»   » 'ಮರಿ ಟೈಗರ್' ಜೊತೆ ಪಕ್ಕಾ ಲೋಕಲ್ ಸ್ಟೆಪ್ ಹಾಕಿದ ನೀತು ಶೆಟ್ಟಿ

'ಮರಿ ಟೈಗರ್' ಜೊತೆ ಪಕ್ಕಾ ಲೋಕಲ್ ಸ್ಟೆಪ್ ಹಾಕಿದ ನೀತು ಶೆಟ್ಟಿ

Posted By:
Subscribe to Filmibeat Kannada

'ಪೂಜಾರಿ' ಚಿತ್ರದಲ್ಲಿ ಆದಿ ಲೋಕೇಶ್ ಜೊತೆ 'ಕಣ್ಣಲ್ಲೇ ನನ್ನ ಚಿತ್ರ ಬರೆದೋನು' ಅಂತ ಡ್ಯುಯೆಟ್ ಹಾಡಿದ್ದ ನಟಿ ನೀತು ಅವರು, ಸ್ಯಾಂಡಲ್ ವುಡ್ ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸೇನು ಗಳಿಸಲಿಲ್ಲ.

ಒಂದೆರಡು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಂತರ ತುಳು ಚಿತ್ರರಂಗಕ್ಕೆ ಕಾಲಿಟ್ಟು ಅದೃಷ್ಟ ಪರೀಕ್ಷೆ ಮಾಡಿದರು. ಆದರೆ ಅವರಿಗೆ ಅಲ್ಲೂ ಅದೃಷ್ಟ ಕೂಡಿ ಬರಲಿಲ್ಲ. ಅದೆಲ್ಲಾ ಆದ ಮೇಲೆ 'ಬಿಗ್ ಬಾಸ್ ಕನ್ನಡ ಸೀಸನ್ 2'ಗೂ ಕಾಲಿಟ್ಟು ಅಲ್ಲಿ ಸ್ವಲ್ಪ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡರು.[ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಯಲ್ಲಿ ನೀತೂ!]

ಇದೆಲ್ಲಾ ಮುಗಿದು ಹೋದ ಕಥೆ, ಸುಮಾರು ಏಳೆಂಟು ತಿಂಗಳಿನಿಂದ ಎಲ್ಲೂ ಕಾಣಿಸಿಕೊಳ್ಳದೇ ನಾಪತ್ತೆಯಾಗಿದ್ದ ನೀತು ಅವರು 'ಮೊಂಬತ್ತಿ' ಎಂಬ ಸಿನಿಮಾದಲ್ಲಿ ಮಿಂಚಿದ್ದರು. ಇದೀಗ ಅದೇ ನೀತು ಹೊಸ ಚಿತ್ರದ, ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ಅಷ್ಟೇನು ಯಶಸ್ಸು ಕಾಣದ ಪರಿಣಾಮ ಇದೀಗ ಐಟಂ ಡ್ಯಾನ್ಸ್ ಗೆ ಸೊಂಟ ಬಳುಕಿಸಲು ನೀತು ತಯಾರಾಗಿದ್ದಾರೆ. ಈ ಮೊದಲು ನೀತು ಶೆಟ್ಟಿ ಅವರು 'ಜೀತು', 'ಕ್ರೇಜಿಸ್ಟಾರ್' 'ಬೆಂಗಳೂರು ಮೆಟ್ರೋ' 'ಮನಸಾರೆ' ಮುಂತಾದ ಚಿತ್ರಗಳ ಐಟಂ ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ದರು. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ...

'ಮರಿ ಟೈಗರ್'ಗೆ ನೀತು ಸಾಥ್

ನಟ ವಿನೋದ್ ಪ್ರಭಾಕರ್ ನಟನೆಯ, ನೆನೆಗುದಿಗೆ ಬಿದ್ದಿದ್ದ 'ಮರಿ ಟೈಗರ್' ಚಿತ್ರದಲ್ಲಿನ ವಿಶೇಷ ಐಟಂ ಸಾಂಗ್ ಒಂದರಲ್ಲಿ ನೀತು ಅವರು ಸಖತ್ ಆಗಿ ಕುಣಿದಿದ್ದಾರೆ.[ತಂದೆಯ ಸಾವಿನ ಕಾರಣ ಬಿಚ್ಚಿಟ್ಟ ವಿನೋದ್ ಪ್ರಭಾಕರ್]

ಮೂರು ವರ್ಷದ ಹಿಂದೆ ಸೆಟ್ಟೇರಿದ್ದ 'ಮರಿ ಟೈಗರ್'

ವಿನೋದ್ ಪ್ರಭಾಕರ್ ಅವರ 'ಮರಿ ಟೈಗರ್' ಸಿನಿಮಾ ಸುಮಾರು 3 ವರ್ಷದ ಹಿಂದೆಯೇ ಸೆಟ್ಟೇರಿತ್ತು. ಆದರೆ ಕೆಲವು ಕಾರಣಗಳಿಂದ ಈ ಚಿತ್ರದ ಶೂಟಿಂಗ್ ವಿಳಂಬವಾಗಿತ್ತು. ಇದೀಗ ಮತ್ತೆ ಈ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ಚಿತ್ರೀಕರಣ ಕೊನೆಯ ಹಂತದಲ್ಲಿದೆ.[ಬೆಣ್ಣೆ ದೋಸೆ ತಿರಸ್ಕರಿಸಿದ 'ಪೂಜಾರಿ' ಬೆಡಗಿ]

