»   » ತಾರೆ ನಿಧಿ ಸುಬ್ಬಯ್ಯ ಕ್ರೀಡಾ ಸಾಧನೆಗೆ ಮುಡಾ ಸೈಟ್

ತಾರೆ ನಿಧಿ ಸುಬ್ಬಯ್ಯ ಕ್ರೀಡಾ ಸಾಧನೆಗೆ ಮುಡಾ ಸೈಟ್

By: ರವಿಕಿಶೋರ್
Subscribe to Filmibeat Kannada
'ಪಂಚರಂಗಿ' ಬೆಡಗಿ ನಿಧಿ ಸುಬ್ಬಯ್ಯ ಅವರ ಕ್ರೀಡಾ ಸಾಧನೆಗೆ ಕಡೆಗೂ ಫಲ ಸಿಕ್ಕಿದೆ. ಆಕೆಯ ಕ್ರೀಡಾ ಸಾಧನೆಯನ್ನು ಗಮನಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿಧಿ ಅವರಿಗೆ ಎಚ್ ಕೆಟಗರಿ ನಿವೇಶವನ್ನು ಮಂಜೂರು ಮಾಡಿದೆ.

ನಿಧಿ ಸುಬ್ಬಯ್ಯ ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಕ್ರೀಡಾಕಾರಿಣಿಯಾಗಿ ಗುರುತಿಸಿಕೊಂಡಿದ್ದರು. ಪಿಯುಸಿ ಓದುವಾಗಲೇ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಖ್ಯಾತಿಗೆ ಒಳಗಾಗಿದ್ದರು.

ಹಾಯಿದೋಣಿ ಸ್ಪರ್ಧೆಯಲ್ಲೂ ಪದಕ ಗೆದ್ದಿದ್ದರು. ಒಂದೇ ವರ್ಷದಲ್ಲಿ ವಿವಿಧ ಕ್ರೀಡೆಗಳಲ್ಲಿ ಮೂರು ಚಿನ್ನದ ಪದಕ ಗಳಿಸಿದ ಖ್ಯಾತಿ ಅವರದು. ತಮ್ಮ ಕ್ರೀಡಾ ಸಾಧನೆಗಾಗಿ ಅವರು ಎಚ್ ಕೆಟಗರಿ ನಿವೇಶನ ಕೋರಿ 2005ರಲ್ಲಿ ಮುಡಾಗೆ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅರ್ಜಿ ಸಲ್ಲಿಸಿದ್ದರು.

ಆಕೆಯ ಸಾಧನೆಯನ್ನು ಗಮನಿಸಿದ ಮುಡಾ ಈಗ 30x40 ಅಳತೆಯ ಸೈಟನ್ನು ಮೈಸೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರಲ್ಲಿ ಮಂಜೂರು ಮಾಡಿದೆ. ಈಗದರ ಬೆಲೆ ಸುಮಾರು ರು. 6 ಲಕ್ಷ ಎನ್ನುತ್ತವೆ ಮೂಲಗಳು.

ಗಾಂಧಿನಗರಲ್ಲಿ ನಿಧಿ ಸುಬ್ಬಯ್ಯ ಸದ್ದು ಮಾಡಿದ್ದು ಅಷ್ಟಷ್ಟು ಮಾತ್ರವೆ. ಬಾಲಿವುಡ್‌ನಲ್ಲಿ ಚಾನ್ಸ್ ಮೇಲೆ ಚಾನ್ಸ್ ಗಿಟ್ಟಿಸುತ್ತಿದ್ದಾರೆ ಈಕೆ. ಮೂಲಗಳ ಪ್ರಕಾರ ಐದು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ನಿಧಿಗೆ ನಿಧಿ ಸಿಕ್ಕಂತಾಗಿದೆ.

ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಜೊತೆಗಿನ 'ಓ ಮೈ ಗಾಡ್' ಚಿತ್ರಕ್ಕೆ ಸಹಿಹಾಕಿದ ಬಳಿಕ ಈಗ ಮತ್ತೊಂದು ಚಿತ್ರ ಹುಡುಕಿಕೊಂಡು ಬಂದಿದೆ. ಆ ಚಿತ್ರದ ಹೆಸರು 'ಅಜಬ್ ಗಜಬ್ ಲವ್'. ಚಿತ್ರದ ನಾಯಕ ನಟ ಜಾಕಿ ಬಗ್‌ನಾನಿ. ಅಕ್ಕಿ ಜೊತೆಗಿನ 'ಓಂ ಮೈ ಗಾಡ್' ಚಿತ್ರ ಹೆಚ್ಚುಕಡಿಮೆ ಯೋಗರಾಜ್ ಭಟ್ಟರ 'ಪಂಚರಂಗಿ' ಚಿತ್ರವನ್ನು ಹೋಲುತ್ತದಂತೆ.

English summary
Kannada actress Nidhi Subbaiah has been allotted H category site in Mysore in sports quota. Before entering film industry, Nidhi was a good sports person. She has got 3 gold medals at national level. Considering her achievement in sports now Mysore Urban Development Authority has granted 30x40 site in the city.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada