ಗುಲಾಬಿ ಕೇರಿಯಲ್ಲಿ ಅರಳಿದ ಮೇಘನಾ ಗಾಂವಕರ್
'ನಮ್ ಏರಿಯಾಲಿ' ಒಂದಿನ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖಾತೆ ತೆರೆದ ಬೆಡಗಿ ಮೇಘನಾ ಗಾಂವಕರ್. ಕಲಬುರ್ಗಿಯ ಈ ಚೆಲುವೆ ಇದೀಗ ಮತ್ತೊಂದು ಚಿತ್ರದ ಮೂಲಕ ತೆರೆ ಬೆಳಗಲಿದ್ದಾರೆ. ನಮ್ ಏರಿಯಾಗೆ ಬಂದ ಮೇಲೆ ಇದೀಗ ಅವರು ಗುಲಾಬಿ ಕೇರಿಗೆ ಅಡಿಯಿಟ್ಟಿದ್ದಾರೆ.
ವೇಶ್ಯೆಯ ಮೇಲೆ ಬೆಳಕು ಚೆಲ್ಲುವ ಕಥೆಯನ್ನು ಒಳಗೊಂಡಿರುವ ಗುಲಾಬಿ ಸ್ಟ್ರೀಟ್ ಚಿತ್ರದಲ್ಲಿ ಮೇಘನಾ ಅವರದು ಪ್ರಮುಖ ಪಾತ್ರ. ರಾಮ್ ಗೋಪಾಲ್ ವರ್ಮಾ ಅವರ ಬಳಿ ಕೆಲಸ ಮಾಡಿರುವ ಅರುಣ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. [ಹರ್ಷಿಕಾ ಪೂಣಚ್ಚ ರಾತ್ರಿ ಸ್ಕಂದಗಿರಿ ಬೆಟ್ಟ ಹತ್ತಿದ್ಯಾಕೆ?]

ವೀರ್ ಸಮರ್ಥ್ ಅವರ ಸಂಗೀತ ಚಿತ್ರಕ್ಕಿದ್ದು ಚಿತ್ರದ ನಾಯಕಟನರನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಸದ್ಯಕ್ಕೆ 'ದಿ ಗುಲಾಬಿ ಸ್ಟ್ರೀಟ್' ಕಮರ್ಷಿಯಲ್ ಸಿನೆಮಾ ಚಿತ್ರೀಕರಣ ಬೆಂಗಳೂರು ಆಸುಪಾಸುಗಳಲ್ಲಿ ಭರದಿಂದ ಸಾಗುತ್ತಿದೆ. ಹೊಸ ವರುಷದಲ್ಲಿ ಹೊಸ ತನದೊಂದಿಗೆ ತೆರೆಯ ಮೇಲೆ ಮೂಡಿಬರಲಿರುವ ಈ ಚಿತ್ರ ದ್ವಿ ಭಾಷೆಗಳಲ್ಲಿ ಹೆಸರುಮಾಡುವುದಂತೂ ಗ್ಯಾರಂಟಿ ಎಂಬ ಮಾತು ಗಾಂಧೀನಗರದಲ್ಲಿ ಕೇಳಿಬರುತ್ತಿವೆ.

ಸಂತು ಸಿನಿಮಾಸ್ ಸಹಯೋಗದಲ್ಲಿ ಸ್ಪೇಸ್ ಮೀಡಿಯಾ ಎಂಟರ್ ಟೈನ್ ಮೆಂಟ್ ಪ್ರೈ.ಲಿ ಮತ್ತು ಎರಿಯರ್ ಡ್ರೀಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣಮಾಡುತ್ತಿದೆ. ಶೀಘ್ರದಲ್ಲೇ ಹರ್ಷಿಕಾ ಹಾಗೂ ಶ್ವೇತಾ ಅವರ ಇನ್ನಷ್ಟು ಕಲರ್ ಫುಲ್ ಫೋಟೋಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ತುದಿಗಾಲಲ್ಲಿ ನಿಂತಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











