twitter
    For Quick Alerts
    ALLOW NOTIFICATIONS  
    For Daily Alerts

    ಸ್ವಂತ ಹಣದಲ್ಲಿ ಆಕ್ಸಿಜನ್ ಪೂರೈಕೆಗೆ ಮುಂದಾದ ಸುಮಲತಾ ಅಂಬರೀಶ್

    |

    ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇತ್ತೀಚೆಗೆ ತುಸು ಸುದ್ದಿಯಲ್ಲಿದ್ದರು. ಸುಮಲತಾ ಅಂಬರೀಶ್ ಅವರು ತಮ್ಮ ಕ್ಷೇತ್ರ ಮಂಡ್ಯಕ್ಕೆ ಬರದೆ ಬಹುಕಾಲವಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಸಾಮಾಜಿಕ ಜಾಲತಾಣದಲ್ಲಿ 'ಮಂಡ್ಯ ಸಂಸದೆಯನ್ನು ಹುಡುಕಿಕೊಡಿ' ಪೋಸ್ಟರ್‌ಗಳು ಹರಿದಾಡಿದ್ದವು.

    ಟೀಕೆಗಳಿಗೆ ಜವಾಬ್ದಾರಿಯುತವಾಗಿ ಉತ್ತರಿಸಿರುವ ಸುಮಲತಾ, ತಾವು ಸಕ್ರಿಯವಾಗಿದ್ದು, ಕೊರೊನಾ ಸಂಕಷ್ಟದಲ್ಲಿ ಕ್ಷೇತ್ರದ ಜೊತೆಗೆ ನಿಲ್ಲುವುದಕ್ಕೆ ಬದ್ಧ ಎಂದು ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸುಮಲತಾ, 'ಜಿಲ್ಲಾಧಿಕಾರಿಗಳು, ಡಿಎಚ್‌ಓ ಅವರುಗಳು ಜಿಲ್ಲೆಯಲ್ಲಿ ಪ್ರತಿನಿತ್ಯ 3000 ಲೀಟರ್ ಆಕ್ಸಿಜನ್ ಕೊರತೆ ಇರುವುದಾಗಿ ಗಮನಕ್ಕೆ ತಂದರು. ಪ್ರಸ್ತುತ ಎಂಪಿ ಫಂಡ್ ಇಲ್ಲದೇ ಇರುವ ಕಾರಣ ಹಾಗೂ ಇತರೆ ಮೂಲಗಳ ಅನುದಾನಗಳು ಬರುವುದು ತಡವಾಗುವ ಕಾರಣ ನಾನೇ ಸ್ವಂತ ಹಣದಿಂದ ಪ್ರತಿದಿನ 2000 ಲೀಟರ್ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಿದ್ದೇನೆ' ಎಂದಿದ್ದಾರೆ ಸುಮಲತಾ.

     Actress, MP Sumalatha Ambareesh Said She Will Provide 2000 ltr Oxygen Spending Her Own Money

    'ಆಕ್ಸಿಜನ್ ತುಂಬಿಸಲು ರಾಮನಗರ, ಮೈಸೂರು, ಹಾಸನ ಜಿಲ್ಲೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರೆಯಲು ಬಿಡಲಾಗದು. ಮಂಡ್ಯಕ್ಕೆ ಸ್ವಂತ ಆಕ್ಸಿಜನ್ ಉತ್ಪಾದನಾ ಘಟಕ ಬೇಕು. ಅತ್ಯಂತ ಶೀಘ್ರದಲ್ಲಿ ಘಟಕ ಸ್ಥಾಪನೆಗೆ ಕಾರ್ಯಕೈಗೊಳ್ಳಿರೆಂದು ಸೂಚಿಸಿದ್ದೇನೆ' ಎಂದೂ ಸಹ ಸುಮಲತಾ ಹೇಳಿದ್ದಾರೆ.

    Recommended Video

    ಸೋಶಿಯಲ್ ಮೀಡಿಯಾದಲ್ಲಿ ಕಿರುತೆರೆ ನಟಿ ಅನುಪಮಾಗೆ ಬೇಸರವಾಗಿದ್ದು ಯಾಕೆ? | Filmibeat Kannada

    ಆಕ್ಸಿಜನ್ ಘಟನ ಸ್ಥಾಪಿಸಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವ ಭರವಸೆ ನೀಡಿದ್ದೇನೆ, ಘಟಕ ಸ್ಥಾಪನೆಗೆ ಬೇಕಾದ ಅನುಮತಿ ನೀಡುವಂತೆಯೂ ಸೂಚಿಸಿದ್ದೇನೆ. ಕೋವಿಡ್ ಮೂರನೇ ಅಲೆ ಬರುವ ವೇಳೆಗೆ ಜಿಲ್ಲೆಯಲ್ಲಿ 13,000 ಲೀಟರ್ ಸಾಮರ್ಥ್ಯದ ಘಟಕ ಕಾರ್ಯನಿರ್ವಹಿಸುತ್ತಿರುತ್ತದೆ ಎಂದಿದ್ದಾರೆ ಸುಮಲತಾ.

    English summary
    Actress, MP Sumalatha Ambareesh said she will provide 2000 ltr Oxygen everyday to help Mandya people spending her own money.
    Thursday, May 6, 2021, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X