»   » ನಟ ಚೇತನ್ ವಿರುದ್ದ ನಟಿ ತಾರಾ ಗರಂ ಆಗಿರುವುದೇಕೆ?

ನಟ ಚೇತನ್ ವಿರುದ್ದ ನಟಿ ತಾರಾ ಗರಂ ಆಗಿರುವುದೇಕೆ?

Posted By:
Subscribe to Filmibeat Kannada

'ಬಿರುಗಾಳಿ' ಚಿತ್ರದಲ್ಲಿ ಚೇತನ್ ಗೆ ತಾಯಿಯಾಗಿ ಅಭಿನಯಿಸಿದ್ದ ನಟಿ ತಾರಾ, ನಿಜ ಜೀವನದಲ್ಲೂ ಚೇತನ್ ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪೊಲೀಸರ ಕೈಲಿ ಒದೆ ತಿಂದಿದ್ದ 'ಆ ದಿನಗಳು' ಚೇತನ್ ಗೆ ನ್ಯಾಯ ಸಿಗಬೇಕು ಅಂತ ಹೋರಾಟಕ್ಕೆ ಇಳಿದಿದ್ದ ನಟಿ ಮತ್ತು ಎಂ.ಎಲ್.ಸಿ ತಾರಾ, ಇದೀಗ ಚೇತನ್ ಮೇಲೆ ಕೆಂಡಕಾರುತ್ತಿದ್ದಾರೆ.

''ನನಗೆ ಅನ್ಯಾಯವಾಗಿದೆ. ಪೊಲೀಸರು ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ'' ಅಂತ ಕಮಿಷನರ್ ಆಫೀಸ್ ಮೆಟ್ಟಿಲೇರಿದ್ದ ಚೇತನ್ ಗೆ ಹೆಜ್ಜೆ ಹೆಜ್ಜೆಯಲ್ಲು ಸಾಥ್ ಕೊಟ್ಟವರು ತಾರಾ ಮೇಡಂ. ಸಾಲದ್ದಕ್ಕೆ, ಚೇತನ್ ಗೆ ನ್ಯಾಯ ಸಿಗಲಿ ಅಂತ ಸುದ್ದಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.


ಚೇತನ್ ಹೇಳಿದ್ದನೆಲ್ಲಾ ಕೇಳಿ, ಸಹಾಯಕ್ಕೆ ಮುಂದಾಗಿ, ಇಷ್ಟೆಲ್ಲಾ ಮಾಡಿದ ತಾರಾ ಮೇಡಂ ಈಗ ಪೇಚಿಗೆ ಸಿಲುಕಿದ್ದಾರೆ. ವಿವಾದ ದೊಡ್ಡ ಮಟ್ಟಕ್ಕೆ ಬೆಳೆದ ಕಾರಣ, ವಾಸ್ತವ ಕೊಂಚ ತಡವಾಗಿ ತಾರಾ ಮೇಡಂಗೆ ಅರಿವಾಗಿದೆ. ಹಾಗಾದ್ರೆ, 'ಆ ದಿನ' ಚೇತನ್ ಮಾಡಿದ್ದೇನು...? ಮುಂದೆ ಓದಿ.....


ಬಯಲಾಗಿದೆ ವಾಸ್ತವ ಸಂಗತಿ..!

ಚೇತನ್ ಜೊತೆ ನಟಿಸಿರುವ ತಾರಾಗೆ ಚೇತನ್ ಒಳ್ಳೆಯ ವ್ಯಕ್ತಿ ಅನ್ನುವುದು ಗೊತ್ತು. ಇದೇ ಕಾರಣಕ್ಕೆ ಚೇತನ್ ಮೇಲೆ ಹಲ್ಲೆ ನಡೆದಾಗ, ಸಹಾಯ ಹಸ್ತ ಚಾಚಿ, ಚೇತನ್ ಗೆ ನ್ಯಾಯ ಕೊಡಿಸುವುದಕ್ಕೆ ತಾರಾ ಪೊಲೀಸ್ ಕಮಿಷನರ್ ಮೊರೆ ಹೋಗಿದ್ದರು. ''ನಾನ್ನದೇನು ತಪ್ಪಿಲ್ಲ. ಪೊಲೀಸರು ವಿನಾಕಾರಣ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ'' ಅಂತ ಚೇತನ್ ಹೇಳಿಕೆ ಕೂಡ ನೀಡಿದ್ದರು. ಆದ್ರೆ, ಅಂದು ನಡೆದ ಘಟನೆಯಲ್ಲಿ ಚೇತನ್ ಮತ್ತವರ ಸ್ನೇಹಿತರ ತಪ್ಪು ಕೂಡ ಇದೆ ಅಂತ ನಟಿ ತಾರಾಗೆ ಈಗ ಗೊತ್ತಾಗಿದೆ.


ಹಾಗಾದ್ರೆ, ಅಂದು ಆಗಿದ್ದೇನು..?

''ಕ್ಯಾಬ್ ಸಿಗುತ್ತಿಲ್ಲ ಅಂತ ಸ್ನೇಹಿತರು ಕರೆ ಮಾಡಿದಕ್ಕೆ ಎಂ.ಜಿ ರೋಡ್ ಕಡೆ ಹೋದೆ'' ಅಂತ ಚೇತನ್ ಈ ಹಿಂದೆ ಹೇಳಿಕೆ ನೀಡಿದ್ದರು. ಆದ್ರೆ, ಚೇತನ್ ಫ್ರೆಂಡ್ಸ್ ಮಧ್ಯರಾತ್ರಿ 1.30 ರ ಸುಮಾರಿಗೆ ಗುಂಡಿನ ಗಮ್ಮತ್ತಿನಲ್ಲಿ ತೇಲುತ್ತಿದ್ದರು. ಜೊತೆಗೆ ಹುಡುಗಿಯರು ಇದ್ದರು. ಅನಾಹುತ ಸಂಭವಿಸಬಾರದು ಅಂತ ಪೊಲೀಸರು ಎಚ್ಚರಿಸಿದ್ದಕ್ಕೆ, ಮಾತಿಗೆ ಮಾತಿಗೆ ಬೆಳೆದು ಜಗಳಕ್ಕೆ ತಿರುಗಿದೆ. ['ಆ ದಿನ' ಕಬ್ಬನ್ ಪಾರ್ಕ್ ನಲ್ಲಿ ನಟ ಚೇತನ್ ಗೆ ಆಗಿದ್ದೇನು?]


ಚೇತನ್ ದು ತಪ್ಪಿದೆ!

ಈ ಪ್ರಕರಣದಲ್ಲಿ ಪೊಲೀಸರದ್ದು ತಪ್ಪು ಅಂತ ಹೇಳುತ್ತಿರುವ ಚೇತನ್ ಮತ್ತು ಅವರ ಗ್ಯಾಂಗ್ ನದ್ದು ಅಷ್ಟೇ ತಪ್ಪು ಇದೆ ಅನ್ನುವ ಸತ್ಯ ಸಂಗತಿ ಬಯಲಾಗಿದೆ. ಚರ್ಚ್ ಸ್ಟ್ಟೀಟ್ ನಲ್ಲಿ ಬಾಂಬ್ ಬ್ಲಾಸ್ಟ್ ಆದ ಘಟನೆ ಇನ್ನು ಕಣ್ಣುಮುಂದಿದೆ. ಮಧ್ಯರಾತ್ರಿಯಾದರೂ ಮೋಜು-ಮಸ್ತಿಯಲ್ಲಿ ಮುಳುಗಿದ್ದರೆ, ಪೊಲೀಸರು ಸುಮ್ಮನೆ ಕೂರುವುದಕ್ಕಾಗುತ್ತಾ ಅನ್ನುವುದು ಈಗ ಎದ್ದಿರುವ ಪ್ರಶ್ನೆ.


ಸಾ.ರಾ.ಗೋವಿಂದು, ವಾಟಾಳ್ ಗರಂ

ಚೇತನ್ ಜೊತೆಗಿದ್ದ ಹೆಣ್ಮಕ್ಕಳು ಮದ್ಯಪಾನ ಮಾಡಿದ್ದರು. ತುಂಡುಡುಗೆ ಧರಿಸಿದ್ದರು. ಇದು ನಮ್ಮ ಸಂಸ್ಕೃತಿಯಲ್ಲ. ಪೊಲೀಸರಿಗೆ ನಾವು ಮರ್ಯಾದೆ ಕೊಡಬೇಕು. ಅವರನ್ನ ಗೂಂಡಾಗಳು ಅನ್ನುವುದು ಸರಿಯಲ್ಲ ಅಂತ ಸಾ.ರಾ.ಗೋವಿಂದು, ವಾಟಾಳ್ ನಾಗಾರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತನಿಖೆಯಿಂದ ಚೇತನ್ ಎಸ್ಕೇಪ್..?

ಹಲ್ಲೆ ನಡೆಸಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ನಗರದ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿಕೊಂಡಿದ್ದ ಚೇತನ್, ನಿನ್ನೆ (ಫೆ.5) ತನಿಖೆಗೆ ಆಗಮಿಸಬೇಕಾಗಿತ್ತು. ಆದ್ರೂ, ಹುಬ್ಬಳ್ಳಿಗೆ ತೆರಳಿದ್ದಾರೆ. [ಎತ್ತ ಕಳೆದುಹೋದರು 'ಆ ದಿನಗಳು' ಚೇತನ್?]


ನಟಿ ತಾರಾ ಗರಂ..!

ವಾಸ್ತವವನ್ನ ಅರಿಯದೇ ಸಹಾಯ ಮಾಡಲು ಮುಂದಾಗಿದ್ದಕ್ಕೆ ನಟಿ ತಾರಾ ಬೇಸರಗೊಂಡಿದ್ದಾರೆ. ಇದ್ದಲ್ಲದೇ ಚೇತನ್ ವರ್ತನೆಯಿಂದ ಕೂಡ ಅವರು ಘಾಸಿಗೊಂಡಿದ್ದಾರೆ. ನ್ಯಾಯಕ್ಕಾಗಿ ಸದಾ ಹೋರಾಡುವ ತಾರಾ, ಈ ಪ್ರಕರಣದಲ್ಲಿ ಸದ್ಯ ತಟಸ್ತವಾಗಿದ್ದು ''ಯಾರದ್ದೇ ತಪ್ಪಿದ್ದರೂ ಶಿಕ್ಷೆಯಾಗಲಿ'' ಅಂತ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ.


English summary
Actress and MLC Tara, who supported Actor Chethan in filing complaint against Sub-Inspector of Cubbon Park for assaulting issue has hit back against Chethan. Tara has realised that Chethan is also equally responsible for Police's action.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada