ಅಮೆರಿಕಾದಲ್ಲಿ ರಾಯರ ದರ್ಶನ ಮಾಡಿದ ಮೇಘನಾ: ಧನ್ಯವಾದ ಹೇಳಿದ ಜಗ್ಗೇಶ್

ಕನ್ನಡ ನಟಿ ಮೇಘನಾ ಗಾಂವ್ಕರ್ ಪ್ರಸ್ತುತ ಅಮೆರಿಕಾದಲ್ಲಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಯುಎಸ್‌ಗೆ ತೆರಳಿರುವ ನಟಿ ಮೇಘನಾ ಮೇರಿಲ್ಯಾಂಡ್ ತಲುಪಿದ್ದರು. ವಿದೇಶದಲ್ಲಿರುವ ಮೇಘನಾ ಟ್ವಿಟ್ಟರ್‌ನಲ್ಲಿ ಫೋಟೋ ಸಹ ಹಂಚಿಕೊಂಡಿದ್ದರು.

ಇಂದು ವಾಷಿಂಗ್ಟನ್ ಡಿಸಿಯ ಫ್ರೆಡೆರಿಕ್ ನಗರದಲ್ಲಿರುವ ರಾಯರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮೇಘನಾ, ದೇವರ ಫೋಟೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ರಾಯರ ಅಪ್ಪಟ ಭಕ್ತ ಮತ್ತು ಅನುಯಾಯಿ ನವರಸ ನಾಯಕ ಜಗ್ಗೇಶ್ ಅವರನ್ನು ನೆನಪಿಸಿಕೊಂಡಿದ್ದಾರೆ.

ದೇವರ ಫೋಟೋ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಮೇಘನಾ ''ಸರ್ ಇದು ವಿಶೇಷವಾಗಿ ನಿಮಗಾಗಿ ಕ್ಲಿಕ್ಕಿಸಿದ ಫೋಟೋ'' ಎಂದು ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

Actress Meghana Gaonkar Visited a temple in Washington DC

ಹಾಗೆಯೇ, ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಸೇರಿದಂತೆ ಕುಟುಂಬದ ಯೋಗಕ್ಷೇಮ ಸಹ ವಿಚಾರಿಸಿದ್ದಾರೆ. ಮೇಘನಾ ಅವರ ಈ ಪೋಸ್ಟ್‌ಗೆ ನಟ ಜಗ್ಗೇಶ್ ಸಹ ಪ್ರತಿಕ್ರಿಯಿಸಿದ್ದು, ''ಧನ್ಯವಾದ...ಸುರಕ್ಷತೆಯಿಂದಿರಿ'' ಎಂದು ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ರಾಯರ ಪರಮ ಭಕ್ತ ಎನ್ನುವುದು ಎಲ್ಲರಿಗು ಗೊತ್ತಿರುವ ಸಂಗತಿ. ಹಾಗಾಗಿ, ವಾಷಿಂಗ್ಟನ್ ಡಿಸಿಯಲ್ಲಿ ರಾಯರ ಕಂಡ ಮೇಘನಾ, ಜಗ್ಗೇಶ್ ಅವರಿಗೆ ಫೋಟೋ ಟ್ಯಾಗ್ ಮಾಡಿದ್ದಾರೆ. ಇನ್ನು ಜಗ್ಗೇಶ್ ಜೊತೆ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದಲ್ಲಿ ಮೇಘನಾ ನಾಯಕಿಯಾಗಿ ನಟಿಸಿದ್ದರು.

More from Filmibeat

English summary
Kannada actress Meghana Gaonkar Visited a temple today in Frederick city near Washington DC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X