»   » ಶೂಟಿಂಗ್ ಸ್ಪಾಟ್ ನಲ್ಲಿ ಪ್ರಜ್ಞೆತಪ್ಪಿ ಬಿದ್ದ ನಟಿ ಮೀನಾ

ಶೂಟಿಂಗ್ ಸ್ಪಾಟ್ ನಲ್ಲಿ ಪ್ರಜ್ಞೆತಪ್ಪಿ ಬಿದ್ದ ನಟಿ ಮೀನಾ

Posted By:
Subscribe to Filmibeat Kannada

ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ ವಿದ್ಯಾ ಸಾಗರ್ ಅವರನ್ನು ವರಿಸಿದ ಬಳಿಕ ನಟಿ ಮೀನಾ ಚಿತ್ರರಂಗದಿಂದ ಏಳು ಹೆಜ್ಜೆ ದೂರ ಸರಿದಿದ್ದರು. ಸಾಕಷ್ಟು ಗ್ಯಾಪ್ ನ ಬಳಿಕ ಅವರು ಮಲಯಾಳಂ ಚಿತ್ರರಂಗದಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ.

ಮಲಯಾಳಂನ 'ದೃಶ್ಯಂ' ಚಿತ್ರೀಕರಣ ವೇಳೆ ಅವರು ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜೋಸೆಫ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಮೀನಾ ಅಭಿನಯಿಸುತ್ತಿದ್ದಾರೆ.


ಚಿತ್ರದಲ್ಲಿ ಮೀನಾ ಅವರದು ಬಹುಮುಖ್ಯವಾದ ಪಾತ್ರ. ಇದ್ದಕ್ಕಿಂದ್ದಂತೆ ಮೀನಾ ಪ್ರಜ್ಞೆತಪ್ಪಿ ಬಿದ್ದ ಕಾರಣ ಚಿತ್ರತಂಡ ಕಂಗಾಲಾಗಿದೆ. ಶೂಟಿಂಗ್ ಗೆ ಆಗಮಿಸಿದಾಗಲೇ ಅವರು ಸ್ವಲ್ಪ ನೀರಸವಾಗಿ ಕಾಣುತ್ತಿದ್ದರಂತೆ. ಸ್ವಲ್ಪ ಅನಾರೋಗ್ಯದಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.

ಅನಾರೋಗ್ಯವನ್ನೂ ಲೆಕ್ಕಿಸದೆ ಅವರು ಶೂಟಿಂಗ್ ನಲ್ಲಿ ಪಾಲ್ಗೊಂಡ ಕಾರಣ ಹೀಗಾಗಿದೆ ಎನ್ನುತ್ತದೆ ಚಿತ್ರತಂಡ. ಮೀನಾರನ್ನು ಪರೀಕ್ಷಿಸಿದ ವೈದ್ಯರು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಘಟನೆಗಳ ಹಿನ್ನೆಲೆಯಲ್ಲಿ 'ದೃಶ್ಯಂ' ಚಿತ್ರಕರಣ ಕ್ಯಾನ್ಸಲ್ ಮಾಡಲಾಗಿದೆ. ಮೀನಾ ಚೇತರಿಸಿಕೊಂಡ ಬಳಿಕ ಮತ್ತೆ ಚಿತ್ರೀಕರಣ ಆರಂಭ.

'ದೃಶ್ಯಂ' ಚಿತ್ರದಲ್ಲಿ ಮೋಹನ್ ಲಾಲ್ ಅವರಿಗೆ ಪತ್ನಿಯಾಗಿ ಮೀನಾ ಅಭಿನಯಿಸುತ್ತಿದ್ದಾರೆ. ಈಗ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದ ಕಾರಣ ಮೋಹನ್ ಲಾಲ್ ತಮ್ಮ ಮತ್ತೊಂದು ಚಿತ್ರ 'ಗೀತಾಂಜಲಿ'ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. (ಏಜೆನ್ಸೀಸ್)

English summary
Actor Mohanlal and Meena play the lead roles in Drishyam movie. Unfortunately, the actress fainted on the sets of the movie while the shoot was on and the movie has come to a halt. According to sources, both Mohanlal and Meena were shooting for the film. But suddenly Meena felt giddiness and fainted on the sets. She was immediately taken to a near by hospital and was examined. Doctors have advised her to take rest.
Please Wait while comments are loading...