಕನ್ನಡದ ನಟಿ ಮಾನ್ವಿತಾ ಕಾಮತ್ ಸದ್ಯ ತಮ್ಮ ಮುಂದಿನ ಸಿನಿಮಾದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಧೀರೇನ್ ರಾಮ್ ಕುಮಾರ್ ಜೊತೆಗೆ ಮಾನ್ವಿತಾ ಕಾಮತ್ ನಟನೆಯ 'ಶಿವ 143' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹಾಗಾಗಿ ಸದ್ಯ ಮಾನ್ವಿತಾ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.

  ಇದರ ಜೊತೆಗೆ ನಟಿ ಮಾನ್ವಿತಾ ಮಾಡಿರುವ ಟ್ವೀಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಾನ್ವಿತಾ ಕಾಮತ್ ಬಾಲಿವುಡ್ ನಟನ ಕುರಿತು ಟ್ವೀಟ್ ಮಾಡಿದ್ದಾರೆ. ಅದು ಮತ್ಯಾರು ಅಲ್ಲ ಬಹುತೇಕರು ರಿಯಲ್ ಹೀರೋ ಎಂದೇ ಕರೆಯುವ ಸೋನು ಸೂದ್ ಬಗ್ಗೆ ಮಾನ್ವಿತ ಟ್ವೀಟ್ ಮಾಡಿದ್ದಾರೆ.

  ಕೊಟ್ಟ ಮಾತು ಉಳಿಸಿಕೊಳ್ಳಲು ಸಿನಿಮಾದಿಂದ ದೂರ ಸರಿದಿದ್ದ 'ಟಗರು ಪುಟ್ಟಿ' ಮಾನ್ವಿತಾ: ಆ ಮಾತೇನು?ಕೊಟ್ಟ ಮಾತು ಉಳಿಸಿಕೊಳ್ಳಲು ಸಿನಿಮಾದಿಂದ ದೂರ ಸರಿದಿದ್ದ 'ಟಗರು ಪುಟ್ಟಿ' ಮಾನ್ವಿತಾ: ಆ ಮಾತೇನು?

  ಹಾಗಂತ ಮಾನ್ವಿತಾ ಯಾವುದೋ ಸಿನಿಮಾದ ಹೇಳಿಕೊಂಡಿಲ್ಲ. ಬದಲಿಗೆ ನಟ ಸೋನು ಸೂದ್ ಅವರಿಂದ ತಮಗೆ ಆಗಿರುವ ಸಹಾಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅವರಿಗೆ ಹೃದಯ ಪೂರ್ವಕವಾಗಿ ಧನ್ಯವಾದವನ್ನು ತಿಳಿಸಿದ್ದಾರೆ. ಅಷ್ಟಕ್ಕೂ ಸೋನು ಸೂದ್ ಮಾನ್ವಿತಾ ಅವರಿಗೆ ಮಾಡಿದ ಸಹಾಯ ಏನು ಎನ್ನುವುದನ್ನು ಮುಂದೆ ಓದಿ....

  ಮಾನ್ವಿತಾ ಕಾಮತ್ ಟ್ವೀಟ್!

  ಮಾನ್ವಿತಾ ಕಾಮತ್ ಟ್ವೀಟ್!

