»   » 'ಪ್ರೇಮ್ ಕಹಾನಿ' ಹೇಳಲು ಬಂದ್ರು ನಿಧಿ ಸುಬ್ಬಯ್ಯ

'ಪ್ರೇಮ್ ಕಹಾನಿ' ಹೇಳಲು ಬಂದ್ರು ನಿಧಿ ಸುಬ್ಬಯ್ಯ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣ ಬಾಂಡ್' ಸಿನಿಮಾ ಆದ್ಮೇಲೆ ಮುಂಬೈನಲ್ಲೇ ಸೆಟ್ಲ್ ಆಗಿರುವ ಕೂರ್ಗಿ ಬೆಡಗಿ ನಿಧಿ ಸುಬ್ಬಯ್ಯ, ಬಾಲಿವುಡ್ ನಲ್ಲಿ ಎರಡ್ಮೂರು ಸಿನಿಮಾ ಮಾಡಿದ್ರು.

'ಅಜಬ್ ಗಝಬ್ ಲವ್', 'ಓ ಮೈ ಗಾಡ್' ಚಿತ್ರಗಳ ಮೂಲಕ ಬಾಲಿವುಡ್ ನಲ್ಲಿ ಗುರುತಿಸಿಕೊಂಡ ನಿಧಿ ಸುಬ್ಬಯ್ಯ ಕೈಯಲ್ಲಿ ಸದ್ಯ 'ಡೈರೆಕ್ಟ್ ಇಶ್ಕ್ ಹೋಗಯಾ' ಮತ್ತು 'ಲವ್ ಶಾಗುನ್' ಸಿನಿಮಾಗಳಿವೆ. [ಮುಂಬೈನಲ್ಲಿ ನಿಧಿ ಸುಬ್ಬಯ್ಯ ಜೊತೆ ವಿನಯ್ ರಾಜ್ ಕುಮಾರ್]

nidhi-subbaiah

ಕೊಡಗಿನ ಕುವರಿ ಹಿಂದಿ ಚಿತ್ರಗಳಲ್ಲೇ ಬಿಜಿಯಾಗೋದ್ರಲ್ಲ ಅನ್ನುವಾಗಲೇ, ನಿಧಿ ಸುಬ್ಬಯ್ಯ ಮರಳಿ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಅಭಿನಯದ ಹೊಸ ಸಿನಿಮಾ 'ನನ್ನ ನಿನ್ನ ಪ್ರೇಮ್ ಕಹಾನಿ'ಗೆ ನಿಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. [ಈ ತಾರೆಗಳು ನಾಪತ್ತೆ; ದೂರು ಕೊಡೋರೇ ಇಲ್ಲ!]

ಒಂದೇ ಶೆಡ್ಯೂಲ್ ನಲ್ಲಿ ಶೂಟಿಂಗ್ ಮುಗಿಸುವ ಕಾರಣ ನಿಧಿ ಈ ಚಿತ್ರವನ್ನ ಒಪ್ಪಿಕೊಂಡರಂತೆ. ಇದೇ ತಿಂಗಳಾಂತ್ಯದಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. 'ನನ್ನ ನಿನ್ನ ಪ್ರೇಮ್ ಕಹಾನಿ' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Actress Nidhi Subbaiah is back to Kannada Films. Nidhi has signed to pair opposite Vijay Raghavendra in 'Nanna Ninna Prem Kahani'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada