For Quick Alerts
  ALLOW NOTIFICATIONS  
  For Daily Alerts

  'ಚಿರುನ ಕಷ್ಟಪಟ್ಟು ಪಡೆದಿದ್ದೆ' ಬಿಕ್ಕಿ ಬಿಕ್ಕಿ ಅಳುತ್ತಿರುವ ಮೇಘನಾ

  |

  ಪತಿಯ ಪಾರ್ಥಿವ ಶರೀರದ ಮುಂದೆ ಕುಳಿತಿರುವ ಮೇಘನಾ ರಾಜ್ ಆಕ್ರಂದನ ಮುಗಿಲು ಮುಟ್ಟಿದೆ. 'ಚಿರುನ ಕಷ್ಟಪಟ್ಟು ಪಡೆದಿದ್ದೆ' ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಚಿರನಿದ್ರೆಯಲ್ಲಿರುವ ಪತಿಯನ್ನೆ ನೋಡುತ್ತ ಮೃತ ದೇಹದ ಮುಂದೆಯೆ ಕುಳಿತಿದ್ದರು.

  ನಿಜಕ್ಕೂ ಈ ಸಂದರ್ಭ ಯಾವ ಹೆಣ್ಣಿಗೂ ಬೇಡ | Meghana Raj

  ಚಿರು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮೇಘನಾಗೆ ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ರಾಗಿಣಿ ಸೇರಿದ್ದಂತೆ ಕುಟುಂಬಸ್ಥರು ಸಮಾಧಾನ ಪಡಿಸುತ್ತಿದ್ದಾರೆ. ಕರಳು ಹಿಂಡುವ ಈ ದೃಶ್ಯ ನಿಜಕ್ಕು ಎಂಥವರಿಗಾದರೂ ಕಣ್ಣೀರುತರಿಸದೆ ಇರಲ್ಲ.

  'ನಗುತಲಿರು..' ಎಂದು ಕೊನೆಯದಾಗಿ ಹೇಳಿದ್ದ ಚಿರು, ಅಳು ಉಳಿಸಿ ಹೋದರು'ನಗುತಲಿರು..' ಎಂದು ಕೊನೆಯದಾಗಿ ಹೇಳಿದ್ದ ಚಿರು, ಅಳು ಉಳಿಸಿ ಹೋದರು

  ಧ್ರುವ ಸರ್ಜಾ, ಅತ್ತಿಗೆಯನ್ನು ಸಮಾಧಾನ ಪಡಿಸಿ ನೀರುಕುಡಿಸಿ ಧೈರ್ಯ ತುಂಬುತ್ತಿದ್ದಾರೆ. ಸರ್ಜಾ ಕುಟುಂಬದ ನೋವು ಹೇಳತೀರದಾಗಿದೆ. ಅನೇಕ ವರ್ಷದಿಂದ ಪ್ರೀತಿಸಿ, ಮನೆಯವರನ್ನೆಲ್ಲ ಒಪ್ಪಿಸಿ ಕಳೆದ ಎರಡು ವರ್ಷದ ಹಿಂದೆ ಸಪ್ತಪದಿತುಳಿದಿದ್ದರು. ಚಿರುನ ತುಂಬಾ ಪ್ರೀತಿಸುತ್ತಿದ್ದ ಮೇಘನಾಗೆ ಪತಿ ಇನ್ನಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  ಮೇಘನಾ ರಾಜ್ ಈಗ ಗರ್ಭಿಣಿ. ಮಗುಮುಖ ನೋಡುವ ಮೊದಲೆ ಚಿರು ಚಿರನಿದ್ರೆಗೆ ಜಾರಿದ್ದಾರೆ. ಇಡೀ ಕುಟುಂಬ ಮೇಘನಾ ರಾಜ್ ಗೆ ಸಮಾಧಾನ ಮಾಡುತ್ತಿದೆ. ಆದರೆ ಪದೆ ಪದೆ ಪತಿಯನ್ನು ನೋಡಿ ಕುಸಿದು ಬೀಳುತ್ತಿದ್ದಾರೆ.

  ಈಗಾಗಲೆ ಚಿರು ಅಂತಿಮ ಯಾತ್ರೆ ಪ್ರಾರಂಭವಾಗಿದೆ. ಚಿರು ಪಾರ್ಥಿವ ಶರೀರವನ್ನು ಬೃಂದಾವನ ಫಾರ್ಮ್ ಹೌಸ್ ಗೆ ಕರೆತರಲಾಗುತ್ತೆ. 4 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಪರಿಣಾಮ ಫಾರ್ಮ್ ಹೌಸ್ ಗೆ ಕೆಲವೇ ಕೆಲವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಕುಟುಂಬದವರು ಮತ್ತು ಚಿತ್ರರಂಗದ ಗಣ್ಯರಿಗೆ ಅವಕಾಶ ಮಾಡಿ ಕೊಡಲಾಗಿದೆ. ಫಾರ್ಮ್ ಹೌಸ್ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಲಸಾಗಿದ್ದು, ಎರಡು ಪ್ರವೇಶ ದ್ವಾರದಲ್ಲಿಯೂ ಬ್ಯಾರಿಕೇಡ್ ಹಾಕಲಾಗಿದೆ.

  English summary
  Actress Meghana Raj crying in front of chiranjeevi sarja body

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X