  ಆಗಸ್ಟ್ 24ರ ರಾತ್ರಿ ಮಾನ್ವಿತಾ ಕಾಮತ್ ನಟ ಸೋನು ಸುದ್ದಿಗೆ ಧನ್ಯವಾದವನ್ನು ತಿಳಿಸಿ ಟ್ವೀಟ್ ಮಾಡಿದ್ದಾರೆ. "ಈಗಷ್ಟೇ ಸೋನು ಸೂದ್ ಸರ್ ಜೊತೆಗೆ ಮಾತನಾಡಿದೆ. ಅವರು ನನ್ನ ತಾಯಿಗಾಗಿ ಮಾಡಿದ ಸಹಾಯಕ್ಕೆ ನಾನು ಮನಸಾರೆ ಧನ್ಯವಾದವನ್ನು ತಿಳಿಸುತ್ತೇನೆ. ನೀವು ನಿಜವಾಗಿಯೂ ಹೀರೊ ಸರ್. ಎಲ್ಲದಕ್ಕೂ ಧನ್ಯವಾದಗಳು" ಎಂದು ಮಾನ್ವಿತಾ ಕಾಮತ್ ತಮ್ಮ ಟ್ವೀಟ್‌ನಲ್ಲಿ ಬರೆದು ನಟ ಸೋನು ಸೂದ್ ಟ್ಯಾಗ್ ಮಾಡಿದ್ದಾರೆ.

  ಪ್ರೇಮಿಗಳ ದಿನಕ್ಕೆ ಧೀರೆನ್ ರಾಮ್‌ಕುಮಾರ್ 'ಶಿವ 143'!ಪ್ರೇಮಿಗಳ ದಿನಕ್ಕೆ ಧೀರೆನ್ ರಾಮ್‌ಕುಮಾರ್ 'ಶಿವ 143'!

  ಮಾನ್ವಿತಾ ತಾಯಿಗೆ ಅನಾರೋಗ್ಯ!

  ಮಾನ್ವಿತಾ ತಾಯಿಗೆ ಅನಾರೋಗ್ಯ!

  ನಟಿ ಮಾನ್ವಿತಾ ಕಾಮತ್ ಈ ರೀತಿ ಟ್ವೀಟ್ ಮಾಡಲು ಕಾರಣ ಸೋನು ಸೂದ್, ಮಾನ್ವಿತಾ ಅವರ ತಾಯಿಯ ಚಿಕಿತ್ಸೆಗಾಗಿ ಮಾಡಿರುವ ಸಹಾಯ. ಹೌದು, ನಟಿ ಮಾನ್ವಿತಾ ತಾಯಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ನುರಿತ ವೈದ್ಯರ ಸಲಹೆ ನೀಡುವಂತೆ ಮಾನ್ವಿತಾ ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಮಂಗಳೂರು ಮೂಲದ ಸೋನು ಸೋದ್ ಫೌಂಡೇಶನ್ ಕಾರ್ಯಕರ್ತರೊಬ್ಬರು ಮಾನ್ವಿತಾರನ್ನು ಸಂಪರ್ಕ ಮಾಡಿದ್ದಾರೆ. ಅವರ ತಾಯಿಗೆ ಕಿಡ್ನಿ ವೈಫಲ್ಯತೆ ಇರುವುದನ್ನು ತಿಳಿದ ಬಳಿಕ ಅವರ ಚಿಕಿತ್ಸೆಗೆ ಸೋನು ಸೂದ್ ಫೌಂಡೇಶನ್ ಮುಂದಾಗಿದೆ.

  ಮಾನ್ವಿತಾ ಕಾಮತ್ ತಾಯಿಗೆ ಕಿಡ್ನಿ ವೈಫಲ್ಯ!

  ಮಾನ್ವಿತಾ ಕಾಮತ್ ತಾಯಿಗೆ ಕಿಡ್ನಿ ವೈಫಲ್ಯ!