ಸ್ಪೆಷಲ್ ಡ್ಯಾನ್ಸ್ ನಲ್ಲಿ ನೀತು

ನಟಿ ಮಣಿಯರು ಐಟಂ ಡ್ಯಾನ್ಸ್ ನಲ್ಲಿ ಕಾಣಿಸಿಕೊಳ್ಳೋದು ವಿಶೇಷ ಏನಲ್ಲಾ. 'ಚಿಂಗಾರಿ' ಮತ್ತು 'ಬಿಗ್ ಬಾಸ್' ಖ್ಯಾತಿಯ ದೀಪಿಕಾ ಕಾಮಯ್ಯ, ನಟಿ ಐಂದ್ರಿತಾ ಸೇರಿದಂತೆ ಕನ್ನಡದ ಹಲವು ನಟಿಮಣಿಯರು, ಕೆಲವಾರು ಚಿತ್ರದ ಐಟಂ ಸಾಂಗ್ ಗಳಿಗೆ ಸೊಂಟ ಬಳುಕಿಸಿದ್ದಾರೆ. 'ಮರಿ ಟೈಗರ್' ಚಿತ್ರದಲ್ಲಿ ನೀತು ಶೆಟ್ಟಿ ಅವರ ಸರದಿ. ಇತ್ತೀಚೆಗಷ್ಟೇ ಈ ವಿಶೇಷ ಹಾಡಿನ ಶೂಟಿಂಗ್ ಮುಕ್ತಾಯಗೊಳಿಸಲಾಗಿದೆ.[ಸಿನಿಮಾ 'ಟೈಟಲ್' ಗಾಗಿ ಮರಿ 'ಟೈಗರ್' ಕಿತ್ತಾಟ]

ಮಿನರ್ವ ಮಿಲ್ ನಲ್ಲಿ ಅದ್ಧೂರಿ ಸೆಟ್

ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಹಾಕಲಾಗಿದ್ದ ವಿಶೇಷ ಸೆಟ್ ನಲ್ಲಿ ನಟಿ ನೀತು ಅವರ ಭಾಗದ ಹಾಡಿನ ಶೂಟಿಂಗ್ ಮುಕ್ತಾಯಗೊಳಿಸಲಾಗಿದೆ. ಪಿ.ಎನ್ ಸತ್ಯ ಅವರು ಬರೆದಿರುವ 'ಅಂಕಲ್ ಅಂಕಲ್ ಮುಂದೆ ಬರ್ತಿರಾ' ಎಂಬ ಹಾಡಿಗೆ ನೀತು ಅವರು ಸುಮಾರು 25ಕ್ಕೂ ಹೆಚ್ಚು ಸಹ ನೃತ್ಯಗಾರರ ಜೊತೆ ಜಬರ್ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಹರಿಕೃಷ್ಣ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಮೂಲಕ 'ಮರಿ ಟೈಗರ್' ಚಿತ್ರದ ಶೂಟಿಂಗ್ ಬಹುತೇಕ ಪೂರ್ತಿಯಾಗಿದೆ.

ವಿನೋದ್ ವೃತ್ತಿ ಜೀವನಕ್ಕೆ ತಿರುವು ಕೊಡ್ತಾನಾ 'ಮರಿ ಟೈಗರ್'

ನಟ ವಿನೋದ್ ಪ್ರಭಾಕರ್ ಅವರಿಗೂ ಹೇಳಿಕೊಳ್ಳುವಂತಹ ಯಾವುದೇ ಸಿನಿಮಾಗಳು ಯಶಸ್ಸು ಕೊಡಲಿಲ್ಲ. ಆದರೆ 'ಮರಿ ಟೈಗರ್' ಚಿತ್ರದ ಮೇಲೆ ಬಹಳ ನಿರೀಕ್ಷೆ ಇದ್ದು, ಈ ಸಿನಿಮಾ ಅವರ ವೃತ್ತಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗುವ ಸಂಭವವಿದೆ ಎನ್ನುತ್ತಿವೆ ಹತ್ತಿರದ ಮೂಲಗಳು. ಚಿತ್ರಕ್ಕೆ ರಮೇಶ್ ಕಶ್ಯಪ್ ಬಂಡವಾಳ ಹೂಡಿದ್ದು, ಪಿ.ಎನ್ ಸತ್ಯ ಅವರು ನಿರ್ದೇಶನ ಮಾಡಿದ್ದಾರೆ. ನಟಿ ತೇಜು ಅವರು ವಿನೋದ್ ಪ್ರಭಾಕರ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.

English summary
Kannada Actress Neethu Shetty was earlier seen in a special number in Yogaraj Bhat's Manasaare. The song, 'Ondu kanasu Kaali peeli...', had won good feedback for her. Now, Neethu is set to return with similar kind of song in forthcoming Kannada movie 'Mari Tiger'. Kannada Actor Vinod Prabhakar, Kannada Actress Teju in the lead role. The movie is directed by PN Satya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada