»   » ತುಂಡುಡುಗೆಯಲ್ಲಿ ಹುಟ್ಟುಮಚ್ಚೆ ಪ್ರದರ್ಶಿಸಿದ ನಿಕೇಶಾ

ತುಂಡುಡುಗೆಯಲ್ಲಿ ಹುಟ್ಟುಮಚ್ಚೆ ಪ್ರದರ್ಶಿಸಿದ ನಿಕೇಶಾ

By: ರವಿಕಿಶೋರ್
Subscribe to Filmibeat Kannada

"ದಹನ ದಹನ ತನುಮನ.. ಬೇಗ ಹೇಳು ಒಂದು ಉಪಶಮನ..." ಎಂದು 'ನರಸಿಂಹ' ಚಿತ್ರದ ಹಾಟ್ ಅಂಡ್ ವೆಟ್ ಸಾಂಗ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಮೈ ಬಳುಕಿಸಿದ್ದ ತಾರೆ ನಿಕೇಶಾ ಪಟೇಲ್ ಇದೀಗ ಮತ್ತೊಮ್ಮೆ ಹಾಟ್ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಹುಟ್ಟಿದ್ದು ಯು.ಕೆಯಲ್ಲಾದರೂ ಅಪ್ಪಟ ಭಾರತೀಯ ನಾರಿ ಪಾತ್ರಗಳಿಗೆ ಹಾಗೂ ಪಡ್ಡೆಗಳ ಹಳ್ಳಕ್ಕೆ ಕೆಡಹುವ ಐಟಂ ಬಾಂಬ್ ಪಾತ್ರಗಳಿಗೂ ಸೈ ಎಂಬಂತಿರುವ ಚೆಲುವೆ. ನರಸಿಂಹ ಚಿತ್ರದ ಬಳಿಕ ಡಕೋಟಾ ಪಿಕ್ಚರ್, ವರದನಾಯಕ ಚಿತ್ರಗಳಲ್ಲಿ ಅಭಿನಯಿಸಿದ್ದರು. [ಈ ತಾರೆಗಳು ನಾಪತ್ತೆ; ದೂರು ಕೊಡೋರೇ ಇಲ್ಲ!]

ಆ ಬಳಿಕ ನಾಪತ್ತೆಯಾದ ನಿಕೇಶಾ ಪಟೇಲ್ ಇದೀಗ 'ನಮಸ್ತೆ ಮೇಡಂ' ಚಿತ್ರದ ಮೂಲಕ ಮತ್ತೆ ಕನ್ನಡ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ. ಈ ಮಧ್ಯೆ ಒಂದು ತಮಿಳು ಚಿತ್ರಕ್ಕೂ ಸಹಿ ಹಾಕಿದ್ದಾರೆ. ಇತ್ತೀಚೆಗೆ ಆ ಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಎಲ್ಲರ ಗಮನಸೆಳೆದರು.

ಎಲ್ಲರ ಕಣ್ಣು ಅಲ್ಲೇ ನಾಟುವಂತೆ ನಿಕೇಶಾ ಪಟೇಲ್

ತನ್ನ ಬಾಳೆದಿಂಡಿನಂತಹ ತೊಡೆಯ ಮೇಲಿನ ಹುಟ್ಟುಮಚ್ಚೆಯನ್ನು ಪ್ರದರ್ಶಿಸಲೋ ಏನೋ ತುಂಡುಡುಗೆಯಲ್ಲಿ ಬಂದಿದ್ದರು. ಎಲ್ಲರ ಕಣ್ಣು ಅಲ್ಲೇ ನಾಟುವಂತೆ ನಿಕೇಶಾ ಪಟೇಲ್ ಮಾಡಿದರು.

'ನರಸಿಂಹ' ಚಿತ್ರದಲ್ಲಿ ಸೊಂಟ ಬಳುಕಿಸಿದ್ದ ತಾರೆ

ಯು.ಕೆಯಲ್ಲಿ ಹುಟ್ಟಿ ಬೆಳೆದ ನಿಕೇಶಾ ಪಟೇಲ್ ಭಾರತಕ್ಕೆ ಬರುವ ಮುನ್ನ ಬಿಬಿಸಿ ಟಿವಿಗೆ ಸಂಬಂಧಿಸಿದ ಕೆಲವು ಶೋಗಳಲ್ಲಿ ಅಭಿನಯಿಸಿದ್ದಾರೆ. ನಿಕೇಶಾ ಮೊದಲು ಅಭಿನಯಿಸಿದ್ದು ತೆಲುಗಿನ 'ಪುಲಿ' ಚಿತ್ರ ಆ ಬಳಿಕ ಕ್ರೇಜಿಸ್ಟಾರ್ ಚಿತ್ರ 'ನರಸಿಂಹ'ದಲ್ಲಿ ತಾನೊಬ್ಬ ಹಾಟ್ ಬಾಂಬ್ ಎಂಬುದನ್ನು ತೋರಿಸಿಕೊಟ್ಟರು.

ಚಿಕ್ಕಂದಿನಿಂದಲೇ ಮಾಡೆಲಿಂಗ್ ಎಂದರೆ ಆಸಕ್ತಿ

ಚಿಕ್ಕಂದಿನಿಂದಲೇ ಮಾಡೆಲಿಂಗ್, ಅಭಿನಯ ಎಂದರೆ ಎಲ್ಲಿಲ್ಲದ ಆಸಕ್ತಿ ನಿಕೇಶಾ ಪಟೇಲ್ ಅವರಿಗಿತ್ತು.

ಸೌಂದರ್ಯ ಸ್ಪರ್ಧೆಯಲ್ಲೂ ಆಯ್ಕೆಯಾಗಿದ್ದರು

2006ರಲ್ಲಿ ನಡೆದ 'ಮಿಸ್ ವೇಲ್ಸ್ ಬ್ಯೂಟಿ ಪೇಜೆಂಟ್' ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.

ಶೂಟಿಂಗ್ ಸ್ಪಾಟ್ ನಲ್ಲಿ ಕಲಿತದ್ದೇ ಹೆಚ್ಚು

ಅಭಿನಯದಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ನಿಕೇಶಾ ಪಟೇಲ್ ಕಾಲೇಜಲ್ಲಿ ಕಲಿತದ್ದಕ್ಕಿಂತಲೂ ಶೂಟಿಂಗ್ ಸ್ಪಾಟ್ ನಲ್ಲಿ ಕಲಿತದ್ದೇ ಹೆಚ್ಚು.

English summary
Kannada movie 'Narasimha' fame actress Nikesha Patel hot look at press meet. The actress appeared in shorts attracts the crowd.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada