»   » ನಟಿ ಮೋನಿಕಾ ಇಸ್ಲಾಂ ಧರ್ಮಕ್ಕೆ ಮತಾಂತರ

ನಟಿ ಮೋನಿಕಾ ಇಸ್ಲಾಂ ಧರ್ಮಕ್ಕೆ ಮತಾಂತರ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕನ್ನಡ ಸೇರಿದಂತೆ ದಕ್ಷಿಣ ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಮೋನಿಕಾ ಅವರು ಶುಕ್ರವಾರ ಅಧಿಕೃತವಾಗಿ ಬುರ್ಖಾ ಧಾರಣೆ ಮಾಡಿಕೊಂಡಿದ್ದಾರೆ. ಮೇ. 30ರಂದು ಮೋನಿಕಾ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.

ಇಸ್ಲಾಂ ಧರ್ಮ ಸೇರಿದ ಮೇಲೆ ಸಾಂಪ್ರದಾಯಿಕ ಉಡುಗೆಯಲ್ಲಿ ಮೋನಿಕಾ ಕಾಣಿಸಿಕೊಂಡ ಚಿತ್ರ ಈಗಷ್ಟೇ ಲಭ್ಯವಾಗಿದೆ. ರೇಖಾ ಮರುಥಿರಾಜ್ ಅಲಿಯಾಸ್ ಮೋನಿಕಾ ಹಿಂದೂ ಧರ್ಮ ಬಿಟ್ಟು ಇಸ್ಲಾಂ ಧರ್ಮ ಸೇರಿದ್ದೇಕೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಮಲೆಯಾಳಂ ಚಿತ್ರಗಳಲ್ಲಿ ನಟಿಸಲು ಶುರು ಮಾಡಿದ ಬೆನ್ನಲ್ಲೇ 2012ರ ಸುಮಾರಿನಲ್ಲೆ ಆಕೆ ತನ್ನ ಹೆಸರನ್ನು ಮತ್ತೊಮ್ಮೆ ಬದಲಿಸಿಕೊಂಡು ಪರ್ವಾನಾ ಎಂದು ಕರೆಸಿಕೊಳ್ಳುತ್ತಿದ್ದಳು.

ತಮಿಳಿನಲ್ಲಿ ಬಾಲ ಕಲಾವಿದೆಯಾಗಿ ಸಿನಿರಂಗ ಪ್ರವೇಶಿಸಿದ ಕೇರಳದ ಕೊಟ್ಟಾಯಮ್ ಮೂಲದ ಮೋನಿಕಾ 13 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಎನ್ ಆಸೈ ಮಚ್ಚನ್ ಚಿತ್ರದ ಅಭಿನಯಕ್ಕಾಗಿ ತಮಿಳುನಾಡು ಸರ್ಕಾರದ ಶ್ರೇಷ್ಠ ಬಾಲನಟಿ ಪ್ರಶಸ್ತಿ ಗಳಿಸಿದ್ದರು.

Actress Monica Converted To Islam

ಅಳಗಿ, ಇಮೈ ಅರಸನ್ 32 ಮ್ ಪುಲಿಕೇಶಿ, ಭಗವತಿ ಸೇರಿದಂತೆ 50 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ದೇವರು ಕೊಟ್ಟ ತಂಗಿ, ಕಳ್ಳ ಮಳ್ಳ ಸುಳ್ಳ, ಬೆಂಕಿ ಬಿರುಗಾಳಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೆ ಎರಡು ಮೂರು(ಮೋನಿಕಾ, ಮೌನಿಕಾ, ರೇಖಾ ಮರುಥಿರಾಜ್, ಪರ್ವಾನಾ) ಹೆಸರಿನಿಂದ ಕರೆಯಲ್ಪಡುತ್ತಿದ್ದ ಮೋನಿಕಾ ತಮ್ಮ ಹೊಸ ಹೆಸರನ್ನು ಪ್ರಕಟಿಸಿದ್ದಾರೆ. ಮುಸ್ಲಿಂ ಆದ ಮೇಲೆ ಎಂಜಿ ರೆಹಿಮಾ ಎಂದು ನಾಮಕರಣ ಮಾಡಿಕೊಂಡಿದ್ದಾರೆ.

ನರನ್, ಕನ್ನಿಗಪುರಂ, ಸಂಡಿಪಿಲ್, ಅಮರನ್ ಮುಂತಾದ ಚಿತ್ರಗಳಲ್ಲಿ ಮೋನಿಕಾ ನಟಿಸುತ್ತಿದ್ದು, ಎಲ್ಲವೂ ಶೂಟಿಂಗ್ ಹಂತದಲ್ಲಿವೆ. ಈ ಮುಂಚೆ ಕೆಲವು ಚಿತ್ರಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮೋನಿಕಾ ಇನ್ಮುಂದೆ ಅಂಥ ಪಾತ್ರಗಳಿಗೆ ಕಡಿವಾಣ ಹಾಕುತ್ತಾರೋ ಅಥವಾ ವೃತ್ತಿ ಬದುಕಿಗೆ ಗುಡ್ ಬೈ ಹೇಳುತ್ತಾರೋ ಕಾದು ನೋಡಬೇಕಿದೆ.

English summary
South actress Monica has been converted to Islam religion, today, May 30, 2014. The actress has revealed few images of her in which she is seen wearing the Islam's traditional costume burka.
Please Wait while comments are loading...