»   » 'ಅಲ್ಲಮಾ' ಮೇಘನಾರಾಜ್ ನಿಮ್ಮ ಕಥೆ ಏನು?

'ಅಲ್ಲಮಾ' ಮೇಘನಾರಾಜ್ ನಿಮ್ಮ ಕಥೆ ಏನು?

Posted By: ಜೀವನರಸಿಕ
Subscribe to Filmibeat Kannada

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಆಗ್ತಿರೋ ತಲ್ಲಣಗಳನ್ನ ನೋಡ್ತಿದ್ರೆ ತಲೆಕೆಟ್ಟು ಹೋಗ್ತಿದೆ. ಪ್ರತಿಯೊಬ್ಬರನ್ನೂ ಅನುಮಾನದಿಂದ ನೋಡುವಂತಾಗಿದೆ. ಮೇಘನಾರಾಜ್ 'ರಾಜಾಹುಲಿ'ಯ ಗೆಲುವಿನ ನಂತರ 'ಬಹುಪರಾಕ್' ಸಿನಿಮಾದಲ್ಲಿ ಡಬಲ್ ಆಕ್ಟಿಂಗ್ ನಲ್ಲಿ ಸ್ನೇಹ ಪ್ರೀತಿಯಾಗಿ ಪ್ರೇಕ್ಷಕರಿಗೆ ಇಷ್ಟವಾದ್ರು.

ಈಗ ಮೇಘನಾರಾಜ್ 'ಅಲ್ಲಮಾ' ಅನ್ನೋ 12ನೇ ಶತಮಾನದ ಡಾನ್ಸರ್ ಒಬ್ಬಳ ಪಾತ್ರಕ್ಕೆ ಬಣ್ಣ ಹಚ್ತಿದ್ದಾರೆ. ಇಲ್ಲಿಯವರೆಗೂ ಮಾಡಿರದ ಪಾತ್ರಗಳಿಗಿಂತ ಭಿನ್ನವಾಗಿರೋ ಅಲ್ಲಮ ಪಾತ್ರವನ್ನ ಆಯ್ದುಕೊಂಡಿರೋ ಮೇಘನಾರಾಜ್ ಫಸ್ಟ್ ಲುಕ್ ಕೂಡ ಮೋಡಿ ಮಾಡ್ತಿದೆ.


ಹೀರೋಯಿನ್ ಗಳು ಕೇವಲ ಕಮರ್ಷಿಯಲ್ ಪಾತ್ರಗಳಲ್ಲಿ ಗ್ಲಾಮರಸ್ಸಾಗಿ ಕಾಣಿಸಿಕೊಳ್ಳದೆ ಡಾನ್ಸರ್, ವೇಶ್ಯೆಯಂತಹಾ ಪಾತ್ರಗಳಲ್ಲಿ ಕಾಣಿಸಿಕೊಳ್ತಿರೋದು ವಿಶೇಷ. ನಟಿಯರನ್ನ ಕೇವಲ ಕಾಲೇಜ್ ಗರ್ಲ್ ಆಗಿ ಇಲ್ಲದಿದ್ರೆ ಮೋಹಕ ಮಾದಕವಾಗಿ ನೋಡೋದಕ್ಕಿಂತ ಬೇರೆ ಬೇರೆ ಪಾತ್ರಗಳಲ್ಲಿ ನೋಡೋ ಅವಕಾಶ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಸಿಗಲಿದೆ.

ಅಂದಹಾಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ. ಇದೇ ಮೊದಲ ಬಾರಿಗೆ ಮೇಘನಾ ಅವರ ಜೊತೆ ಡೈರೆಕ್ಟರ್ಸ್ ಸ್ಪೆಷಲ್ ಖ್ಯಾತಿಯ ಧನಂಜಯ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಅಲ್ಲಮಾ ಚಿತ್ರ 2015ರ ಏಪ್ರಿಲ್ ಹೊತ್ತಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯಕ್ಕೆ ಧನಂಜಯ್ ಅವರು ರಾಟೆ, ಬಾಕ್ಸರ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅಲ್ಲಮಾ ಚಿತ್ರೀಕರಣ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದೆ.

English summary
Meghana Raj, who was last seen onscreen in Bahuparaak, opposite Srinagara Kitty, has signed up for a new Kannada film. The actress will soon start work on director Nagabharana's next, Allama, in which she will be paired with young actor Dhananjay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada