For Quick Alerts
  ALLOW NOTIFICATIONS  
  For Daily Alerts

  ಚೋರ ಚಿತ್ತ ಚೋರ ನಾಯಕಿ ನಮ್ರತಾಗೆ ಹೆಣ್ಣುಮಗು

  By Rajendra
  |

  ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಚೋರ ಚಿತ್ತ ಚೋರ ಚಿತ್ರದಲ್ಲಿ ಹೆಜ್ಜೆ ಹಾಕಿದ್ದ ಬಾಲಿವುಡ್ ತಾರೆ ನಮ್ರತಾ ಶಿರೋಡ್ಕರ್ ಮತ್ತೊಮ್ಮೆ ತಾಯಿಯಾಗಿದ್ದಾರೆ. ಶ್ರಾವಣ ಶುಕ್ಲಪಕ್ಷದ ಶುಕ್ರವಾರ (ಜು.20) ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

  ಈಕೆ ತೆಲುಗು ಚಿತ್ರರಂಗದ ನಟ ಮಹೇಶ್ ಬಾಬು ಪತ್ನಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂದು ಬೆಳಗ್ಗೆ 8.15ಕ್ಕೆ ನಮ್ರತಾ ಅವರು ಹೈದರಾಬಾದಿನ ಸ್ವಪ್ನ ನರ್ಸಿಂಗ್ ಹೋಂನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಮಹೇಶ್ ಬಾಬು ಕುಟುಂಬಿಕರು ತಿಳಿಸಿದ್ದಾರೆ.

  ಪ್ರಸವದ ಸಮಯದಲ್ಲಿ ಮಹೇಶ್ ಬಾಬು ತನ್ನ ಪತ್ನಿ ನಮ್ರತಾ ಪಕ್ಕದಲ್ಲೇ ಇದ್ದು ಮನೋಧೈರ್ಯ ತುಂಬಿದ್ದಾಗಿ ಸುದ್ದಿ. ಈಗಾಗಲೆ ಮಹೇಶ್ ಬಾಬು ದಂಪತಿಗಳಿಗೆ ಗೌತಮ್ ಎಂಬ ಮಗ ಇದ್ದಾನೆ.

  ಕೆಲ ದಿನಗಳ ಹಿಂದೆಯೇ ನಮ್ರತಾಗೆ ಹೆಣ್ಣುಮಗು ಎಂಬ ಸುದ್ದಿ ಸ್ಫೋಟಿಸಿತ್ತು. ಈ ವಿಷಯವನ್ನು ಸ್ವತಃ ನಮ್ರತಾ ಅವರು ತಳ್ಳಿಹಾಕಿದ್ದರು. ಆಗಸ್ಟ್ ನಲ್ಲಿ ಡೆಲಿವರಿ ಆಗಬಹುದು ಎಂದು ತಿಳಿಸಿದ್ದರು. ಆದರೆ ಅವರು ಹೇಳಿದ ಸಮಯಕ್ಕಿಂತಲೂ ಮುಂಚಿತವಾಗಿಯೇ ಹೆಣ್ಣುಮಗು ಹಡೆದ್ದಾರೆ.

  ಮಹೇಶ್ ಬಾಬು ಮತ್ತೊಮ್ಮೆ ಅಪ್ಪನಾದ ಕಾರಣ ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ತಂದೆಯಾದ ಕಾರಣ ಮಹೇಶ್ ಬಾಬು ಒಂದು ವಾರ ಕಾಲ ಚಿತ್ರೀಕರಣಕ್ಕೆ Paternity leave ಹಾಕಿದ್ದಾರೆ.

  ಬಾಲಿವುಡ್ ತಾರೆ ನಮ್ರತಾ ಶಿರೋಡ್ಕರ್ ಅವರನ್ನು ಮಹೇಶ್ 2005 ಫೆಬ್ರವರಿಯಲ್ಲಿ ವರಿಸಿದ್ದರು. 2000ನೇ ವರ್ಷದಲ್ಲಿ ತೆರೆಕಂಡ ತೆಲುಗು ಚಿತ್ರ 'ವಂಶಿ' ಯಲ್ಲಿ ಇಬ್ಬರೂ ಜೊತೆಯಾಗಿ ಅಭಿನಯಿಸಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮ ಚಿಗುರೊಡೆದಿದ್ದು.

  2000ನೇ ಇಸವಿಯಲ್ಲಿ ತೆರೆಕಂಡಿದ್ದ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಚೋರ ಚಿತ್ತ ಚೋರ' ಚಿತ್ರದಲ್ಲಿ ನಮ್ರತಾ ಶಿರೋಡ್ಕರ್ ಅಭಿನಯಿಸಿದ್ದರು. ಈ ರೋಮ್ಯಾಂಟಿಕ್ ಚಿತ್ರ ಬಾಕ್ಸಾಫೀಸಲ್ಲೂ ಗೆದ್ದಿತ್ತು. ಅದಾದ ಬಳಿಕ ನಮ್ರತಾ ಕನ್ನಡದ ಚಿತ್ರಗಳಿಂದ ಕಾಣೆಯಾಗಿದ್ದರು. (ಏಜೆನ್ಸೀಸ್)

  English summary
  Actor Mahesh Babu's wife Namrata Shirodkar has delivered a baby girl at the Swapna Nursing Home in Hyderabad at 8.15 am today (Friday, July 20). According to hospital sources, both mother and her daughter are healthy and they are doing fine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X