For Quick Alerts
  ALLOW NOTIFICATIONS  
  For Daily Alerts

  ಪೋರಾ ಚಿತ್ರದಲ್ಲಿ ಸೊಂಟ ಬಳುಕಿಸಲಿರುವ ನಿಖಿತಾ

  By Rajendra
  |

  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸಿದ ಬಳಿಕ ತಾರೆ ನಿಖಿತಾ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು. ಆದರೆ ಅವರು ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಸಾಕಷ್ಟು ಹತ್ತಿರವಾಗಿದ್ದರು. ಈಗ ಐಟಂ ಸಾಂಗ್ ಮೂಲಕ ಇನ್ನೂ ಹತ್ತಿರವಾಗಲು ಬರುತ್ತಿದ್ದಾರೆ.

  ಈ ಹಿಂದೆ ಸ್ನೇಹಿತರು ಚಿತ್ರದಲ್ಲೂ ಸ್ಪೆಷಲ್ ಹಾಡಿಗೆ ನಿಕಿತಾ ಹೆಜ್ಜೆ ಹಾಕಿದ್ದರು. ಮೂಲಗಳ ಪ್ರಕಾರ ನಿಕಿತಾ ಕನ್ನಡದ ಪೋರ ಚಿತ್ರದಲ್ಲಿ ತಮ್ಮ ಸೊಂಟ ಬಳುಕಿದಲಿದ್ದಾರೆ. ಈಗಾಗಲೆ ನಿಕಿತಾ ಐಟಂ ಡಾನ್ಸ್ ಗೆ ತಮ್ಮ ಒಪ್ಪಿಗೆ ನೀಡಿದ್ದಾರೆ. ಆದರೆ ಡೇಟ್ಸ್ ಹೊಂದಾಣಿಕೆಯಾಗುವುದೊಂದು ಬಾಕಿ ಇದೆ ಎನ್ನುತ್ತವೆ ಮೂಲಗಳು.

  ಸಂಗೀತ ನಿರ್ದೇಶಕ ಕೆ.ಎಂ.ಇಂದ್ರ ಅವರು ಬರೆದಿರುವ "ಗೂಗಲ್ ನಲ್ಲಿ ಹುಡುಕಾಡ್ ಬಿಟ್ಟೆ, ಗಲ್ಲಿ ಗಲ್ಲಿ ಓಡಾಡ್ ಬಿಟ್ಟೆ, ಗಾಂಧಿನಗರದಲ್ಲಿ ಸುತ್ತಾಡ್ ಬಿಟ್ಟೆ, ಒಂದ್ ಗಂಡ್ಸು ಸಿಗಲಿಲ್ವಲ್ಲೋ..ಅಪ್ಪಿ ತಪ್ಪಿ ಸಿಕ್ಕರೆ ಅದೇ ಇಲ್ವಲ್ಲೋ..." ಎಂಬ ಹಾಡಿಗೆ ನಿಕಿತಾ ಸೊಂತ ಕುಣಿಸಬೇಕಾಗಿದೆ.

  ಪೋರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಅಮೋಘ್. ದೇವರಾಜ್ ಶಿಡ್ಲಘಟ್ಟ ಹಾಗೂ ಡಾ.ಶೈಲೇಂದ್ರ ಬೆಲ್ಲದಾಳ್ ಚಿತ್ರದ ನಿರ್ಮಾಪಕರು. ಈಗಾಗಲೆ ಶೇ.95ರಷ್ಟು ಚಿತ್ರೀಕರಣ ಮುಗಿದಿದೆ. ಪಾತ್ರವರ್ಗದಲ್ಲಿ ನಾಯಕಿ ವ್ಯಾಲರಿ, ಲಕ್ಕಿಶಂಕರ, ಹಿರಿಯನಟ ಮನದೀಪ್ ರಾಯ್, ತಬಲಾನಾಣಿ, ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಹಿರಿಯ ಕಲಾವಿದರಾದ ಭವ್ಯಾ ಹಾಗೂ ಲಕ್ಷ್ಮಣ್ ಅವರೂ ಕೂಡ ಅಭಿನಯಿಸುತ್ತಿರುವುದು ಈ ಚಿತ್ರದ ವಿಶೇಷ. (ಏಜೆನ್ಸೀಸ್)

  English summary
  Actress Nikita Thukral all set to do item number in Kannada film Pora. has been completed by 90 percent of the shooting. The director cum hero of the film Amogh alias Janardhan plays a lead role in the film with Vyalari. Dr Girish Karnad playing Home Minister role in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X