  ಸೋನು ಸೂದ್ ಫೌಂಡೇಷನ್ ಕಡೆಯಿಂದ ತಮಗೆ ಆದ ಸಹಾಯದ ಬಗ್ಗೆ ಮಾನ್ವಿತಾ ಫಿಲ್ಮೀ ಬೀಟ್ ಜೊತೆ ಮಾತನಾಡಿದ್ದಾರೆ. ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಮಾನ್ವಿತಾ ತಾಯಿಗೆ ಚಿಕಿತ್ಸೆಯನ್ನು ಕೊಡಿಸಲಾಯಿತು. ಸೋನು ಸೂದ್ ಫೌಂಡೇಶನ್ ಮಾನ್ವಿತಾ ಸಹಾಯಕ್ಕೆ ಬಂದಿರುವುದು ಬಹಳ ದೊಡ್ಡ ಅನುಕೂಲವಾಯಿತು ಎಂದು ಹೇಳಿಕೊಂಡಿದ್ದಾರೆ. ಮಾನ್ವಿತಾ ತಾಯಿಗೆ ಡಯಾಲಿಸಿಸ್ ಕೂಡ ಮಾಡಿಸುವ ಅಗತ್ಯತೆ ಇದೆ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅವರ ತಾಯಿ ಅನಾರೋಗ್ಯಕ್ಕೀಡಾಗಿದ್ದು, ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಬರುತ್ತಿದೆಯಂತೆ. ಹಾಗಾಗಿ ಇದೀಗ ಸೋನು ಸೂದ್ ಫೌಂಡೇಶನ್ ಮಾಡಿರುವ ಸಹಾಯ ಬಹಳ ದೊಡ್ಡದು ಎಂದು ಮಾನ್ವಿತಾ ಹೇಳಿಕೊಂಡಿದ್ದಾರೆ.

  ಮಾನ್ವಿತಾ ತಾಯಿಗೆ ಕಿಡ್ನಿ ಕಸಿ!

  ಮಾನ್ವಿತಾ ತಾಯಿಗೆ ಕಿಡ್ನಿ ಕಸಿ!

  ಇನ್ನು ಆಸ್ಪತ್ರೆಯ ಸಿಇಓ ಜೊತೆಗೆ ಖುದ್ದಾಗಿ ಸೋನು ಸೂದ್ ಅವರೇ ಮಾತನಾಡಿ ಚಿಕಿತ್ಸೆಯ ಕುರಿತು ಸಹಾಯ ಮಾಡುವುದಾಗಿ ಹೇಳಿದ್ದಾರಂತೆ. ಹಾಗಾಗಿ ಮುಂದೆ ಮಾನ್ವಿತಾ ತಾಯಿಗೆ ಕಿಡ್ನಿ ಕಸಿ ನಡೆಯಲಿದ್ದು ಅದಕ್ಕೂ ಕೂಡ ಅವರ ಫೌಂಡೇಶನ್ ಇಂದ ಸಹಾಯ ಮಾಡುವುದಾಗಿ ಭರವಸೆಯನ್ನು ಕೊಟ್ಟಿದ್ದಾರಂತೆ. ಮಾನ್ವಿತಾ ಕಾಮತ್, ಸೋನು ಸೂದ್ ಅವರನ್ನು ಸಹಾಯಕ್ಕಾಗಿ ಹುಡುಕಿಕೊಂಡು ಹೋಗಿಲ್ಲ. ಆದರೆ ಇವರನ್ನು ಹುಡುಕಿಕೊಂಡು ಬಂದು ಅವರೇ ಸಹಾಯ ಮಾಡಿದ್ದಾರೆ ಹಾಗಾಗಿ ಹಲವರ ಊಹೆಯಂತೆ ಅವರು ಪ್ರಚಾರಕ್ಕಾಗಿ ಏನನ್ನೋ ಮಾಡುತ್ತಿಲ್ಲ. ಬದಲಿಗೆ ನಿಜವಾಗಿಯೂ ಸಹಾಯ ಬೇಕಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ನಿಜವಾದ ಹೀರೊ ಎನ್ನುತ್ತಾರೆ ನಟಿ ಮಾನ್ವಿತಾ ಕಾಮತ್.

  Recommended Video

  Liger Public Review | ವಿಜಯ್ ದೇವರಕೊಂಡ ಸಿನಿಮಾ ನೋಡಿ ತಲೆಕೆಡಿಸಿಕೊಂಡ ವೀಕ್ಷಕ | Vijay Devarakonda
  English summary
  Actress Manvitha Kamath Thanked Sonu Sood for all that he did for her mother, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X