For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಸಿಂಗ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ನಿಖಿತಾ ತುಕ್ರಾಲ್

  By Suneetha
  |

  'ಮಹಾರಾಜ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪಂಜಾಬಿ ಚಿಗರೆ ನಿಖಿತಾ ತುಕ್ರಾಲ್ ಅವರು, ಬಂದ ಅಲ್ಪ ಸಮಯದಲ್ಲೇ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡರು.

  ಪುನೀತ್ ಜೊತೆ 'ವಂಶಿ', ದರ್ಶನ್ ಜೊತೆ 'ಪ್ರಿನ್ಸ್', 'ಸಂಗೊಳ್ಳಿ ರಾಯಣ್ಣ' ಮತ್ತು 'ಯೋಧ' ಚಿತ್ರದಲ್ಲಿ ಮಿಂಚಿರುವ ಬಹುಬಾಷಾ ನಟಿ ನಿಖಿತಾ ಕೆಲವು ವಿವಾದಗಳಿಂದ ಕೂಡ ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದರು.

  ತದನಂತರ 'ಬಿಗ್ ಬಾಸ್ ಕನ್ನಡ'ದಲ್ಲಿ ಸ್ಪರ್ಧಿಯಾಗಿದ್ದ ನಿಖಿತಾ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಅದೇ ನಿಖಿತಾ ಅವರಿಗೆ ಇದೀಗ ಮದುವೆ ಕುದುರಿದ್ದು, ಪ್ರೀತಿಸಿದಾತನ ಕೈ ಹಿಡಿದು ಸಂಸಾರ ಎಂಬ ನೌಕೆಯನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.[ನಟಿ ನಿಖಿತಾ ತುಕ್ರಾಲ್ ಗೆ ಮದುವೆ ಅಂತೆ.! ಗಂಡು ಯಾರು ಗೊತ್ತೇ.?]

  ಒಟ್ನಲ್ಲಿ ಮದುವೆಯಾಗುವ ಮೂಲಕ, ತಾನು ಯಾವುದೇ ತಪ್ಪು ಮಾಡಿಲ್ಲ, ಯಾರ ಸಂಸಾರಕ್ಕೂ ಹುಳಿ ಹಿಂಡಲು ಹೋಗಿಲ್ಲ ಅಂತ ಪರೋಕ್ಷವಾಗಿ ತುಕ್ರಾಲ್ ಎಲ್ಲರಿಗೂ ಮನವರಿಕೆ ಕೂಡ ಮಾಡಿ ಕೊಟ್ಟಿದ್ದಾರೆ.

  ಶನಿವಾರ (ಅಕ್ಟೋಬರ್ 8) ಮುಂಬೈನಲ್ಲಿ ಮದುವೆಯಾಗಿರುವ ನಟಿ ನಿಖಿತಾ ತುಕ್ರಾಲ್-ಗಗನ್ ದೀಪ್ ಸಿಂಗ್ ಅವರ, ಅದ್ಧೂರಿ ಮದುವೆಯ ಕೆಲವು ಫೋಟೋಗಳು ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದೆ ಓದಿ....

  ಸಪ್ತಪದಿ ತುಳಿದ ನಿಖಿತಾ ತುಕ್ರಾಲ್

  ಸಪ್ತಪದಿ ತುಳಿದ ನಿಖಿತಾ ತುಕ್ರಾಲ್

  ಶನಿವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ನಟಿ ನಿಖಿತಾ ತುಕ್ರಾಲ್ ಅವರು, ಎರಡು ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ತಾವು ಪ್ರೇಮಿಸಿದ ಪಂಜಾಬಿ ಹುಡುಗ, ಉದ್ಯಮಿ ಗಗನ್ ದೀಪ್ ಸಿಂಗ್ ಮಾಗೋ ಅವರ ಕೈ ಹಿಡಿದಿದ್ದಾರೆ.

  ಲವ್ ಕಮ್ ಅರೇಂಜ್ಡ್ ಮದುವೆ

  ಲವ್ ಕಮ್ ಅರೇಂಜ್ಡ್ ಮದುವೆ

  ಕಳೆದ ಡಿಸೆಂಬರ್ ನಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ನಿಖಿತಾ ಅವರನ್ನು ನೋಡಿದ ಗಗನ್ ದೀಪ್ ಸಿಂಗ್ ಅವರು ಒಂದೇ ನೋಟಕ್ಕೆ ಮೆಚ್ಚಿಕೊಂಡಿದ್ದರು. ಆಮೇಲೆ ಮಾತು-ಕತೆ ಆಗಿ, ಲವ್ ಆಗಿ ಇದೀಗ ಮದುವೆ ಕೂಡ ಮಾಡಿಕೊಂಡಿದ್ದಾರೆ.

  ಪಂಜಾಬಿ ಶೈಲಿಯಲ್ಲಿ ಮದುವೆ

  ಪಂಜಾಬಿ ಶೈಲಿಯಲ್ಲಿ ಮದುವೆ

  ಪಕ್ಕಾ ಪಂಜಾಬಿ ಶೈಲಿ ಅಂದರೆ ಉತ್ತರ ಭಾರತೀಯ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ನೆರವೇರಿದೆ. ಮುಂಬೈನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

  ಆರತಕ್ಷತೆ ಕಾರ್ಯಕ್ರಮ

  ಆರತಕ್ಷತೆ ಕಾರ್ಯಕ್ರಮ

  ಈಗಾಗಲೇ ಮದುವೆ ಕಾರ್ಯಗಳು ನೆರವೇರಿದ್ದು, ಇಂದು (ಅಕ್ಟೋಬರ್ 9) ಸಂಜೆ ಆರತಕ್ಷತೆ ಕಾರ್ಯಕ್ರಮ ಕೂಡ ಜರುಗಲಿದೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಎಲ್ಲಾ ಚಿತ್ರರಂಗದ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.

  ಹನಿಮೂನ್ ಯಾವಾಗ?

  ಹನಿಮೂನ್ ಯಾವಾಗ?

  ಮದುವೆ ಕಾರ್ಯಕ್ರಮಗಳು ಮುಗಿದ ಕೂಡಲೇ, ಮುಂದಿನ ವಾರ ನಟಿ ನಿಖಿತಾ ತುಕ್ರಾಲ್ ಮತ್ತು ಉದ್ಯಮಿ ಗಗನ್ ದೀಪ್ ಸಿಂಗ್ ಅವರು ಬಹಾಮಾಸ್ ಗೆ ಹನಿಮೂನ್ ಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ.

  ಮೆಹೆಂದಿ/ಸಂಗೀತ ಕಾರ್ಯಕ್ರಮ

  ಮೆಹೆಂದಿ/ಸಂಗೀತ ಕಾರ್ಯಕ್ರಮ

  ಮದುವೆಗೆ ಮುನ್ನ ವಧುವಿನ ಮನೆಯಲ್ಲಿ ಮೆಹೆಂದಿ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮ ನಡೆದಿದ್ದು, ವಧು-ವರರ ಸಂಬಂಧಿಗಳು ಭಾಗವಹಿಸಿ ಸಂಭ್ರಮಪಟ್ಟರು.

  ಡ್ಯಾನ್ಸ್ ಮಾಡಿದ ವಧು

  ಡ್ಯಾನ್ಸ್ ಮಾಡಿದ ವಧು

  ವಧು ನಿಖಿತಾ ತುಕ್ರಾಲ್ ಅವರು ಸಂಗೀತ ಕಾರ್ಯಕ್ರಮದಲ್ಲಿ ಬಂಧುಗಳ ನಡುವೆ ಸಂಭ್ರಮದಿಂದ ಎರಡು ಸ್ಟೆಪ್ ಹಾಕಿದ್ದು ಹೀಗೆ.

  ವಧು-ವರರ ಜೊತೆ ಸೆಲ್ಫಿ

  ವಧು-ವರರ ಜೊತೆ ಸೆಲ್ಫಿ

  ವಧು ನಿಖಿತಾ ತುಕ್ರಾಲ್ ಮತ್ತು ವರ ಗಗನ್ ದೀಪ್ ಸಿಂಗ್ ಅವರ ಜೊತೆ ಬಂಧುಗಳು-ಸ್ನೇಹಿತರು ಸೆಲ್ಫಿ ಕ್ಲಿಕ್ಕಿಸಿಕೊಂಡ ಪರಿ ನೋಡಿ.

  English summary
  Kannada Actress Nikhita Thukral ties knot with his boyfriend, Mumbai based Industrialist Gagandeep Singh Mago Yesterday (October 8th) at Mumbai. Here is the Marriage Pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X