For Quick Alerts
  ALLOW NOTIFICATIONS  
  For Daily Alerts

  ಪ್ಯಾಂಟ್ ಲೆಸ್ ನಿಧಿ ಸುಬ್ಬಯ್ಯ: ಉದ್ದ ಚಡ್ಡಿ ಹಾಕೋಕೆ ಆಗಲ್ವಾ ಎಂದು ನೆಟ್ಟಿಗರ ತರಾಟೆ

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟಿ ನಿಧಿ ಸುಬ್ಬಯ್ಯ ಬಹುದಿನಗಳ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾದೆ ನಿಧಿ ಸುದ್ದಿಯಾಗಿರುವುದು ಸಿನಿಮಾ ವಿಚಾರಕ್ಕಲ್ಲ. ಹಾಟ್ ಫೋಟೋ ಶೇರ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ನಿಧಿ ಸುಬ್ಬಯ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಅಂದಹಾಗೆ ನಿಧಿ ಹಂಚಿಕೊಂಡಿರುವ ಪೋಟೋದಲ್ಲಿ ಚಿಕ್ಕ ಚಡ್ಡಿ ಧರಿಸಿ. ಉದ್ದನೆಯ ಟಾಪ್ ಹಾಕಿದ್ದಾರೆ. ಮಿರರ್ ಫೋಟೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ಮೊಟ್ಟ ಮೊದಲ ಸಲ ಹಾರರ್ ಚಿತ್ರದಲ್ಲಿ ನಟಿ ನಿಧಿ ಸುಬ್ಬಯ್ಯಮೊಟ್ಟ ಮೊದಲ ಸಲ ಹಾರರ್ ಚಿತ್ರದಲ್ಲಿ ನಟಿ ನಿಧಿ ಸುಬ್ಬಯ್ಯ

  ನೆಟ್ಟಿಗರ ತರಾಟೆ

  ನೆಟ್ಟಿಗರ ತರಾಟೆ

  ನಿಧಿ ಸುಬ್ಬಯ್ಯ ಹಾಟ್ ಫೋಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಉದ್ದ ಚಡ್ಡಿ ಹಾಕೋಕೆ ಆಗೋಲ್ವಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೆಲ್ಲ ಖರ್ಚು ಮಾಡುತ್ತೀರಾ ಉದ್ದದೊಂದು ಚಡ್ಡಿ ಹಾಕೋಕೆ ಆಗಲ್ವಾ ಎಂದು ಕಾಮೆಂಟ್ ಮಾಡಿದ್ದಾರೆ. ಶರ್ಟ್ ಯಾಕೆ ಹಾಕಿದ್ದೀರಾ? ಅದನ್ನು ತೆಗಿಬೇಕಿತ್ತು ಎಂದು ಮತ್ತೋರ್ವ ಕಾಮೆಂಟ್ ಹಾಕಿದ್ದಾರೆ. ಹೀಗೆ ಸಾಕಷ್ಟು ತರಹೇವಾರಿ ಕಾಮೆಂಟ್ ಗಳು ಹರಿದುಬಂದಿವೆ.

  ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ನಿಧಿ

  ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ನಿಧಿ

  ನಿಧಿ ಸುಬ್ಬಯ್ಯ ಫೋಟೋ ಜೊತೆಗೆ Be your own kind of beatiful ಎಂದು ಬರೆದುಕೊಂಡಿದ್ದಾರೆ. ನಿಧಿ ಸುಬ್ಬಯ್ಯ ಮದುವೆ ನಂತರ ಚಿತ್ರರಂಗದಿಂದ ದೂರ ಆಗಿದ್ದರು. ಆದರೆ ಸ್ವಲ್ಪ ಗ್ಯಾಪ್ ನ ಬಳಿಕ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ.

  ಆಯುಷ್ಮಾನ್ ಭವ ಕೊನೆಯ ಸಿನಿಮಾ

  ಆಯುಷ್ಮಾನ್ ಭವ ಕೊನೆಯ ಸಿನಿಮಾ

  5G ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ನಿಧಿ, ಬಳಿಕ ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಸಿನಿಮಾದ ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಬಳಿಕ ಮತ್ತೆ ಚಿತ್ರಾಭಿಮಾನಿಗಳ ಮುಂದೆ ಬಂದಿಲ್ಲ. ಇತ್ತೀಚಿಗಷ್ಟೆ ಹೊಸ ಸಿನಿಮಾಗೆ ಸಹಿ ಮಾಡುವ ಮೂಲಕ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

  Recommended Video

  KGF ಮೀರಿಸಲಿದೆ ಸಲಾರ್ | Filmibeat Kannada
  ಹಾರರ್ ಸಿನಿಮಾ ಮೂಲಕ ಬರ್ತಿದ್ದಾರೆ ನಿಧಿ

  ಹಾರರ್ ಸಿನಿಮಾ ಮೂಲಕ ಬರ್ತಿದ್ದಾರೆ ನಿಧಿ

  ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಸಾದ್ ಮತ್ತು ಪವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿಧಿ ಸುಬ್ಬಯ್ಯ ಕನ್ನಡದ ಜೊತೆಗೆ ಹಿಂದಿ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ನಾಲ್ಕು ಹಿಂದಿ ಸಿನಿಮಾಗಳಲ್ಲೂ ನಿಧಿ ನಟಿಸಿದ್ದಾರೆ. ಜೊತೆಗೆ ತೆಲುಗಿನ ಒಂದು ಸಿನಿಮಾದಲ್ಲೂ ಮಿಂಚಿದ್ದಾರೆ.

  English summary
  Sandalwood Actress Nidhi Subbaiah gets trolled after shares hot photos.
  Tuesday, January 19, 2021, 9:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X